ಗೋಣಿಕೊಪ್ಪಲು, ಅ. ೨೮: ಗೋಣಿಕೊಪ್ಪ - ವೀರಾಜಪೇಟೆ ಮುಖ್ಯ ರಸ್ತೆಯ ಕಾವೇರಿ ಕಾಲೇಜು ಬಳಿ ಮುಂಜಾನೆ ಕಾರು ಹಾಗೂ ಜಿಪ್ಸಿ ವಾಹನಗಳ ನಡುವೆ ಅಪಘಾತವಾಗಿದ್ದು, ಅದೃಷ್ಟಾವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಸಮೀಪದ ಅರುವತ್ತೋಕ್ಲು ಗ್ರಾಮದ ರೀತಾರವರು ಕಾರಿನಲ್ಲಿ ತಮ್ಮ ಮಕ್ಕಳನ್ನು ಕಾಲೇಜು ಬಳಿಯ ಖಾಸಗಿ ಶಾಲೆಗೆ ಕರೆತರುತ್ತಿದ್ದ ವೇಳೆ ಹಿಂಬದಿಯಿAದ ನುಗ್ಗಿದ ಜಿಪ್ಸಿ ಕಾರಿಗೆ ಡಿಕ್ಕಿಪಡಿಸಿದೆ. ಇದರಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ವಿದ್ಯಾರ್ಥಿಗಳಿಗೆ ಹಾಗೂ ಕಾರಿನ ಚಾಲಕರು ಅಪಾಯದಿಂದ ಪಾರಾಗಿದ್ದಾರೆ.

ಇತ್ತ ಜಿಪ್ಸಿ ವಾಹನ ಚಾಲಕ ರಸ್ತೆಯ ಬಲಬದಿಯಲ್ಲಿ ಅಳವಡಿಸಿದ್ದ ಜಾಹೀರಾತು ಕಂಬಕ್ಕೆ ಗುದ್ದಿ ನಿಂತಿದೆ. ಈ ವೇಳೆ ಯಾವುದೇ ವಿದ್ಯಾರ್ಥಿಯು ರಸ್ತೆಯಲ್ಲಿ ಸಂಚರಿಸದ ಕಾರಣ ಭಾರೀ ಅನಾಹುತವು ತಪ್ಪಿದಂತಾಗಿದೆ. ಜಿಪ್ಸಿ ಚಾಲಕರಾದ ರಿಸ್ವಾನ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಉಭಯ ಕಡೆಯವರ ದೂರಿನ ಅನ್ವಯ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.