ಮಡಿಕೇರಿ, ಅ. ೨೭: ಮಡಿಕೇರಿ ರೋಟರಿ ಸಂಸ್ಥೆ ಮತ್ತು ಮೈಸೂರು ಏವಿಸ್ ಹಾಸ್ಪಿಟಲ್ಸ್ ವತಿಯಿಂದ ನಗರದಲ್ಲಿ ಉಬ್ಬಿದ ರಕ್ತನಾಳಗಳ ಉಚಿತ ತಪಾಸಣಾ ಶಿಬಿರ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ರೋಟರಿ ಸಂಸ್ಥೆಯ ಅಧ್ಯಕ್ಷ ಎನ್.ಡಿ. ಅಚ್ಚಯ್ಯ, ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಪ್ರಮುಖ ಪಾತ್ರ ವಹಿಸಿದೆ, ಸಾಮಾಜಿಕ ಕಳಕಳಿಯೊಂದಿಗೆ ಆರೋಗ್ಯ ಸಂಬAಧಿ ಚಟುವಟಿಕೆಗಳಿಗೂ ಸಂಸ್ಥೆ ಆದ್ಯತೆ ನೀಡುತ್ತಿದೆ ಎಂದರು.

“ಸಮಾಜ ಸೇವೆಯ ಮೂಲಕ ಬದುಕು ಬದಲಾಯಿಸಿ” ಘೋಷವಾಕ್ಯವನ್ನು ಅರ್ಥಪೂರ್ಣಗೊಳಿಸಬೇಕೆಂದು ತಿಳಿಸಿದರು. ರೋಟರಿ ೩೧೮೧ ರ ಮಾಜಿ ರಾಜ್ಯಪಾಲ ಡಾ. ರವಿ ಅಪ್ಪಾಜಿ ಮಾತನಾಡಿ, ಮುನ್ನೆಚ್ಚರಿಕಾ ಕ್ರಮಗಳ ಮೂಲಕ ಎಲ್ಲರೂ ಆರೋಗ್ಯಕ್ಕೆ ಆದ್ಯತೆ ನೀಡಬೇಕೆಂದು ಕರೆ ನೀಡಿದರು.

ರೋಟರಿ ಕಾರ್ಯದರ್ಶಿ ಲಲಿತಾ ರಾಘವನ್, ಮಾಜಿ ಅಧ್ಯಕ್ಷ ರತನ್ ತಮ್ಮಯ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಏವಿಸ್ ಹಾಸ್ಪಿಟಲ್ಸ್ನ ವೈದ್ಯಕೀಯ ತಂಡ ಉಬ್ಬಿದ ರಕ್ತನಾಳಗಳ ಉಚಿತ ತಪಾಸಣೆ ನಡೆಸಿತು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.