ಸೋಮವಾರಪೇಟೆ, ಅ. ೨೮: ಸಮೀಪದ ಹಾನಗಲ್ಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರದ ವತಿಯಿಂದ ವಿಶೇಷ ಅರಿವು ಕಾರ್ಯಕ್ರಮ ನಡೆಯಿತು.
ಮಕ್ಕಳ ಸಹಾಯವಾಣಿ-೧೦೯೮ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಕೇಂದ್ರದ ಎ.ಎಸ್. ಯೋಗೇಶ್ ಹಾಗೂ ಬಿ.ಕೆ. ಕುಮಾರಿ ಅವರುಗಳು ಮಾಹಿತಿ ಒದಗಿಸಿದರು. ಬಾಲ್ಯ ವಿವಾಹ ತಡೆ ಕಾಯ್ದೆ, ಬಾಲಕಾರ್ಮಿಕ ನಿಯಂತ್ರಣ ಕಾಯ್ದೆ ಬಗ್ಗೆ ನವೀನ್ ಮಾಹಿತಿ ನೀಡಿದರು. ಅಪರಾಧ ವಿಭಾಗದ ಪೊಲೀಸ್ ಠಾಣಾಧಿಕಾರಿ ವಿರೂಪಾಕ್ಷ, ಅಂಗನವಾಡಿ ಕಾರ್ಯಕರ್ತೆ ಶಾರದ ಸೇರಿದಂತೆ ಸಿಬ್ಬಂದಿಗಳು, ಮಕ್ಕಳು, ಪೋಷಕರು ಭಾಗವಹಿಸಿದ್ದರು.