ಗೋಣಿಕೊಪ್ಪ ವರದಿ, ಅ. ೨೫: ಗೋಣಿಕೊಪ್ಪ ಮುಳಿಯದಲ್ಲಿ ಚಿನ್ನೋತ್ಸವಕ್ಕೆ ಸೋಮವಾರ ದೀಪ ಬೆಳಗಿಸಿ ಚಾಲನೆ ನೀಡಲಾಯಿತು. ನಂತರ ಆಂಟಿಕ್ ಕಲೆಕ್ಷನ್, ಯೂತ್ ಕಲೆಕ್ಷನ್, ಜೆಮ್ ಮತ್ತು ಡೈಮಂಡ್, ರಿಯಲ್ ಡೈಮಂಡ್ ಆಭರಣಗಳ ಪ್ರದರ್ಶನ ನಡೆಯಿತು.

ಶಾಖಾ ಪ್ರಬಂಧಕ ಅಶೋಕ್ ಬಂಗೇರ ಮಾತನಾಡಿ, ನವೆಂಬರ್ ೨೮ ರವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯುತ್ತದೆ ಎಂದರು.

ನಿವೃತ್ತ ಪ್ರಾಂಶುಪಾಲ ಇಟ್ಟೀರ ಕಮಲಾಕ್ಷಿ ಬಿದ್ದಪ್ಪ ಮಾತನಾಡಿ, ಚಿನ್ನ ಸಂಗ್ರಹ ಜೀವನದ ಸಂಕಷ್ಟಕ್ಕೂ ಪ್ರಯೋಜನಕ್ಕೆ ಬರುತ್ತದೆ. ಚಿನ್ನ ಕೂಡ ಆರ್ಥಿಕತೆಯ ಒಂದು ಭಾಗವಾಗಿದ್ದು, ಕೇವಲ ಆಭರಣವಾಗಿ ಉಳಿದಿಲ್ಲ. ದೇಶದ ಆರ್ಥಿಕ ವ್ಯವಸ್ಥೆಯಲ್ಲೂ ಚಿನ್ನ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಹಿರಿಯ ವೈದ್ಯ ಡಾ. ಕೆ. ಎನ್. ಚಂದ್ರಶೇಖರ್, ಶಿಕ್ಷಕ ಕಿರಣ್ ನಾಚಪ್ಪ, ಮಾಯಮುಡಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ವಾಣಿ ನಾಚಪ್ಪ, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಇದ್ದರು.