ಮಡಿಕೇರಿ, ಅ. ೨೬: ಯುಎಸ್‌ಎಯ ಸ್ಟಾ÷್ಯನ್‌ಫೋರ್ಡ್ ವಿ.ವಿ. ಮತ್ತು ಎಲ್ಸ್ವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಕಟಿಸಿರುವ ವಿಶ್ವದ ಅತ್ಯುನ್ನತ ಶೇ.೨ ವಿಜ್ಞಾನಿಗಳ ಪಟ್ಟಿಯಲ್ಲಿ ಡಾ. ಜೆ.ಜಿ. ಮಂಜುನಾಥ ಅವರು ಸ್ಥಾನ ಪಡೆದಿದ್ದಾರೆ.

ಮಂಗಳೂರು ವಿ.ವಿಯ ಘಟಕ ಕಾಲೇಜು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿಯಲ್ಲಿನ ರಸಾಯನ ಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಜೆ.ಜಿ. ಮಂಜುನಾಥ್ ಅವರು ೨೦೨೧ರ ಸಾಲಿನ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ೨೪೫೭೪ನೇ ಸ್ಥಾನವನ್ನು ಮತ್ತು ವಿಶ್ವದ ವೃತ್ತಿ ಜೀವಮಾನ ಸಾಧಕರ ಪಟ್ಟಿಯಲ್ಲಿ ೧೯೭೭೪೯ನೇ ಸ್ಥಾನವನ್ನು ಪಡೆದಿರುತ್ತಾರೆ (ಸಂಯೋಜಿತ ಅಂಕಗಳ ಆಧಾರದ ಮೇಲೆ ಶ್ರೇಣಿ).

ಇವರು ಅನಲೈಟಿಕಲ್ ಮತ್ತು ಎನರ್ಜಿ ವಿಷಯಗಳ ಕುರಿತು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಸಾಧನೆಯು ಮಂಗಳೂರು ವಿ.ವಿಗೆ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿಗೆ ಹೆಮ್ಮೆ ತಂದಿದೆ ಎಂದು ವಿ.ವಿಯ ಕುಲಪತಿಯವರು, ಕುಲಸಚಿವರು ಮತ್ತು ಪ್ರಾಂಶುಪಾಲರು ತಿಳಿಸಿದ್ದಾರೆ.