ಗೋಣಿಕೊಪ್ಪಲು, ಅ. ೨೪: ಈ ದೇಶದ ಕಾನೂನು ಸರ್ವರಿಗೂ ಸಮಾನವಕಾಶ ನೀಡಿದೆ, ಇಲ್ಲಿ ದೊಡ್ಡವರು, ಸಣ್ಣವರು ಎಂದು ಬೇಧ ಭಾವವಿಲ್ಲ ಎಂದು ಪೊನ್ನಂಪೇಟೆ ನ್ಯಾಯಾಲಯದ ಅಪರ ಸರ್ಕಾರಿ ವಕೀಲೆ ಕಂಜಿತAಡ ಅನಿತ ಅವರು ಹೇಳಿದರು.

ಗೋಣಿಕೊಪ್ಪಲುವಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸ್ವಾತಂತ್ರೊö್ಯÃತ್ಸವದ ಸುವರ್ಣ ಮಹೋತ್ಸವದ ಅಂಗವಾಗಿ ರಾಷ್ಟಿçÃಯ ಸೇವಾ ಪ್ರಾಧಿಕಾರದಿಂದ ಹಮ್ಮಿಕೊಳ್ಳ ಲಾಗಿದ್ದ ಪರಿಶಿಷ್ಟ ವರ್ಗಗಳ ಕಾರ್ಯಾ ಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಪ್ರತಿ ನಾಗರಿಕನು ಜನಿಸಿದ್ದಲ್ಲಿಂದ ಸಾಯುವ ತನಕ ಕಾನೂನಿನ ವ್ಯಾಪ್ತಿಯೊಳಗೆ ಜೀವನ ಸಾಗಿಸಬೇಕು.

ಕಾನೂನಿನ ತಪ್ಪುಗಳಿಗೆ ಕ್ಷಮೆ ಎಂಬುದು ಇಲ್ಲ. ಕಾನೂನನ್ನು ಅರಿತು ಕೊಂಡು ಇದನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ ರಾಷ್ಟಿçÃಯ ಮಟ್ಟದಿಂದ ತಾಲೂಕು ಮಟ್ಟದ ವರೆಗೂ ಸೇವಾ ಪ್ರಾಧಿಕಾರದಿಂದ ಕಾರ್ಯಾಗಾರಗಳು ನಡೆಯುತ್ತವೆ. ಇದರಲ್ಲಿ ಕಾನೂನಿನ ಅರಿವಿನ ಕೊರತೆ ಇರುವ ಪರಿಶಿಷ್ಟ ವರ್ಗಗಳ ಜನತೆಗೆ ಕಾನೂನಿನ ಅರಿವನ್ನು ಮೂಡಿಸಲು ಪ್ರಾಧಿಕಾರ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಪರಿಶಿಷ್ಟ ವರ್ಗಗಳ ಜನತೆಗೆ ಉಚಿತ ಕಾನೂನಿನ ನೆರವು ಸಿಗಲಿದೆ ಎಂದರು.

ಪರಿಶಿಷ್ಟ ಪಂಗಡದ ಹಲವು ಮಂದಿ ಕಾನೂನಿನ ಅರಿವು ಇಲ್ಲದೆ ಬಾಲ್ಯ ವಿವಾಹಕ್ಕೆ ಗುರಿಯಾಗುತ್ತಿದ್ದಾರೆ. ಇದರಿಂದ ಕಾನೂನಿನ ಶಿಕ್ಷೆ ಅನುಭವಿಸ ಬೇಕಾದ ಪರಿಸ್ಥಿತಿ ನಿರ್ಮಾಣ ವಾಗಲಿದೆ. ಕೊರೊನಾ ಸಂದರ್ಭದಲ್ಲಿ ಈ ರೀತಿಯ ಅನೇಕ ಪ್ರಕರಣಗಳು ವರದಿಯಾಗಿದೆ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಅವಕಾಶ ನೀಡಬಾರದೆಂದರು. ಪರಿಶಿಷ್ಟರಿಗೆ ಕಾನೂನಿನ ಅರಿವು ಸಿಗುವಂತಾಗಲು ಮೂರು ಪಂಗಡಗಳಾಗಿ ವಿಂಗಡಿಸಲಾಗಿದೆ. ಅರಣ್ಯದಲ್ಲಿ ವಾಸವಿರುವವರು, ಕೃಷಿ ಪೂರ್ವ ಚಟುವಟಿಕೆಯಲ್ಲಿ ತೊಡಗಿರುವವರು, ಸಾಕ್ಷರತೆಯಿಂದ ಹಿಂದುಳಿದವರು ಎಂಬುದಾಗಿ ವಿಂಗಡಿಸಲಾಗಿದೆ. ಸ್ವಾತಂತ್ರö್ಯ ಪೂರ್ವದಿಂದಲೂ ಈ ಜನಾಂಗವೂ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಆಗಮಿಸುತ್ತಿರಲಿಲ್ಲ. ಕೇವಲ ಕಾಡಿನಲ್ಲಿಯೇ ಕಾಲಕಳೆ ಯುತ್ತಿದ್ದರು. ಇದೀಗ ಇವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಲು ಅನೇಕ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ಮುದ್ದಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ಪಂಚಾಯಿತಿ ಪಿಡಿಒ ತಿಮ್ಮಯ್ಯ ಈ ವೇಳೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರಾದ ಬಿ.ಎನ್. ಪ್ರಕಾಶ್, ಕೆ. ರಾಜೇಶ್, ಜಿ.ಕೆ. ಗೀತಾ, ಪುಷ್ಪ, ಹಕೀಮ್, ಕೊಣಿಯಂಡ ಬೋಜಮ್ಮ, ಎಂ. ಮಂಜುಳ, ಸೇರಿದಂತೆ ವಿವಿಧ ಸಂಘ-ಸAಸ್ಥೆಯ ಪದಾಧಿಕಾರಿಗಳು ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂಚಾಯಿತಿ ಪಿಡಿಒ ತಿಮ್ಮಯ್ಯ ಸ್ವಾಗತಿಸಿ, ವಂದಿಸಿದರು.