ಕುಶಾಲನಗರ, ಅ. ೨೪: ಕುಶಾಲನಗರ ತಾಲೂಕು ಆಡಳಿತದ ವತಿಯಿಂದ ನ.೧ ರಂದು ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಎಪಿಸಿಎಂಎಸಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ತಾಲೂಕು ತಹಶೀಲ್ದಾರ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸುವ ಜೊತೆಗೆ ರಾಜ್ಯೋತ್ಸವ ಆಚರಣೆ ಬಗ್ಗೆ ವಿವಿಧ ಸಂಘಸAಸ್ಥೆಗಳ ಮುಖಂಡರಿAದ ಸಲಹೆಗಳನ್ನು ಸ್ವೀಕರಿಸಲಾಯಿತು.

ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನ.೧ ರಂದು ಬೆಳಿಗ್ಗೆ ೯.೩೦ ಗಂಟೆಗೆ ತಹಶೀಲ್ದಾರ್ ಧ್ವಜಾರೋಹಣ ನೆರವೇರಿಸುವುದು. ನಂತರ ನಡೆಯುವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸಾಹಿತಿ ಕಣಿವೆ ಭಾರದ್ವಜ್ ಕೆ.ಆನಂದತೀರ್ಥ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.

ಪ್ರಥಮ ಬಾರಿ ಕನ್ನಡ ರಾಜ್ಯೋತ್ಸವ ಆಚರಣೆಯಾಗಿದ್ದು, ಎಲ್ಲ ಸಂಘಸAಸ್ಥೆಗಳ ಸಹಕಾರವನ್ನು ಕೋರಲಾಯಿತು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಮಾಡಿಕೊಂಡು ಪರಸ್ಪರ ಅಂತರ ಕಾಯ್ದು ಕೊಳ್ಳುವಂತೆ ಸಲಹೆ ನೀಡಿದರು ಈ ಸಂದರ್ಭ ಪ.ಪಂ. ಉಪಾಧ್ಯಕ್ಷೆ ಸುರೆಯಾಭಾನು, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಉಪ ತಹಶೀಲ್ದಾರ್ ಮಧು, ಕಂದಾಯ ಅಧಿಕಾರಿ ವಿನೋದ್, ಹರೀಶ್, ವಿವಿಧ ಸಂಘಟನೆಗಳ ಮುಖಂಡರಾದ ಎಂ. ಕೃಷ್ಣ, ನಾಗೇಗೌಡ, ಜಗದೀಶ್, ಅಣ್ಣಯ್ಯ, ಕೆ.ಬಿ. ರಾಜು, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್. ಮಂಜುನಾಥ್, ಜಿ.ಪಂ. ಇಂಜಿನಿಯರ್ ಫಯಾಜ್, ಆರೋಗ್ಯ ನಿರೀಕ್ಷಕ ಉದಯಕುಮಾರ್, ಕಲಾ ಶಿಕ್ಷಕ ಉ.ರಾ. ನಾಗೇಶ್, ಭಾರತಿ, ಉತ್ತಪ್ಪ, ಎಎಸ್‌ಐ ಹೆಚ್.ಕೆ. ಮಂಜುನಾಥ್ ಹಾಗೂ ಸಿಬ್ಬಂದಿಗಳು ಇದ್ದರು.