ಕೂಡಿಗೆ, ಅ. ೨೪: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಶಕ್ತಿ ಕೇಂದ್ರದ ಸಭೆ ಸ್ಥಳೀಯ ಮೂಡ್ಲಿಗೌಡ ಸಭಾಂಗಣದಲ್ಲಿ ಅಧ್ಯಕ್ಷ ಪಾಂಡುರAಗ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಹಿಂದುಳಿದ ವರ್ಗದ ತಾಲೂಕು ಅಧ್ಯಕ್ಷ ಗಂಗಾಧರ್, ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಮತ್ತು ಪ್ರಭಾರಿಯಾಗಿ ಆಗಮಿಸಿದ ಮೋಹನ್, ಓಬಿಸಿ ಮೋರ್ಚಾದ ಪ್ರಮುಖ ರಾದಸುಮೇಶ್, ಪ್ರಶಾಂತ್ ಮತ್ತಿತರ ಪ್ರಮುಖರು ಹಾಜರಿದ್ದು ಸಮಿತಿಯ ರಚನೆಯ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭ ಕೂಡು ಮಂಗಳೂರು ಪಂಚಾಯಿತಿ ವ್ಯಾಪ್ತಿಯ ಶಕ್ತಿ ಕೇಂದ್ರದ ಅಧ್ಯಕ್ಷರು ಗಳಾದ ಮಂಜುನಾಥ್ ಗುರುಲಿಂಗಪ್ಪ, ಪ್ರವೀಣ್ ಕುಮಾರ್, ರಾಜ್ಯ ಎಸ್.ಟಿ. ಮೋರ್ಚಾದ ಕಾರ್ಯದರ್ಶಿ ಕೆ.ಆರ್. ಮಂಜುಳಾ, ಮಂಡಲ ಉಪಾಧ್ಯಕ್ಷ ಕೆ. ವರದ, ಜಿಲ್ಲಾ ಎಸ್.ಸಿ ಮೋರ್ಚಾದ ಉಪಾಧ್ಯಕ್ಷ ಕುಮಾರಸ್ವಾಮಿ, ತಾ.ಪಂ. ಮಾಜಿ ಸದಸ್ಯ ಗಣೇಶ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಂಚೀರ ಮನುನಂಜುAಡ, ಎಸ್ಸಿ ಮೋರ್ಚಾದ ಕಾರ್ಯದರ್ಶಿ ಪದ್ಮಾವತಿ, ಪಂಚಾಯಿತಿ ಮಾಜಿ ಸದಸ್ಯರಾದ ಸಾವಿತ್ರಿ ರಾಜನ್, ಪ್ರಮುಖರಾದ ಕುಂಟಾಣಿ ರಾಜು, ಸಜಿತ್, ರವಿ ಇನ್ನಿತರರು ಉಪಸ್ಥಿತರಿದ್ದರು.