ವೀರಾಜಪೇಟೆ, ಅ. ೨೪: ಕೊಡವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ ಪ್ರಾರಂಭಗೊAಡು ೨ ವರ್ಷಗಳಲ್ಲಿ ೩,೧೭,೨೩೭ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ೨ ವರ್ಷದಿಂದ ಕೋವಿಡ್ ಇದ್ದರು ಕೂಡ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸದಸ್ಯರು ಹಾಗೂ ಸಾರ್ವಜನಿಕರಿಂದ ಒಳ್ಳೆಯ ಸ್ಪಂದನ ದೊರಕಿದೆ ಎಂದು ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಹೇಳಿದರು.

ಪಟ್ಟಣ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ೨೦೧೯ ಸೆಪ್ಟಂಬರ್‌ನಲ್ಲಿ ಪ್ರಾರಂಭಗೊAಡ ಸಂಸ್ಥೆಯಲ್ಲಿ ಒಟ್ಟು ೧೦೭೩ ಸದಸ್ಯರಿದ್ದಾರೆ. ೨೦೨೦-೨೧ ಸಾಲಿನಲ್ಲಿ ೩೯.೭೨ ಲಕ್ಷ ಪಾಲು ಬಂಡವಾಳ ಇದೆ. ವಿವಿಧ ಠೇವಣಿಗಳಿಂದ ೨೭೨.೭೧ ಲಕ್ಷ ಸಂಗ್ರಹವಾಗಿದೆ. ಸದಸ್ಯರಿಗೆ ೧೮೨.೭೨ ಲಕ್ಷ ಸಾಲ ವಿತರಿಸಲಾಗಿದ್ದು ವಿತರಿಸಿದ ಸಾಲ ೩೧.೦೩.೨೦೨೧ ಕ್ಕೆ ಶೇ ೧೦೦ ರಷ್ಟು ವಸೂಲಾತಿ ಆಗಿದೆ. ಕೊಡಗು ಡಿಸಿಸಿ ಬ್ಯಾಂಕ್‌ನಲ್ಲಿ ೧೭೦ ಲಕ್ಷ ಹೂಡಿಕೆ ಮಾಡಲಾಗಿದೆ. ಈ ಸಹಕಾರಿಯು ಸಂಪೂರ್ಣ ಗಣಕೀಕೃತವಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಡಿಪಾಸಿಟ್ ಲಾಕರ್ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಸಂಸ್ಥೆಯಲ್ಲಿ ಪಿಗ್ಮಿ, ಆಭರಣ ಅಡಮಾನ ಸಾಲ ಸೇರಿದಂತೆ ಎಲ್ಲಾ ವಿಧದ ಸಾಲ ಸೌಲಭ್ಯಗಳನ್ನು ಆಧಾರ ದಾಖಲಾತಿಗಳೊಂದಿಗೆ ನೀಡಲಾಗುತ್ತಿದೆ. ಸದಸ್ಯರುಗಳು, ಸಿಬ್ಬಂದಿಗಳು, ಪಿಗ್ಮಿ ಏಜೆಂಟರುಗಳ ಪರಿಶ್ರಮದಿಂದ ಪ್ರಗತಿಯತ್ತ ಸಾಗುತ್ತಿದೆ.

ಕೇವಲ ಕೊಡವ ಸಂಸ್ಥೆ ಹಾಗು ಜನಾಂಗದ ಸದಸ್ಯರಿಗೆ ಮಾತ್ರ ಬ್ಯಾಂಕಿನ ವ್ಯವಹಾರದ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂಬ ಅಪಪ್ರಚಾರ ನಡೆಯುತ್ತಿದೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತಾಗಿದೆ. ನಮ್ಮ ಸಂಸ್ಥೆ ಯಾವುದೇ ಜಾತಿ - ಮತ - ಧರ್ಮ- ಪಂಗಡಕ್ಕೆ ಸೀಮಿತವಾಗಿಲ್ಲ. ಸರ್ಕಾರದ ನೀತಿ ನಿಯಮ ನಿಬಂಧನೆಗಳ ಅನುಸಾರವಾಗಿ ಎಲ್ಲಾ ವರ್ಗದ ಜನಾಂಗದ ಜನರು ವ್ಯವಹರಿಸಬಹುದು. ಆದರೆ ಸದಸ್ಯತ್ವ ಮಾತ್ರ ಕೇವಲ ಕೊಡವ ಜನಾಂಗಕ್ಕೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಚೇಂದAಡ ವಸಂತ್ ಕುಮಾರ್, ನಿರ್ದೇಶಕರುಗಳಾದ ಕಾಂಡAಡ ಚರ್ಮಣ, ನೆಲ್ಲಚಂಡ ಭೀಮಯ್ಯ, ವಾಂಚಿರ ನಾಣಯ್ಯ, ವಾಟೇರಿರ ಪೂವಯ್ಯ, ಪರದಂಡ ಮುತ್ತಣ್ಣ ಸೋಮಣ್ಣ, ಚೇಂದ್ರಿಮಾಡ ನಂಜಪ್ಪ, ಕೇಳಪಂಡ ವಿಶ್ವನಾಥ್, ಕೊಂಗAಡ ನಾಣಯ್ಯ, ಕಾಳೇಂಗಡ ತಿಮ್ಮಯ್ಯ, ಮೇಕೇರಿರ ಪಾಲಿ ಸುಬ್ರಮಣಿ, ಪಟ್ಟಡ ದಿವ್ಯ, ನೆಲ್ಲಮಕ್ಕಡ ಬೆಳ್ಯಪ್ಪ, ಕಾರ್ಯ ನಿರ್ವಹಣಾಧಿಕಾರಿ ಅಕ್ಕಮ್ಮ ಉಪಸ್ಥಿತರಿದ್ದರು.