ಚೆಯ್ಯಂಡಾಣೆ, ಅ. ೨೪: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಘಟಕದ ವತಿಯಿಂದ ಇತ್ತೀಚೆಗೆ ಮೀಲಾದ್ ಸಮಾವೇಶ ವನ್ನು ಅಧ್ಯಕ್ಷ ಅಬೂಬಕ್ಕರ್ ಹಾಜಿ ಕೊಟ್ಟಮುಡಿ ಅಧ್ಯಕ್ಷತೆಯಲ್ಲಿ ದುಬೈಯಲ್ಲಿ ಆಯೋಜಿಸಲಾಗಿತ್ತು.

ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಬದ್ರುಸ್ಸಾದಾತ್ ಸಯ್ಯದ್ ಖಲೀಲ್ ಬುಖಾರಿ ತಂಙ್ಞಳ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಅಲ್ಲದೆ ಸಾಮೂಹಿಕ ಪ್ರಾರ್ಥನೆಯ ಮುಂದಾಳತ್ವ ವಹಿಸಿದ್ದರು. ಕೆಸಿಎಫ್ ಅಂರ‍್ರಾಷ್ಟಿçÃಯ ಸಮಿತಿಯ ಸಾಂತ್ವನ ವಿಭಾಗದ ಚೇರ್ಮನ್ ಅಲಿ ಮುಸ್ಲಿಯಾರ್ ಚೆರಿಯಪರಂಬು (ಬಹರೈನ್) ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯಾ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕ್ಕರೆ, ಸ್ವಾಗತ ಸಮಿತಿ ಚೇರ್ಮನ್ ಉಸ್ಮಾನ್ ಹಾಜಿ ನಾಪೋಕ್ಲು ಮಾತನಾಡಿದರು. ಜನಾಬ್ ಶಾಮ್ ಅಹ್ಮದ್ ನಾಪೋಕ್ಲು, ಮುಝಮ್ಮಿಲ್ ಪಾಲಿಬೆಟ್ಟ, ಶಫೀಲ್ ಕಣ್ಣೂರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕೊಡಗಿನ ಅನಿವಾಸಿಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಫೈಝಲ್ ಸಖಾಫಿ ಕೊಂಡAಗೇರಿ ನೇತೃತ್ವದಲ್ಲಿ ಬುರ್ದಾ ಮತ್ತು ಮೌಲಿದ್ ಪಾರಾಯಣವು ನಡೆದು ಸಮಾರಂಭಕ್ಕೆ ಮೆರುಗನ್ನು ನೀಡಿತು.

ಸಯ್ಯದ್ ಖಲೀಲ್ ಬುಖಾರಿ ತಂಙ್ಞಳ್ ಅವರು ತಮ್ಮ ಉಪನ್ಯಾಸದಲ್ಲಿ ಇಂದು ವಿಶ್ವಾದ್ಯಂತ ಪ್ರವಾದಿ ಕೀರ್ತನೆಗಳು ಗರಿಷ್ಠ ಪ್ರಮಾಣದಲ್ಲಿ ಎಲ್ಲಾ ರಾಷ್ಟçಗಳಲ್ಲಿ ಅಲ್ಲಿನ ಆಡಳಿತದ ಉಪಸ್ಥಿತಿಯಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯವೆಂದರು. ಪ್ರವಾದಿ ಕೀರ್ತನೆಯನ್ನು ಮುಂದುವರಿಸಿದರೆ ಮಾತ್ರ ನಮ್ಮ ಜೀವನದಲ್ಲಿ ವಿಜಯ ಸಾಧ್ಯವೆಂದರು.

ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಶಾಫಿ ಸಹದಿ ತಣ್ಣೀರುಹಳ್ಳ ಅವರು ಮುಖ್ಯ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡು ದಿಕ್ಸೂಚಿ ಭಾಷಣ ಮಾಡಿದರು. ಸ್ವಾಗತ ಸಮಿತಿಯ ಕನ್ವೀನರ್ ರಿಯಾಝ್ ಕೊಂಡAಗೇರಿ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸ್ವಾಗತಿಸಿ, ಶಾಹುಲ್ ಹಮೀದ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು. ಮುಜೀಬ್ ಕಡಂಗ ವಂದಿಸಿದರು.

ಯುಎಇಯಲ್ಲಿರುವ ಕೊಡಗಿನ ೪೫೦ಕ್ಕಿಂತಲೂ ಹೆಚ್ಚು ಅನಿವಾಸಿಗಳು ಭಾಗವಹಿಸಿದ್ದ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗಾಗಿ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಮಾಲೆ ಆಲಾಪನೆ, ಅರಬಿಕ್ ಕೈಬರಹ ಸೇರಿದಂತೆ ಹಲವು ವಿವಿಧ ಸ್ಪರ್ಧೆಗಳು ನಡೆದವು. ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿ ಗಳಿಗೆ ಬಹುಮಾನ ನೀಡಲಾಯಿತು.

ವಿಜೇತರ ವಿವರ

ಪ್ರಬಂಧ - ಪುರುಷರು: ಪ್ರಥಮ ಆಸಿಫ್ ನಾಪೋಕ್ಲು, ದ್ವಿತೀಯ ಅಬ್ದುರಹ್ಮಾನ್ ಕೊಟ್ಟಮುಡಿ. ಪ್ರಬಂಧ - ಮಹಿಳೆಯರು: ಪ್ರಥಮ ರುಬೀನಾ ಸುಹೈಲ್, ದ್ವಿತೀಯ ನೇಹಾ ನಯಾಝ್. ರಸಪ್ರಶ್ನೆ - ಮಹಿಳೆಯರು: ಪ್ರಥಮ ಜುಬೈರಿಯಾ ಶಾಫಿ ಸಖಾಫಿ, ದ್ವಿತೀಯ ವಫಾ ನೌಫಲ್. ಮುಯ್ಯಿದ್ದೀನ್ ಮಾಲಾ ಆಲಾಪನೆ: ಪ್ರಥಮ ಸಹಲಾ ಶಂಸು ಮಕ್ಕಿ, ದ್ವಿತೀಯ ಫರ್ಹಾನಾ ಬಶೀರ್. ಅರೇಬಿಕ್ ಕೈ ಬರಹ - ವಿದ್ಯಾರ್ಥಿನಿಯರು: ಪ್ರಥಮ ನಸ್ರೀನ್ ಉಸ್ಮಾನ್ ನಾಪೋಕ್ಲು, ದ್ವಿತೀಯ ಆಯಿಶತ್ ಆಫಿಯಾ ಹಮೀದ್ ಚಾಮಿಯಾಲ್. ರಸಪ್ರಶ್ನೆ ವಿದ್ಯಾರ್ಥಿನಿಯರು: ಪ್ರಥಮ ಶಮ್ನಾ ಶುಕೂರ್, ದ್ವಿತೀಯ ಹಿಬಾ ನಫಿಶಾ ಹಮೀದ್ ನಾಪೋಕ್ಲು.

- ಅಶ್ರಫ್, ಚೆಯ್ಯಂಡಾಣೆ