ಪ್ರಧಾನಿ ಮನ್ ಕೀ ಬಾತ್
ನವದೆಹಲಿ, ಅ, ೨೪: ಅಕ್ಟೋಬರ್ ತಿಂಗಳು ದಸರಾ ಹಬ್ಬ, ದುರ್ಗಾ ದೇವಿಯನ್ನು ಪೂಜಿಸಿ ಇನ್ನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಿಸಲಿದ್ದೇವೆ. ಈಗಿನಿಂದಲೇ ದೀಪಾವಳಿಗೆ ಹಲವರು ಸಿದ್ಧತೆ ನಡೆಸುತ್ತಿರಬಹುದು. ವಸ್ತುಗಳ ಖರೀದಿಯಲ್ಲಿ ಮುಳುಗಿರಬಹುದು, ದೇಶದ ನಾಗರಿಕರೇ ಈ ಸಂದರ್ಭದಲ್ಲಿ ಒಂದು ವಿಷಯ ನೆನಪಿಟ್ಟುಕೊಳ್ಳಿ, ವಸ್ತುಗಳನ್ನು ಖರೀದಿಸುವಾಗ ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡಿ ಖರೀದಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮನ್ ಕಿ ಬಾತ್‌ನಲ್ಲಿ ಮಾತನಾಡಿದ ಅವರು, ಸ್ಥಳೀಯರಿಂದ ಸ್ಥಳೀಯ ವಸ್ತುಗಳನ್ನು ಖರೀದಿಸಿದರೆ ನಿಮ್ಮ ಹಬ್ಬಗಳು ಕೂಡ ಬೆಳಗುತ್ತದೆ, ಬಡ ಸಹೋದರ-ಸಹೋದರಿಯರ ಮನೆ ಕೂಡ ಬೆಳಗುತ್ತದೆ. ಕಲಾವಿದರು, ನೇಯ್ಗೆಗಾರರು, ಕಸೂತಿಗಾರರಿಗೆ ಸಹಾಯವಾಗುತ್ತದೆ. ನಾವು ಆರಂಭಿಸಿರುವ ಅಭಿಯಾನ ಈ ಹಬ್ಬದ ಸಮಯದಲ್ಲಿ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬ ನಂಬಿಕೆ ನನಗಿದೆ ಎಂದರು.
ಜಮ್ಮುವಿನಲ್ಲಿ ಜನರನ್ನು ಕಡೆಗಣಿಸುವ ಕಾಲ ಮುಗಿದಿದೆ
ಜಮ್ಮು, ಅ. ೨೪: ಕಣಿವೆ ರಾಜ್ಯದಲ್ಲಿ ಹೊಸ ಶಕೆ ಆರಂಭವಾಗಿದ್ದು, ಜಮ್ಮುವಿನಲ್ಲಿ ಜನರನ್ನು ಕಡೆಗಣಿಸುವ ಕಾಲ ಮುಗಿದಿದೆ ಎಂದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ಹಿಂಪಡೆದ ಬಳಿಕ ಮತ್ತು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ನಂತರ ಇದೇ ಮೊದಲ ಬಾರಿಗೆ ಅವರು ಇಲ್ಲಿಗೆ ಭೇಟಿ ನೀಡಿದ್ದಾರೆ. ಇಂದು ಭಗವತಿ ನಗರ್‌ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಜಮ್ಮುವಿನಲ್ಲಿ ಜನರನ್ನು ಕಡೆಗಣಿಸುವ ಕಾಲ ಮುಗಿದಿದ್ದು, ಇದೀಗ ಜಮ್ಮು ಮತ್ತು ಕಾಶ್ಮೀರ ಒಟ್ಟಾಗಿ ಅಭಿವೃದ್ಧಿ ಸಾಧಿಸಲಿವೆ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಯಾರೊಬ್ಬರೂ ತಡೆಯೊಡ್ಡಲಾರರು. ಕೇಂದ್ರಾಡಳಿತ ಪ್ರದೇಶದಲ್ಲಿ ಈಗಾಗಲೇ ರೂ. ೧೨,೦೦೦ ಕೋಟಿ ಹೂಡಿಕೆ ಮಾಡಲಾಗಿದೆ. ೨೦೨೨ರ ಅಂತ್ಯದ ವೇಳೆಗೆ ರೂ. ೫೧,೦೦೦ ಕೋಟಿ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಕಣಿವೆಯಲ್ಲಿ ಗಲಭೆ ಮತ್ತು ಉಗ್ರರ ದಾಳಿಯಿಂದ ಯಾರೊಬ್ಬರ ಜೀವಕ್ಕೂ ಅಪಾಯವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶ. ಯುವಕರು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಕೈ ಜೋಡಿಸಿದರೆ, ಉಗ್ರರ ದುಷ್ಟ ಸಂಚುಗಳು ವಿಫಲವಾಗಲಿವೆ ಎಂದು ಹೇಳಿದರು.
ಕೊರೊನಾ ರೂಪಾಂತರಿ ಪತ್ತೆ
ನವದೆಹಲಿ, ಅ. ೨೪: ಸಾರ್ಸ್ ಸಿಒವಿ೨ ನ ಡೆಲ್ಟಾ ರೂಪಾಂತರಿಯಲ್ಲಿ ಹೊಸ ತಳಿ ಬ್ರಿಟನ್ ಹಾಗೂ ಅಮೇರಿಕಾದಲ್ಲಿ ಪತ್ತೆಯಾಗಿದ್ದು, ಭಾರತದ ಕೋವಿಡ್-೧೯ ಜಿನೋಮಿಕ್ ಕಣ್ಗಾವಲು ಯೋಜನೆ ಹೈ ಅಲರ್ಟ್ನಲ್ಲಿದೆ. ಹೊಸ ರೂಪಾಂತರಿ ವೈರಾಣು ಡೆಲ್ಟಾ ರೂಪಾಂತರಿಗಿAತಲೂ ವೇಗವಾಗಿ ಹರಡಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹೊಸ ರೂಪಾಂತರಿಯನ್ನು ಎ.ವೈ ೪.೨ ಎಂದು ಗುರುತಿಸಲಾಗಿದ್ದು, ಬ್ರಿಟನ್‌ನಲ್ಲಿ ಈ ಹೊಸ ತಳಿಯನ್ನು ‘ವೇರಿಯೆಂಟ್ ಅಂಡರ್ ಇನ್ವೆಸ್ಟಿಗೇಷನ್’ ಎಂದು ಘೋಷಿಸಲಾಗಿದೆ. ಈವರೆಗೂ ಭಾರತದಲ್ಲಿ ಈ ರೂಪಾಂತರಿ ತಳಿಯ ಸೋಂಕು ಪತ್ತೆಯಾಗಿಲ್ಲ. ೬೮,೦೦೦ ಸ್ಯಾಂಪಲ್‌ಗಳನ್ನು ಕೋವಿಡ್-೧೯ ಸೋಂಕಿತರಿAದ ಸಂಗ್ರಹಿಸಲಾಗಿದ್ದು, ಜಿನೋಮ್ ಸೀಕ್ವೆನ್ಸಿಂಗ್‌ಗೆ ಒಳಪಟ್ಟಿದೆ. ಎವೈ.೪.೨ ತಳಿ ಪತ್ತೆಯಾಗಿರುವುದರಿಂದ ಭಾರತದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಅಂರ‍್ರಾಷ್ಟಿçÃಯ ಪ್ರಯಾಣಿಕರಿಂದ ಹೆಚ್ಚು ಮಾದರಿಗಳನ್ನು ಸಂಗ್ರಹಿಸಲಾಗುವುದು ಈ ಮೂಲಕ ಎವೈ ೪.೨ ನಿಂದ ಬರುವ ಸೋಂಕುಗಳ ಪತ್ತೆ ಸಾಧ್ಯತೆಯನ್ನು ತಪ್ಪಿಸುವುದಿಲ್ಲ ಇದರಿಂದ ಸೋಂಕಿತರಾದವರನ್ನು ತ್ವರಿತವಾಗಿ ಗುರುತಿಸಲಾಗುತ್ತದೆ ಎಂದು ಐಎನ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎನ್‌ಸಿಬಿ ಅಧಿಕಾರಿಗಳ ವಿರುದ್ಧ ಆರೋಪ
ಮುಂಬೈ, ಅ. ೨೪: ಮುಂಬೈನ ಅರ್ಥರ್ ರೋಡ್ ಜೈಲಲ್ಲಿ ಬಂಧಿಯಾಗಿರುವ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಪ್ರಕರಣ ತಿರುವು ಪಡೆದುಕೊಂಡಿದೆ. ಪ್ರಭಾಕರ್ ಸೈಲ್ ಎಂಬಾತ ೨೫ ಕೋಟಿ ರೂಪಾಯಿ ವಸೂಲಿ ಪ್ರಕರಣಕ್ಕೆ ಸಂಬAಧಿಸಿದAತೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಲ್ಲದೆ ಎನ್‌ಸಿಬಿ ಅಧಿಕಾರಿಗಳು ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿರುವ ಬಗ್ಗೆಯೂ ಆರೋಪಿಸಿದ್ದಾನೆ. ಆರ್ಯನ್ ಖಾನ್ ಬಂಧಿಯಾಗಿದ್ದ ಫೋಟೋವೊಂದು ವೈರಲ್ ಆಗಿತ್ತು. ಅದುವೇ ಆರ್ಯನ್ ಖಾನ್ ಜೊತೆಗಿನ ಕಿರಣ್ ಗೋಸಾವಿ ಎಂಬಾತನ ಸೆಲ್ಫಿ ಫೋಟೋ. ಸದ್ಯ ಈ ಕಿರಣ್ ಗೋಸಾವಿ ನಾಪತ್ತೆಯಾಗಿದ್ದಾನೆ. ಈತನ ಬಾಡಿಗಾಡ್ ಆಗಿರುವ ಪ್ರಭಾಕರ್ ಸೈಲ್ ಎಂಬಾತ ೨೫ ಕೋಟಿ ರೂಪಾಯಿ ವಸೂಲಿ ಆರೋಪದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಬಾಲಿವುಡ್ ನಟ ಶಾರುಖ್ ಖಾನ್ ಮ್ಯಾನೇಜರ್ ಆಗಿರುವ ಪೂಜಾ ದದ್ಲಾನಿ ಹಾಗೂ ಕಿರಣ್ ಗೋಸಾವಿ ಭೇಟಿಯಾಗಿದ್ದರು. ನೀಲಿ ಬಣ್ಣದ ಮರ್ಸಿಡೀಸ್ ಬೆನ್ಜ್ ಕಾರಿನಲ್ಲಿ ೧೫ ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು ಎಂಬುದರ ಬಗ್ಗೆ ಪ್ರಭಾಕರ್ ಹೇಳಿಕೊಂಡಿದ್ದಾನೆ.
ಐಟಿಬಿಪಿಯ ಸಿಬ್ಬಂದಿಗಳಿಗೆ ಶೌರ್ಯ ಪದಕ ಪ್ರದಾನ
ಲಡಾಖ್, ಅ. ೨೪: ಲಡಾಖ್ ಘರ್ಷಣೆಯಲ್ಲಿ ಹೋರಾಡಿದ್ದ ಐಟಿಬಿಪಿಯ ೨೦ ಸಿಬ್ಬಂದಿಗಳಿಗೆ ಶೌರ್ಯ ಪದಕಗಳನ್ನು ಪ್ರದಾನ ಮಾಡಿ ಗೌರವಿಸಲಾಗಿದೆ. ಮೇ-ಜೂನ್, ೨೦೨೦ ರಲ್ಲಿ ಈಶಾನ್ಯ ಲಡಾಖ್‌ನಲ್ಲಿ ನಡೆದ ಚೀನಾ ಯೋಧರೊಂದಿಗಿನ ಹಿಂಸಾತ್ಮಕ ಸಂಘರ್ಷದಲ್ಲಿ ಐಟಿಬಿಪಿ ಯೋಧರು ತಮ್ಮ ಧೈರ್ಯ ಸಾಹಸಗಳಿಂದ ಚೀನಾ ಯೋಧರು ಹಿಮ್ಮೆಟ್ಟುವಂತೆ ಮಾಡಿದ್ದರು. ಐಟಿಬಿಪಿಯ ೬೦ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಪದಕಗಳನ್ನು ಪ್ರದಾನ ಮಾಡಿದ್ದಾರೆ. ಈ ಪದಕಗಳನ್ನು ಆ. ೧೪ ರಂದು ಸ್ವಾತಂತ್ರö್ಯ ದಿನಾಚರಣೆಯ ದಿನದಂದು ಘೋಷಿಸಲಾಗಿತ್ತು. ವಾಸ್ತವಿಕ ನಿಯಂತ್ರಣ ರೇಖೆಯಾದ್ಯಂತ ೩,೪೮೮ ಕಿ.ಮೀ.ವರೆಗೂ ಗಡಿಯನ್ನು ಕಾಯುವುದಕ್ಕೆ ಕೇಂದ್ರ ಅರೆಸೇನಾಪಡೆಯನ್ನು ನಿಯೋಜಿಸಲಾಗಿದೆ. ೨೦ ಮಂದಿಯ ಪೈಕಿ ೮ ಮಂದಿಗೆ ಜೂ. ೧೫ ರಂದು ಪದಕ ಪ್ರದಾನ ಮಾಡಲಾಗಿತ್ತು ಎಂದು ಐಟಿಬಿಪಿಯ ವಕ್ತಾರರು ತಿಳಿಸಿದ್ದಾರೆ.
ಜಿಕಾ ವೈರಸ್ ಪ್ರಕರಣ
ಕಾನ್ಫುರ, ಅ. ೨೪: ಉತ್ತರ ಪ್ರದೇಶದ ಕಾನ್ಫುರದಲ್ಲಿ ಮೊದಲ ಜಿಕಾ ವೈರಸ್ ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯಾಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಭಾರತೀಯ ವಾಯುಪಡೆಯ ವಾರೆಂಟ್ ಅಧಿಕಾರಿಯೊಬ್ಬರಿಗೆ ಸೋಂಕು ಇರುವುದು ಶನಿವಾರ ಪತ್ತೆಯಾಗಿದೆ. ಇದು ಕಾನ್ಫುರದಲ್ಲಿ ಮೊದಲ ಪ್ರಕರಣವಾಗಿದೆ ಎಂದು ಅವರು ಹೇಳಿದ್ದಾರೆ.
ಕಿತ್ತೂರು ಕರ್ನಾಟಕ - ಸಿ.ಎಂ. ಭರವಸೆ
ಬೆಳಗಾವಿ, ಅ. ೨೪: ಹೈದರಾಬಾದ್-ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕವಾಗಿ ಮರುನಾಮಕರಣ ಮಾಡಿದ ರೀತಿಯಲ್ಲಿಯೇ ಉತ್ತರ ಕರ್ನಾಟಕ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸಬೇಕೆನ್ನುವ ಕೂಗಿಗೆ ಶೀಘ್ರದಲ್ಲಿಯೇ ಸರ್ಕಾರದ ಅಧಿಕೃತ ಮುದ್ರೆ ಬೀಳಲಿದೆ. ಈ ಘೋಷಣೆ ಸಂಬAಧ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಶನಿವಾರ ಭರವಸೆ ನೀಡಿದ್ದಾರೆ.
೧೦೦ ಕೋಟಿ ಡೋಸ್ ಲಸಿಕೆ ಸುಳ್ಳು-ಸಂಜಯ್ ಆರೋಪ
ಮುಂಬೈ, ಅ. ೨೪: ದೇಶದಲ್ಲಿ ಕೋವಿಡ್ -೧೯ ವಿರುದ್ಧ ೧೦೦ ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂಬ ಮೋದಿ ಸರ್ಕಾರದ ಹೇಳಿಕೆಯೇ ಸುಳ್ಳು ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ. ಮಹಾರಾಷ್ಟçದ ನಾಸಿಕ್‌ನಲ್ಲಿ ಶನಿವಾರ ನಡೆದ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾವತ್, ೧೦೦ ಕೋಟಿ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ ಎಂಬುದೇ ಸುಳ್ಳು. ಇದಕ್ಕೆ ತಾವು ಪುರಾವೆ ನೀಡುವುದಾಗಿ ಹೇಳಿದರು. ಈವರೆಗೂ ದೇಶದಲ್ಲಿ ಕೇವಲ ೨೩ ಕೋಟಿ ಜನರಿಗೆ ಮಾತ್ರ ಲಸಿಕೆ ಆಗಿದೆ ಎಂಬ ಮಾಹಿತಿ ಇದೆ. ನರೇಂದ್ರ ಮೋದಿ ಅವರು ಹೇಳುತ್ತಿರುವ ಅಂಕಿ ಅಂಶಗಳು ನಿಜವಾಗಿದ್ದರೆ ಈ ಸಂಭ್ರಮಾಚರಣೆಯಲ್ಲಿ ನಾವು ಭಾಗಿಯಾಗುತ್ತೇವೆ. ಆದರೆ ನನಗೆ ೧೦೦ ಕೋಟಿ ಲಸಿಕೆ ವಿತರಣೆ ಬಗ್ಗೆ ಸಂಶಯವಿದೆ. ದೇಶದಲ್ಲಿ ಕೇವಲ ೩೩ ಕೋಟಿ ಜನರಿಗೆ ಮಾತ್ರ ಲಸಿಕೆ ಆಗಿದೆ ಎಂಬ ಮಾಹಿತಿ ಇದೆ ಎಂದು ಹೇಳಿದ್ದಾರೆ.