ಕಣಿವೆ, ಅ. ೨೪: ಮಳೆಗಾಲದ ಅವಧಿಯಲ್ಲಿ ಕಳೆದ ಮೂರು ವರ್ಷಗಳ ಕಾಲ ಕಾವೇರಿ ನದಿಯಲ್ಲಿ ಪ್ರವಾಹ ಬಂದು ತಗ್ಗು ಪ್ರದೇಶಗಳ ಜನವಸತಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದರಿAದಾಗಿ ತೀವ್ರ ಆತಂಕಕ್ಕೆ ಸಿಲುಕಿರುವ ನಿವಾಸಿಗಳು ನದಿಯ ದಂಡೆಯುದ್ದಕ್ಕೂ ತಡೆಗೋಡೆ ನಿರ್ಮಿಸುವ ಸಂಬAಧ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ನೀರಾವರಿ ನಿಗಮದ ಅಧಿಕಾರಿಗಳನ್ನು ಆಗ್ರಹಿಸಿದರು.
ಕುಶಾಲನಗರದ ಕಾವೇರಿ ಪ್ರವಾಹ ಸಂತ್ರಸ್ತರ ವೇದಿಕೆಯ ಮಂದಿ ಗುರುವಾರ ಕುಶಾಲನಗರದ ಕಾರ್ಯಪಾಲಕ ಅಭಿಯಂತರರ ಕಚೇರಿ ಬಳಿ ಜಮಾಯಿಸಿ ತಮ್ಮ ಅಹವಾಲು ಸಲ್ಲಿಸಿದರು.
ಕಳೆದ ಬಾರಿಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಉಪಸ್ಥಿತರಿದ್ದ ಅಂದಿನ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಕೂಡಲೇ ಕಾವೇರಿ ನದಿ ಪ್ರವಾಹ ತಡೆಯುವ ಸಂಬAಧ ಅಧಿಕಾರಿಗಳು ಸಮೀಕ್ಷೆ ನಡೆಸಿ ಕ್ರಿಯಾಯೋಜನೆ ಸಲ್ಲಿಸಬೇಕೆಂದು ಸಭೆಯಲ್ಲಿದ್ದ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಶಂಕರೇಗೌಡ ಅವರಿಗೆ ನಿರ್ದೇಶನ ನೀಡಿದ್ದರು. ಅದರಂತೆಯೇ ಸಂಸದ ಪ್ರತಾಪ್ ಸಿಂಹ ಅವರು ಕೂಡ ಕೇಂದ್ರದಿAದಲೂ ಸೂಕ್ತ ಅನುದಾನ ಕೊಡಿಸುವುದಾಗಿ ಹೇಳಿದ್ದರು. ಆದರೆ ಸಚಿವರು ನೀಡಿದ ನಿರ್ದೇಶನವನ್ನು ಪಾಲಿಸುವಲ್ಲಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಮತ್ತೆ ಮುಂದಿನ ಆರೇಳು ತಿಂಗಳಲ್ಲಿ ಮಳೆಗಾಲ ಬಂದಾಗ ಅದೇ ಸಮಸ್ಯೆ ಪುನರಾವರ್ತನೆಯಾಗುವ ಅಪಾಯವಿದೆ. ಕೂಡಲೇ ಕುಶಾಲನಗರದಿಂದ ಸರ್ಕಾರಿ ಪಾಲಿಟೆಕ್ನಿಕ್ ಬಳಿಯ ಕಾವೇರಿ ನದಿ ದಂಡೆಯಿAದ ಕಣಿವೆಯವರೆಗೆ ೯ ಕಿ.ಮೀ. ತನಕ ನದಿಯ ಒಂದು ಬದಿಯಲ್ಲಿ ಸೂಕ್ತ ತಡೆಗೋಡೆ ನಿರ್ಮಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ತುರ್ತಾಗಿ ಸಲ್ಲಿಸಬೇಕು ಎಂದು ಪ್ರವಾಹ ಸಂತ್ರಸ್ತರು ಅಧಿಕಾರಿಗಳಲ್ಲಿ ಮನವಿ ಮಾಡಿದರು. ಈ ಸಂದರ್ಭ ಪ್ರಮುಖರಾದ ಕೆ. ವರದ, ದೇವರಾಜೇಗೌಡ, ಬೋಪಯ್ಯ, ಸುಗುಣ ಕುಮಾರ್, ಶಿಲ್ಪ ಶ್ರೀಧರ್, ಚಂದ್ರಕಲಾ, ಅಂಗಮುತ್ತು, ದೇವರಾಜು, ವಿನೋದ್, ದಯಾನಂದ, ಸುಧೀರ್, ನೌಫಲ್ ಮೊದಲಾದವರಿದ್ದರು.