ನಾಪೋಕ್ಲು, ಅ. ೨೪: ಪ್ರಧಾನ ಮಂತ್ರಿಗಳ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಪ್ರತಿ ಗ್ರಾಮಗಳ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಕೇಂದ್ರ ಸರಕಾರದಿಂದ ೧.೩೦ ಕೋಟಿ ಹಣ ಬಿಡುಗಡೆಯಾಗಿದ್ದು, ೨೦೨೪ ರ ಹೊತ್ತಿಗೆ ಗ್ರಾಮದ ಎಲ್ಲಾ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹೋಗಲು ರಸ್ತೆ, ತಡೆಗೋಡೆ ನಿರ್ಮಿಸಲು ಮತ್ತು ಇಂಟರ್‌ಲಾಕ್ ಅಳವಡಿಸುವ ಸುಮಾರು ರೂ. ೧೭ ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು. ಇದರಲ್ಲಿ ಸಂಸದರಿAದ ೩ ಲಕ್ಷ, ವಿಧಾನ ಪರಿಷತ್ ಅನುದಾನ ೫ ಲಕ್ಷ, ವಿಧಾನ ಸಭಾ ಅನುದಾನ ೫ ಲಕ್ಷ ಮತ್ತು ರಸ್ತೆಗೆ ೪ ಲಕ್ಷಗಳ ಅನುದಾನ ಇದೆ ಎಂದರು.

ಪ್ರಧಾನ ಮಂತ್ರಿಗಳ ಜಲಜೀವನ್ ಮಿಷನ್ ಯೋಜನೆಯನ್ವಯ ಕೇಂದ್ರ ಸರಕಾರವು ಶೇ. ೬೦ ರಷ್ಟು ಹಣವನ್ನು ಮತ್ತು ರಾಜ್ಯ ಸರಕಾರ ಶೇ. ೪೦ ರಷ್ಟು ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಶೇ. ೧೫ ರಷ್ಟು ಹಣ ಬಿಡುಗಡೆಯಾಗಬೇಕು. ಈ ಯೋಜನೆಯ ಪಲಾನುಭಾವಿಗಳು ಉಪಯೋಗಿಸುವ ನೀರಿಗೆ ವಾರ್ಷಿಕವಾಗಿ ಸ್ವಲ್ಪ ರೀತಿಯಲ್ಲಿ ಹಣವನ್ನು ಪಾವತಿ ಮಾಡಬೇಕಿದೆ ಎಂದರು.

ಈಗಾಗಲೇ ರಾಜ್ಯ ಸರಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಯ ದುರಸ್ತಿಗೆ ಹಣವನ್ನು ಬಿಡುಗಡೆ ಮಾಡಿದೆ ಎಂದ ಅವರು ನಿರಂತರ ಮಳೆಯಿಂದ ಕಾಮಗಾರಿ ಯನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ. ರಸ್ತೆಗಳು ತೀರಾ ಹದಗೆಟ್ಟಿದ್ದು ನಡೆಯಲಾರದ ಸ್ಥಿತಿಗೆ ತಲುಪಿದ್ದು ಮಳೆ ನಿಂತ ಕೂಡಲೇ ಕಾಮಗಾರಿ ಯನ್ನು ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ಜನರ ಸಹಕಾರ ಮುಖ್ಯ ಎಂದರು. ಈಗಾಗಲೇ ಕೃಷಿ ಪತ್ತಿನ ಸಹಕಾರ ಸಂಘದ ಹಿಂಬದಿಯಲ್ಲಿ ತಡೆಗೋಡೆ ಯನ್ನು ರೂ. ೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದ ಅವರು, ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದರು. ಅಲ್ಲದೆ ಇಗ್ಗುತ್ತಪ್ಪ ದೇವಾಲದ ರಸ್ತೆಯನ್ನು ಮುಂದಿನ ದಿನಗಳಲ್ಲಿ ಅಗಲೀಕರಣ ಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕರು ಈಗಾಗಲೇ ಕೃಷಿ ಪತ್ತಿನ ಸಹಕಾರ ಸಂಘದ ಹಿಂಬದಿಯಲ್ಲಿನ ತಡೆಗೋಡೆ ನಿರ್ಮಿಸಲು ರೂ. ೫೦ ಲಕ್ಷ ಅನುದಾನ ನೀಡಿದ್ದಾರೆ. ಅದರಂತೆ ಈಗಾಗಲೇ ಸುಮಾರು ರೂ. ೧೭ ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆಯನ್ನು ನಿರ್ಮಿಸಲು ಹಣವನ್ನು ಮಂಜೂರು ಮಾಡಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ನ, ಉಪಾಧ್ಯಕ್ಷೆ ರಸೀನಾ, ಸದಸ್ಯರಾದ ಶೈಲಾ ಕುಟ್ಟಪ್ಪ, ಇಂದಿರಾ, ಹರೀಶ್, ಸಫೀಯಾ, ತಾಲೂಕು ಪಂಚಾಯಿತಿ ಮÁಜಿ ಉಪಾಧ್ಯಕ್ಷ ಬೊಳಿಯಾಡೀರ ಸಂತು ಸುಬ್ರಮಣಿ, ಪಾಂಡAಡ ನರೇಶ್, ಕಲಿಯಂಡ ಸುನಂದ, ಮುಕ್ಕಾಟಿ ರಮೇಶ್, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಡಕಡ ಬೆಳ್ಯಪ್ಪ, ನಿರ್ದೇಶಕರಾದ ಅಲ್ಲಾರಂಡ ಸನ್ನು ಅಯ್ಯಪ್ಪ, ನಿಡುಮಂಡ ಹರೀಶ್ ಪೂವಯ್ಯ, ಕಲಿಯಂಡ ಬೋಪಣ್ಣ, ಎ.ಎನ್. ಲಕ್ಷö್ಮಣ, ಪರದಂಡ ಪ್ರಮೀಳಾ, ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಮಂಜುಳ ಹಾಗೂ ಇತರರು ಇದ್ದರು.

- ದುಗ್ಗಳ