ಸೋಮವಾರಪೇಟೆ, ಅ.೨೪: ಇಲ್ಲಿನ ಜೇಸಿಐ ಸಂಸ್ಥೆಯ ವತಿಯಿಂದ ತಾ. ೨೬ರಿಂದ ೩೧ರ ವರೆಗೆ ಸ್ಥಳೀಯ ನಂಜಮ್ಮ ಸಮುದಾಯ ಭವನದಲ್ಲಿ ಜೇಸೀ ಸಪ್ತಾಹ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಮಾಯಾ ಗಿರೀಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ.೨೬ರಂದು ಸಂಜೆ ೬.೩೦ಗಂಟೆಗೆ ಸಪ್ತಾಹಕ್ಕೆ ಚಾಲನೆ ನೀಡಲಾಗುವುದು. ಅಂದು ಯುಕೆಜಿ ಮತ್ತು ೧ ರಿಂದ ೪ನೇ ತರಗತಿಯ ವಿದ್ಯಾರ್ಥಿಗಳಿಗೆ ಎರಡು ವಿಭಾಗದಲ್ಲಿ ಛದ್ಮವೇಷ ಸ್ಪರ್ಧೆ ನಡೆಯಲಿದೆ ಎಂದರು.

ತಾ.೨೭ರAದು ೪ ರಿಂದ ೭, ೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳು, ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಚೆಸ್ ಸ್ಪರ್ಧೆ ನಡೆಯಲಿದೆ. ಸಂಜೆ ೭ಕ್ಕೆ ಜೇಸಿರೇಟ್ಸ್ ಪ್ರಾಯೋಜಕತ್ವದಲ್ಲಿ ಮಹಿಳೆಯರಿಗೆ ಅದೃಷ್ಟದ ಕಣ್ಮಣಿ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ತಾ. ೨೮ರಂದು ಬೆಳಿಗ್ಗೆ ೧೦ಕ್ಕೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಹಾಗೂ ಬರವಣಿಗೆ ಸ್ಪರ್ಧೆ, ಸಂಜೆ ೬ಕ್ಕೆ ಗ್ರೂಪ್ ಡ್ಯಾನ್ಸ್ ಸ್ಪರ್ಧೆ ನಡೆಯಲಿದೆ. ಗ್ರೂಪ್‌ನಲ್ಲಿ ಕನಿಷ್ಟ ೪ ಹಾಗೂ ಗರಿಷ್ಠ ೮ ಮಂದಿಗೆ ಮಾತ್ರ ಅವಕಾಶ ಇರುವುದಾಗಿ ತಿಳಿಸಿದರು.

ತಾ.೨೯ ರಂದು ಬೆಳಿಗ್ಗೆ ೧೦ ಗಂಟೆಗೆ ಮಹಿಳೆಯರಿಗೆ ಹೇರ್ ಸ್ಟೆöÊಲ್ ಸ್ಪರ್ಧೆ, ಸಂಜೆ ೬.೩೦ರಿಂದ ಮನೋಹರ್ ಮತ್ತು ತಂಡದವರಿAದ ಲಹರಿ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯುವುದು. ತಾ.೩೦ ರಂದು ಬೆಳಿಗ್ಗೆ ೧೦ಕ್ಕೆ ಜೂನಿಯರ್ ಕಾಲೇಜು ಆವರಣದಲ್ಲಿ ಸೈಕಲ್ ಮತ್ತು ಮೋಟಾರ್ ಸೈಕಲ್ ಚಾಲಿಸುವ ಸ್ಪರ್ಧೆ ಹಾಗೂ ನಾಲ್ಕು ಚಕ್ರಗಳ ವಾಹನಗಳಿಗೆ ಹಿಂದಕ್ಕೆ ಚಲಿಸುವ ಸ್ಪರ್ಧೆ ನಡೆಯಲಿದೆ. ಸಂಜೆ ಮೂರು ವಿಭಾಗಗಳಲ್ಲಿ ಸೋಲೋ ನೃತ್ಯ ಸ್ಪರ್ಧೆ ಆಯೋಜಿಸಿದ್ದು, ಇದರಲ್ಲಿ ಹತ್ತು ಸ್ಪರ್ಧಾಳುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.

ತಾ. ೩೧ ರಂದು ಸಂಜೆ ೬.೩೦ಕ್ಕೆ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ತಂಡಗಳನ್ನು ನೋಂದಾಯಿಸಿಕೊಳ್ಳಲು ಮೊ.೯೪೪೮೪೩೩೩೧೬ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಜೇಸಿರೇಟ್ ಅಧ್ಯಕ್ಷೆ ಪವಿತ್ರ ಲಕ್ಷಿö್ಮÃಕುಮಾರ್, ಕಾರ್ಯದರ್ಶಿ ಉಷಾ ಪ್ರಕಾಶ್, ನಿಕಟಪೂರ್ವ ಅಧ್ಯಕ್ಷೆ ಉಷಾರಾಣಿ ಗುರುಪ್ರಸಾದ್, ವಿದ್ಯಾ ಸೋಮೇಶ್ ಉಪಸ್ಥಿತರಿದ್ದರು.