* ಸಿದ್ದಾಪುರ, ಅ. ೨೫: ಸ್ನೇಹಿತರೊಂದಿಗೆ ಗೋವಾಕ್ಕೆ ಪ್ರವಾಸ ತೆರಳಿದ್ದ ಜಿಲ್ಲೆಯ ಯುವಕನೋರ್ವ ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಮಡಿಕೇರಿ ತಾಲೂಕಿನ ಅರುವತ್ತೋಕ್ಲು ನಿವಾಸಿ, ಕೋಳುಮಾಡಂಡ ಉಷಾ ಉತ್ತಪ್ಪ ಅವರ ಪುತ್ರ ವರುಣ್ ಉತ್ತಯ್ಯ (೨೧) ಮೃತಪಟ್ಟ ದುರ್ದೈವಿ.

ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ಬಿಸಿನೆಸ್ ಹೊಟೇಲ್ ಮ್ಯಾನೇಜ್‌ಮೆಂಟ್ ಅಂತಿಮ ವರ್ಷ ವಿದ್ಯಾರ್ಥಿಯಾಗಿದ್ದ ವರುಣ್ ವಾರದ ಹಿಂದೆಯಷ್ಟೇ ಪದವಿ ಪೂರೈಸಿದ್ದಾನೆ. ಈತನ ಸಹಪಾಠಿಗಳೆಲ್ಲರೂ ತನ್ನ ಮನೆಗಳಿಗೆ ಮರಳಿದ್ದರೆ, ಈತ ಹಾಗೂ ಕೇರಳದ ಇತರ ಸ್ನೇಹಿತರೊಡಗೂಡಿ ಒಟ್ಟು ೮ ಮಂದಿ ಗೋವಾಕ್ಕೆ ಪ್ರವಾಸ ತೆರಳಿದ್ದಾರೆ. ಅಲ್ಲೇ ಉಳಿದುಕೊಂಡಿದ್ದ ವರುಣ್ ನಿನ್ನೆ ಸಂಜೆ ೭ ಗಂಟೆ ವೇಳೆಗೆ ಸ್ನೇಹಿತರಿಗೆ ಕರೆ ಮಾಡಿ ತಾನೀಗ ಗೋವಾದಲ್ಲಿದ್ದು, ನೀವೆಲ್ಲರೂ ಬಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ಸಂತಸ ಹಂಚಿಕೊAಡಿದ್ದಾನೆ. ಬಳಿಕ ಸ್ನೇಹಿತರೊಂದಿಗೆ ಎಲ್ಲರೂ ಬೀಚ್‌ಗೆ ತೆರಳಿದ್ದಾರೆ. ಬೀಚ್‌ಗೆ ಸಂಜೆ ೬ ಗಂಟೆ ಬಳಿಕ ಪ್ರವೇಶ ನಿಷೇಧವಿದ್ದರೂ ಇವರುಗಳು ಕಾವಲುಗಾರರ ಕಣ್ಣು ತಪ್ಪಿಸಿ ಒಳ ಹೋಗಿದ್ದಾರೆ. ರಾತ್ರಿ

೮ ಗಂಟೆ ವೇಳೆಗೆ ಸಮುದ್ರದ ಅಲೆ ಹೆಚ್ಚಾಗಿ ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ.

ಇಂದು ಶವ ಪತ್ತೆ : ನಿನ್ನೆ ರಾತ್ರಿಯಿಂದಲೇ ಹುಡುಕಾಟ ಆರಂಭಿಸಿದ್ದರೂ ವರುಣ್‌ನ ಪತ್ತೆಯಾಗಿರಲಿಲ್ಲ. ಇಂದು ಹುಡುಕಾಟ

(ಮೊದಲ ಪುಟದಿಂದ) ತೀವ್ರಗೊಳಿಸಿದ ಸಂದರ್ಭ ಮಧ್ಯಾಹ್ನ ವೇಳೆ ಮೃತದೇಹ ಪತ್ತೆಯಾಗಿದೆ. ಬಳಿಕ ಮೃತನ ಪೋಷಕರಿಗೆ ವಿಷಯ ತಿಳಿಸಲಾಗಿದ್ದು, ಪೋಷಕರು ತಲುಪಿದ ನಂತರ ಮರಣೋತ್ತರ ಪರೀಕ್ಷೆ ನಡೆಸುವ ಸಲುವಾಗಿ ಮೃತದೇಹವನ್ನು ಗೋವಾದಲ್ಲಿಯೇ ಇರಿಸಿಕೊಳ್ಳಲಾಗಿದೆ. ಮೃತನ ಪೋಷಕರು ಗೋವಾಕ್ಕೆ ತೆರಳಿರುವದಾಗಿ ತಿಳಿದು ಬಂದಿದೆ.

-ಅAಚೆಮನೆ ಸುಧಿ