*ಗೋಣಿಕೊಪ್ಪ, ಅ. ೨೪: ತಾಯ್ತನ ಸಂದರ್ಭ ರಕ್ತ ಹೀನತೆ ಸಮಸ್ಯೆ ಕಾಡದಂತೆ ಎಚ್ಚರವಹಿಸ ಬೇಕು ಎಂದು ಸರಗೂರು ವಿವೇಕಾ ನಂದ ಸ್ಮಾರಕ ಆಸ್ಪತ್ರೆ ಫಿಸಿಷಿಯನ್ ಡಾ. ವಿಶ್ವೇಶ್ ವಿಷ್ಣುನಾಯಕ್ ಸಲಹೆ ನೀಡಿದರು.
ತಿತಿಮತಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ವತಿಯಿಂದ ಆದಿವಾಸಿ ಗರ್ಭಿಣಿಯರಿಗೆ ಬುಧವಾರ ಆಯೋಜಿಸಿದ್ದ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಯಿ ಮಗುವಿನ ಜೀವ ಉಳಿಸುವಲ್ಲಿ ಆರೋಗ್ಯ ಪೂರಕ ಸಲಹೆ ಪಾಲನೆ ಅಗತ್ಯ. ರಕ್ತ ಹೀನತೆಯಿಂದ ಆದಿವಾಸಿಗಳಲ್ಲಿ ಹೆಚ್ಚು ಸಮಸ್ಯೆ ಎದುರಾಗುತ್ತಿರುವುದು ಸವಾಲಿನ ವಿಚಾರವಾಗಿದೆ. ತರಕಾರಿ, ಹಣ್ಣು ಸೇವನೆಯೊಂದಿಗೆ ವೈದ್ಯರು ನೀಡುವ ಮಾತ್ರೆ ಸೇವನೆಯಿಂದ ಹಿಂದೆ ಸರಿಯಬಾರದು ಎಂದರು ಸಲಹೆ ನೀಡಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಮುದಾಯ ಆಧಾರಿತ ಕಾರ್ಯಕ್ರಮ ವ್ಯವಸ್ಥಾಪಕ ಕೆ. ವೆಂಕಟಸ್ವಾಮಿ ಮಾತನಾಡಿ, ವೀರಾಜಪೇಟೆ ತಾಲೂಕು, ಸರಗೂರು, ಹೆಚ್.ಡಿ. ಕೋಟೆ ವ್ಯಾಪ್ತಿಯ ಆದಿವಾಸಿಗಳಲ್ಲಿ ಆರೋಗ್ಯ ರಕ್ಷಣೆ ಬಗ್ಗೆ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದ ತಾಯಿ-ಮಗುವಿನ ರಕ್ಷಣೆಗೂ ಸಹಕಾರಿಯಾಗುತ್ತಿದೆ ಎಂದರು. ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಕೆ. ಆಶಾ ಮಾತನಾಡಿ, ಸರ್ಕಾರದ ಯೋಜನೆ ಅನುಕೂಲ ಪಡಿಸಿಕೊಳ್ಳಲು ಗಿರಿಜನ ಗರ್ಭಿಣಿಯರು ಮನಸ್ಸು ಮಾಡಬೇಕಿದೆ. ಮಾತ್ರೆ ಸೇವನೆ ಕಡೆಗಣನೆ ಸಲ್ಲದು ಎಂದರು. ೨ ಗರ್ಭಿಣಿಯರಿಗೆ ಅರಿಶಿನ, ಕುಂಕುಮ, ಹಣ್ಣು, ತರಕಾರಿ, ಸೀರೆ ವಿತರಣೆ ಮಾಡಲಾಯಿತು. ಆರೋಗ್ಯ ಕಾರ್ಯಕರ್ತರ ಸಲಹೆ ಪಾಲಿಸಿರುವ ಕಾಮುಣಿ, ನೇತ್ರ, ಸಿಂಧು, ಶಿಲ್ಪ, ಗಂಗೆ, ಶೋಭಾ ಅವರುಗಳಿಗೆ ಸುಮನ್ ಚಾಂಪಿಯನ್ ಗೌರವ ನೀಡಲಾಯಿತು.
ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ತಿತಿಮತಿ ಸಂಶೋಧನಾ ಉಪ ವಲಯ ಅಧಿಕಾರಿ ಮಂಜುನಾಥ ಕಾರಜನಗಿ, ಅಂಗನವಾಡಿ ಕಾರ್ಯಕರ್ತೆ ಅಶ್ವಿನಿ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂತಾನೋತ್ಪತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ ವ್ಯವಸ್ಥಾಪಕಿ ಕುಸುಮ, ಸಂಯೋಜಕ ಬಸಪ್ಪ ಯಾದವಾಡ, ಮೇಲ್ವಿಚಾರಕರಾದ ಸೆಲಿನ ಡಿಸೋಜ, ಶಾಲಿನಿ, ಕೃಷಿ, ಗಾಯಿತ್ರಿ, ವೆಂಕಟೇಶ್, ಮನು, ಶ್ರುತೇಶ್, ತನೇಶ್, ಅನಿಲ್ಕುಮಾರ್, ಗೌತಮ್, ರಕ್ಷಿತ್ ಇದ್ದರು.