ಕಣಿವೆ, ಅ. ೨೩: ರಾಷ್ಟçಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ಕೊಡಗಿನ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ನಂದಿನಿ ಸಿ.ವಿ. ಆಯ್ಕೆಯಾಗಿದ್ದಾರೆ.

ನಂಜರಾಯಪಟ್ಟಣದ ವಾಸು ಸಿ.ಎಂ ಹಾಗೂ ಪುಷ್ಪಾವತಿ ದಂಪತಿ ಪುತ್ರಿ ರಾಷ್ಟçಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇವರು ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಪಿ.ಎಡ್. ವ್ಯಾಸಂಗ ಮಾಡುತ್ತಿದ್ದಾರೆ.

ಹರಿಯಾಣ ರಾಜ್ಯದಲ್ಲಿ ನಡೆಯಲಿರುವ ಈ ಕ್ರೀಡಾಕೂಟವು, ಇದೇ ತಾ. ೨೯ ರಿಂದ ೩೧ ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.