ಗೋಣಿಕೊಪ್ಪ ವರದಿ, ಅ. ೨೩ ; ಮಹಿಳಾ ಸಂಘಟನೆಯಿAದ ಸಂಸ್ಕೃತಿ, ಆಚಾರ-ವಿಚಾರದ ಪಾಲನೆ ಸಾಧ್ಯ ಎಂದು ಹಿರಿಯರಾದ ಚಿಲ್ಲಚಮ್ಮಂಡ ರೂಪ ಉಮೇಶ್ ಅಭಿಪ್ರಾಯಪಟ್ಟರು.
ಅಖಿಲ ಅಮ್ಮಕೊಡವ ಸಮಾಜ ಸಭಾಂಗಣದಲ್ಲಿ ಕಾವೇರಿ ಅಮ್ಮಕೊಡವ ಮಹಿಳಾ ಸಂಘದಿAದ ಆಯೋಜಿಸಿದ್ದ ಕಾವೇರಿ ತೀರ್ಥಪೂಜೆ ಕಾರ್ಯಕ್ರಮ ದಲ್ಲಿ ಲೇಖಕಿ ಚಮ್ಮಣಮಾಡ ವಾಣಿ ರಾಘವೇಂದ್ರ ಅವರ ಕೊಡವ, ಕನ್ನಡ, ಇಂಗ್ಲೀಷ್ ಅರ್ಥಕೋಶ ಬಿಡುಗಡೆಗೊಳಿಸಿ ಮಾತನಾಡಿದರು.
ಮನೆಯಿಂದ ಸಂಸ್ಕೃತಿ ಹೊರಬರಬೇಕಿದ್ದು, ಮಹಿಳೆಯರು ಸಂಘಟನಾತ್ಮಕವಾಗಿ ತೊಡಗಿ ಕೊಂಡಾಗ ಮಾತ್ರ ಸಾಧ್ಯ. ಹೆಣ್ಣಿಗೆ ತಾಯಿ ಸ್ಥಾನ ಇರುವುದರಿಂದ ಉತ್ತಮ ಸಮಾಜ ನಿರ್ಮಿಸಲು ಕೂಡ ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಸಂಸ್ಕೃತಿ ಪೋಷಣೆಗೆ ಸಂಘಟನೆ ಮೂಲಕ ಹೋರಾಟಕ್ಕೆ ಮುಂದಾಗಬೇಕಿದೆ. ಯುವಪೀಳಿಗೆ ಕೂಡ ಇಂತಹ ಕಾರ್ಯವನ್ನು ಅನುಕರಣೆ ಮಾಡಲು ಮುಂದಾಗಬೇಕು ಎಂದರು.
ಹಿರಿಯರಾದ ಚೊಟ್ಟೋಳಿಯ ಮ್ಮಂಡ ರಾಣಿ ಮೋಹನ್ ಮಾತನಾಡಿ, ಅಮ್ಮಕೊಡವರು ಶೈಕ್ಷಣಿಕವಾಗಿ ಹೆಚ್ಚು ಅಭಿವೃದ್ದಿ ಸಾಧಿಸಿದ್ದಾರೆ. ಜನಾಂಗದ ಪೋಷಣೆಗೂ ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.
ಕಾವೇರಿ ಅಮ್ಮಕೊಡವ ಮಹಿಳಾ ಸಂಘದ ಅಧ್ಯಕ್ಷೆ ಅಮ್ಮತ್ತಿರ ರೇವತಿ ಪರಮೇಶ್ವರ ಮಾತನಾಡಿ, ಎಲ್ಲ ಕ್ಷೇತ್ರದಲ್ಲೂ ಅಮ್ಮಕೊಡವರ ಅಭಿವೃದ್ಧಿ ಮೆಚ್ಚುವಂತದ್ದು. ಇದು ಮುಂದುವರಿಯಬೇಕಾದರೆ, ಮಹಿಳೆಯರು ಒಗ್ಗಟ್ಟಿನ ಮೂಲಕ ಜನಾಂಗಕ್ಕೆ ಕಾಣಿಕೆ ನೀಡಬೇಕಿದೆ. ನಮ್ಮ ದೇವರ ಸ್ಥಾನಕ್ಕೂ ಕೂಡ ಮಹತ್ವ ನೀಡಬೇಕು. ಈಶ್ವರ ಇಗ್ಗುತ್ತಪ್ಪ ಸನ್ನಿಧಾನದಲ್ಲಿ ಅಮ್ಮಕೊಡವರು ಹೆಚ್ಚಾಗಿ ಪಾಲ್ಗೊಳ್ಳುವಂತಾಗಬೇಕು ಎಂದರು.
ತೀರ್ಥಪೂಜೆ ಸಂದರ್ಭ ಕಾವೇರಿ ಮಾತೆಯನ್ನು ಹಾಡು, ಜನಪದ ಮೂಲಕ ಪ್ರಾರ್ಥಿಸಲಾಯಿತು. ಕೊಡವ ಭಾಷೆಯ ಹಾಡಿಗೆ ಮಹಿಳೆಯರು ಧ್ವನಿಗೂಡಿಸಿದರು. ಕುಂಕುಮ, ಬಳೆ ನೀಡಿ ಮಹಿಳೆಯರಿಗೆ ಗೌರವ ನೀಡಲಾಯಿತು. ಕಾವೇರಿ ಮಾತೆಗೆ ಆರತಿ, ಪೂಜೆ ನೆರವೇರಿಸಲಾಯಿತು. ಕೊಡವ ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸಿದರು. ಕಾರ್ಯದರ್ಶಿ ಮನ್ನಕಮನೆ ಅಶ್ವಿನಿ ನಂದ ಸ್ವಾಗತಿಸಿದರು. ಆರತಿ ಸುರೇಶ್ ವಂದಿಸಿದರು.