ಮಡಿಕೇರಿ, ಅ. ೨೩: ಅಂಗನವಾಡಿಯಲ್ಲಿ ಮಕ್ಕಳಿಗಾಗಿ ವಿತರಿಸುವ ಅಕ್ಕಿಯಲ್ಲಿ ಅಪಾಯಕಾರಿ ಕಲಬೆರಕೆ ಕಂಡುಬAದಿದೆ.

ಅAದಗೋವೆಯ ದಾಸಂಡ ಸುಜು ಬೋಪಣ್ಣ ಎಂಬವರು ಕೊಡಗರಹಳ್ಳಿ ಕಲ್ಲುಕೋರೆ ಅಂಗನವಾಡಿಯಿAದ ಮಗುವಿಗೆ ಪಡೆದುಕೊಂಡ ಮೂರು ಕೆಜಿ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಥವಾ ರಬ್ಬರಿನಿಂದ ತಯಾರಿಸಿದಂತಹ ಅಕ್ಕಿಯನ್ನು ಮಿಶ್ರಮಾಡಿ ವಿತರಿಸಲಾಗಿದೆ.

ಬೋಪಣ್ಣ ಅವರು ಅಕ್ಕಿಯನ್ನು ಬಳಸಿ ಕಡುಂಬುಟ್ಟು ಮಾಡಲು ತಯಾರಿ ಮಾಡಿದ್ದಾರೆ. ಅಕ್ಕಿಯನ್ನು ನೀರಿಗೆ ಹಾಕಿ ಒಣ ಹಾಕುವಾಗಲೇ ಕಲಬೆರಕೆ ಅಕ್ಕಿ ರಬ್ಬರಿನಂತೆ ಉಬ್ಬಿ ಪತ್ಯೇಕವಾಗಿದೆ. ಬಳಿಕ ರುಬ್ಬಲು ಮಿಕ್ಸಿಗೆ ಹಾಕಿದರೆ - ಕಲಬೆರಕೆ ಅಕ್ಕಿ ಪುಡಿಯಾಗುವುದೇ ಇಲ್ಲ. ಇದನ್ನು ಬಾಯಿಗೆ ಹಾಕಿ ಜಗಿದರೆ ಅದು ಕರಗುವುದೇ ಇಲ್ಲ.

ಇಂತಹ ಅಪಾಯಕಾರಿ ಅಕ್ಕಿಯನ್ನು ವಿತರಿಸುವ ಜಾಲವನ್ನು ಪರಿಶೀಲಿಸದೆ ಸರಬರಾಜು ಮಾಡುವ ಏಜೆಂಟರು - ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿ ಅಪಾಯಕ್ಕೆ ತುತ್ತಾಗುವ ಮಕ್ಕಳನ್ನು ರಕ್ಷಿಸಬೇಕಿದೆ. -ಅನಂತ್