ಗುಡ್ಡೆಹೊಸೂರು, ಅ. ೨೨: ದೇಶದಲ್ಲಿ ೧೦೦ ಕೋಟಿ ಡೋಸ್ಗಳ ಲಸಿಕೆ ಹಂಚಿಕೆ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಗುಡ್ಡೆಹೊಸೂರಿನ ಶಾಲಾ ಆವರಣದ ಲಸಿಕಾ ಕೇಂದ್ರದಲ್ಲಿ ಬಿ.ಜೆ.ಪಿ. ಶಕ್ತಿ ಕೇಂದ್ರದ ವತಿಯಿಂದ ಭೋಜನದ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭ ಈ ವಿಭಾಗದ ಆರೋಗ್ಯ ಕಾರ್ಯಕರ್ತೆಯರು. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಗುಡ್ಡೆಹೊಸೂರು ಶಕ್ತಿ ಕೇಂದ್ರದ ಅಧ್ಯಕ್ಷ ಕುಡೆಕಲ್ ನಿತ್ಯ, ಮಾದಾಪಟ್ಟಣ ವಿಭಾಗದ ಅಧ್ಯಕ್ಷ ಪ್ರವೀಣ್, ಬೂತ್ ಅಧ್ಯಕ್ಷರಾದ ಎಂ.ಆರ್. ಮಾದಪ್ಪ, ಕುಶಾಲಪ್ಪ (ಕೇಶು) ಕೆ.ಡಿ. ಗಿರೀಶ್ ಮತ್ತು ಶಕ್ತಿ ಕೇಂದ್ರ ವ್ಯಾಪ್ತಿಯ ಒ.ಬಿ.ಸಿ ಮೋರ್ಚಾದ ಅಧ್ಯಕ್ಷರಾದ ಅಂಬಾಡಿ ರವಿ, ನಂದಾಪೂಜಾರಿ, ಗ್ರಾ.ಪಂ. ಅಧ್ಯಕ್ಷೆ ನಂದಿನಿ ಮತ್ತು ಸದಸ್ಯರಾದ ರುಕ್ಮಿಣಿ, ಗಂಗಮ್ಮ, ಸರ್ವಮಂಗಳ ಮುಂತಾದವರು ಹಾಜರಿದ್ದರು.