ಕುಶಾಲನಗರ: ಕುಶಾಲನಗರ ಬಿಜೆಪಿ ಎಸ್‌ಟಿ ಮೋರ್ಚಾ ವತಿಯಿಂದ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭ ಕುಶಾಲನಗರ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್, ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್, ರಾಜ್ಯ ಎಸ್‌ಟಿ ಮೋರ್ಚಾ ಕಾರ್ಯದರ್ಶಿ ಮಂಜುಳಾ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೇಶವ, ಪಟ್ಟಣ ಪಂಚಾಯಿತಿ ಸದಸ್ಯ ಅಮೃತ್ ರಾಜ್, ಪ್ರಮುಖರಾದ ಪುಂಡರೀಕ್ಷಾ, ಶಿವಣ್ಣ, ವೈಶಾಕ್, ಬಾಲಾಜಿ ಉಪಸ್ಥಿತರಿದ್ದರು.ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಖಿಲ ಕೊಡಗು ನಾಯಕರ ಸಂಘದ ವತಿಯಿಂದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.

ಕೂಡುಮಂಗಳೂರು ಅಖಿಲ ಕೊಡಗು ನಾಯಕರ ಸಂಘದ ಕಾರ್ಯದರ್ಶಿ ಕೆ.ಎಸ್. ಮಂಜುನಾಯಕ ಅವರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ ದಿನದ ಮಹತ್ವದ ಬಗ್ಗೆ ಮಾತನಾಡಿದರು.

ಈ ಸಂದರ್ಭ ಕೂಡುಮಂಗಳೂರು ಅಖಿಲ ಕೊಡಗು ನಾಯಕರ ಸಂಘದ ನಿರ್ದೇಶಕ ಕೆ.ಎಸ್. ರಾಜು, ಸ್ವಾಮಿನಾಯಕ, ಎಂ.ಡಿ. ಗಣೇಶ್, ಎಂ.ಸಿ. ರವಿ, ಭಾಗ್ಯ, ಶಿವಣ್ಣ, ಸಂಘದ ಸಲಹೆಗಾರ ಎಂ.ಜೆ. ಕರಿಯಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಶನಿವಾರಸಂತೆ ಲಯನ್ಸ್ ಕ್ಲಬ್

ಶನಿವಾರಸಂತೆ: ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ಕಚೇರಿಯ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ನಾರಾಯಣಸ್ವಾಮಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ಮಹಾಕಾವ್ಯ ರಾಮಾಯಣ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿ ಉಪನ್ಯಾಸಕ ಸೋಮಶೇಖರ್ ಮಾತನಾಡಿ, ಮಹಾಕವಿ ವಾಲ್ಮೀಕಿ ಮಹರ್ಷಿಯಾಗುವ ಮೊದಲು, ಅನೇಕ ಹಂತಗಳನ್ನು ದಾಟಿ ಮಹರ್ಷಿ ಆದನಂತರ ಜ್ಞಾನೋದಯವಾಗಿ, ಮಾಹಕಾವ್ಯ ರಾಮಾಯಣ ಸಂಸ್ಕೃತದಲ್ಲಿ ಪದ್ಯದ ಮುಖಾಂತರ ರಚಿಸಿ ಇಂದಿನ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದಾರೆ ಎಂದರು.

ಖಜಾAಚಿ ಬಿ.ಕೆ. ಚಿಣ್ಣಪ್ಪ ಅವರು ಮಾತನಾಡಿ, ವಾಲ್ಮೀಕಿ ಮಹರ್ಷಿಯ ಹುಟ್ಟು ಹಬ್ಬದ ಕಾರ್ಯಕ್ರಮ ಸರಕಾರಿ ಕಾರ್ಯಕ್ರಮವಲ್ಲದೆ, ಅರೆ ಸರಕಾರಿ, ಖಾಸಗಿ ಸಂಸ್ಥೆಗಳು, ವಿದ್ಯಾಸಂಸ್ಥೆಗಳಲ್ಲಿಯೂ ಸಹ ಆಚರಿಸುವ ಮುಖಾಂತರ ಇಂದಿನ ಸಮಾಜಕ್ಕೆ ಅನುಸರಿಸಬೇಕಾದ ಮಾಹಿತಿಗಳನ್ನು ತಿಳಿಸುವಂತಾಗಿದೆ. ಇವರು ಮೊದಲನೇ ಕವಿಯಾಗಿದ್ದು, ಕವಿಗಳಿಗೆಲ್ಲಾ ಕವಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಅವರು ರಚಿಸಿದ ಈ ಮಹಾಕಾವ್ಯ ದೇಶ ವಿದೇಶಗಳಲ್ಲೂ ಪ್ರಖ್ಯಾತಿ ಪಡೆದು ಕಾವ್ಯದ ವಿಚಾರಗಳನ್ನು ಸಮಾಜದಲ್ಲಿ ಅನುಸರಿಸಲು ಮಾರ್ಗದರ್ಶನವಾಗಿದೆ ಎಂದರು. ಸಭೆಯಲ್ಲಿ ಉಪಾಧ್ಯಕ್ಷ ಕೆ.ಎನ್. ಕಾರ್ಯಪ್ಪ, ಸದಸ್ಯರುಗಳಾದ ಬಿ.ಸಿ. ಧರ್ಮಪ್ಪ, ಎಸ್.ಜಿ. ನರೇಶಚಂದ್ರ, ಅಶೋಕ್ ಇತರರು ಇದ್ದರು. ಬಿ.ಕೆ. ಚಿಣ್ಣಪ್ಪ ಸ್ವಾಗತಿಸಿ, ಕಾರ್ಯಪ್ಪ ವಂದಿಸಿದರು.

ಕೂಡಿಗೆ ಗ್ರಾಮ ಪಂಚಾಯಿತಿ

ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.

ಕಾರ್ಯಕ್ರಮದ ಅಂಗವಾಗಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ಎಂ.ಕೆ. ಆಯಿಷಾ, ಕಂದಾಯ ವಸೂಲಿಗಾರ ಅನಿಲ್, ಜ್ಯೋತಿ, ಕಾವ್ಯ, ಕುಮಾರ್, ಸಿಬ್ಬಂದಿಗಳಾದ ಬಾಪು, ಶಶಿಕುಮಾರ್, ಮಂಜು, ಆನಂದ, ರವಿ, ಮೊದಲಾದವರು ಹಾಜರಿದ್ದರು.

ಕುಶಾಲನಗರ: ಕುಶಾಲನಗರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಕಾರ್ಯಕ್ರಮ ನಡೆಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಉಪಾಧ್ಯಕ್ಷೆ ಸುರಯ್ಯಾ ಬಾನು, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.