ಮಡಿಕೇರಿ, ಅ. ೨೨: ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದಲ್ಲಿ ನಡೆಯುತ್ತಿರುವ ರಾಷ್ಟಿçÃಯ ಜೂನಿಯರ್ ಮತ್ತು ಸಬ್ ಜೂನಿಯರ್ ಈಜು ಚಾಂಪಿಯನ್ ಶಿಪ್‌ನಲ್ಲಿ ಜೂನಿಯರ್ ವಿಭಾಗದಲ್ಲಿ ಜಿಲ್ಲೆಯ ಯುವತಿ ಚೆಪ್ಪುಡೀರ ಲತೀಶಾ ಮಂದಣ್ಣ ಎರಡು ಚಿನ್ನದ ಪದಕಗಳಿಸಿದ್ದಾಳೆ. ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿರುವ ಈಕೆ ರಾಷ್ಟಿçÃಯ ದಾಖಲೆ ಸಹಿತವಾಗಿ ಎರಡು ವಿಭಾಗದಲ್ಲಿ ಪದಕಗಳಿಸಿದ್ದಾಳೆ. ೨೦೧೫ ರಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ಲತೀಶಾ ಖೇಲೋ ಇಂಡಿಯಾ ಅಥ್ಲೆಟಿಕ್ ಕೂಟದಲ್ಲೂ ಭಾಗವಹಿಸಿದ್ದಳು.
ಲತೀಶಾ ತಿತಿಮತಿ ನೊಕ್ಯ ಗ್ರಾಮದ ಚೆಪ್ಪುಡೀರ ಮಂದಣ್ಣ ಹಾಗೂ ಸ್ವೀಟ (ತಾಮನೆ : ಮನೆಯಪಂಡ) ದಂಪತಿಯ ಪುತ್ರಿಯಾಗಿದ್ದು, ಬೆಂಗಳೂರಿನ ಬಿಷಪ್ ಕಾಟನ್ ಬಾಲಕಿಯರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.