ಮಡಿಕೇರಿ, ಅ. ೨೨: ಮೈಸೂರಿನ ವಿವೇಕಾನಂದ ನಗರದಲ್ಲಿರುವ ಭರಣಿ ಆರ್ಟ್ ಗ್ಯಾಲರಿಯಲ್ಲಿ ಹಿರಿಯ ಕಲಾವಿದ ಎನ್.ಬಿ. ಕಾವೇರಪ್ಪ ಅವರ ನೂತನ ಕಲಾಕೃತಿಗಳು ‘ಪೋಸ್ಟ್-ಪ್ಯಾಂಡಮಿಕ್ ಕಲಾ ಪ್ರದರ್ಶನ’ ದಡಿ ಪ್ರದರ್ಶನಗೊಳ್ಳಲಿವೆ.
ಸೃಷ್ಟಿ-೨ ಸರಣಿ ಕಲಾ ಪ್ರದರ್ಶನ ‘ಸಮಕಾಲೀನ ಅಮೂರ್ತಗಳು’ ಧ್ಯೆಯೋದ್ದೇಶದಡಿ ತಾ. ೨೪ ರಂದು ಪ್ರದರ್ಶನ ನಡೆಯಲಿದೆ. ಬೆಂಗಳೂರಿನ ಕ್ರೆöÊಸ್ಟ್ ಯೂನಿವರ್ಸಿಟಿಯ ಸೈಕಾಲಜಿ ಪ್ರೊ. ಡಾ. ಪಿ. ಪ್ರಕಾಶ್ ಉದ್ಘಾಟಿಸುವರು. ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂರು ಪತ್ರಿಕೆಯ ಪ್ರಧಾನ ಸಂಪಾದಕ ಕೆ.ಬಿ. ಗಣಪತಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್,
ಹಿರಿಯ ಕಲಾವಿದ ಎಲ್. ಶಿವಲಿಂಗಪ್ಪ, ಕಲಾವಿದ ಎನ್.ಬಿ. ಕಾವೇರಪ್ಪ ಉಪಸ್ಥಿತರಿರುವರು. ಪ್ರದರ್ಶನ ತಾ. ೨೪ ರಿಂದ ೨೮ ರವರೆಗೆ ಬೆಳಿಗ್ಗೆ ೧೧ ಗಂಟೆಯಿAದ ಸಂಜೆ ೭ ಗಂಟೆವರೆಗೆ ನಡೆಯಲಿದೆ.