ಚೆಯ್ಯಂಡಾಣೆ, ಅ. ೨೨: ಬೆಂಗಳೂರಿನಲ್ಲಿ ವಾಸವಿರುವ ಅನಿರುದ್ ಹಾಗೂ ಬ್ರಿಗೇಡಿಯರ್ ಜಗದೀಶ್ ಸಹೋದರರು ಅವರ ತಾಯಿ ದಿ. ಹೊನ್ನಮ್ಮ ಗೋವಿಂದಯ್ಯ ಅವರು ಓದಿದ ಚೆಯ್ಯಂಡಾಣೆ ಶಾಲೆಗೆ ಅವರ ಜ್ಞಾಪಕಾರ್ಥವಾಗಿ ಕಂಪ್ಯೂಟರ್, ಪ್ರಿಂಟರ್ ಹಾಗೂ ಯುಪಿಎಸ್ ಉಪಕರಣಗಳನ್ನು ಶಾಲೆಗೆ ನೀಡಿದರು.

ಈ ಸಂದರ್ಭ ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಅಚ್ಚಯ್ಯ, ಎಸ್‌ಡಿಎಂಸಿ ಅಧ್ಯಕ್ಷೆ ರತ್ನಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.