ಮಡಿಕೇರಿ, ಅ. ೨೨: ೭೫ನೇ ವರ್ಷದ ಸ್ವಾತಂತ್ರö್ಯ ಮಹೋತ್ಸವ ಪ್ರಯುಕ್ತ ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಹೊರತಂದಿರುವ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ಭಾವಚಿತ್ರವಿರುವ ಅಂಚೆ ಲಕೋಟೆ (ಪೋಸ್ಟಲ್ ಎನ್ವಲಪ್) ಹಾಗೂ ಕೊಡಗಿನ ವಾಣಜ್ಯ ಬೆಳೆ ಏಲಕ್ಕೆ, ಕಿತ್ತಳೆ ಹಾಗೂ ಇತ್ತೀಚಿಗೆ ಗಮನಸೆಳೆದ ಕುರಂಜಿ ಹೂವಿನ ಭಾವಚಿತ್ರವಿರುವ ಲಕೋಟೆಯನ್ನು ನಗರದ ಮಯೂರ ವ್ಯಾಲಿವ್ಯೂ ಸಭಾಂಗಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಕ್ಷಿಣ ಕರ್ನಾಟಕ ವಿಭಾಗದ ಪ್ರಧಾನ ಅಂಚೆ ಅಧೀಕ್ಷಕ ಡಿ.ಎಸ್.ವಿ.ಆರ್. ಮೂರ್ತಿ, ಪ್ರಥಮ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಹೋರಾಡಿದ ಅಪ್ಪಯ್ಯ ಗೌಡರ ಭಾವಚಿತ್ರ ಹೊಂದಿರುವ ಲಕೋಟೆ ಬಿಡುಗಡೆ ಮಾಡಿರುವುದು ಖುಷಿ ತರಿಸಿದೆ. ಲಕೋಟೆಯಲ್ಲಿ ಅಪ್ಪಯ್ಯ ಗೌಡ ಅವರ ಜೀವನ ಚರಿತ್ರೆ ಬಗ್ಗೆ ಮುದ್ರಿಸಲಾಗಿದೆ. ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿದಾಯಕ. ಇದರೊಂದಿಗೆ ವಿಭಿನ್ನ ಆಚಾರ-ವಿಚಾರ ಹೊಂದಿರುವ ಕೊಡಗು ಜಿಲ್ಲೆಯ
(ಮೊದಲ ಪುಟದಿಂದ) ಬೆಳೆಗಳನ್ನು ಲಕೋಟೆ ಮೂಲಕ ಅನಾವರಣ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಲಕೋಟೆ ಬಿಡುಗಡೆಗೊಳಿಸಿದರು. ಉದ್ಯಮಿ ದೇವಮಾನಿ ಮನು ಉತ್ತಪ್ಪ, ಅಂಚೆ ಅಧೀಕ್ಷಕ ಸೋಮಯ್ಯ, ಅಕಾಡೆಮಿ ಸದಸ್ಯರಾದ ಧನಂಜಯ ಅಗೋಳಿಕಜೆ, ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮಾ ರಾಘವಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.