ಮುಂಬೈನಲ್ಲಿ ಭೀಕರ ಅಗ್ನಿ ಅವಘಡ

ಮುಂಬೈ, ಅ. ೨೨: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿ ಪ್ರಮಾದದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸೆಂಟ್ರಲ್ ಮುಂಬೈನ ಮಾಧವ್ ಪಾಲವ್ ಮಾರ್ಗದಲ್ಲಿರುವ ಅವಿಘ್ನ ಪಾರ್ಕ್ ಕಟ್ಟಡದಲ್ಲಿ ಇಂದು ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿತು. ಸುಮಾರು ೬೧ ಅಂತಸ್ತಿನ ಈ ವಸತಿ ಕಟ್ಟಡದ ೧೯ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ವಿಚಾರ ತಿಳಿಯುತ್ತಲೇ ೮ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಇನ್ನು ಅಗ್ನಿ ಪ್ರಮಾದದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು ೩೦ ವರ್ಷದ ಸ್ಥಳೀಯ ನಿವಾಸಿ ಬೆಂಕಿಯಿAದ ತಪ್ಪಿಸಿಕೊಳ್ಳಲು ಬಾಲ್ಕನಿಯಿಂದ ಕೆಳಗೆ ಇಳಿಯಲು ಯತ್ನಿಸಿದ್ದಾರೆ. ಈ ವೇಳೆ ಆಯತಪ್ಪಿ ಅವರು ಕೆಳಗೆ ಬಿದ್ದಿದ್ದು, ಸ್ಥಳದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ತಿಳಿದುಬಂದಿದೆ. ಇನ್ನು ವಸತಿ ಕಟ್ಟಡವಾದ್ದರಿಂದ ಸಾಕಷ್ಟು ಕುಟುಂಬಗಳು ಇಲ್ಲಿ ವಾಸವಾಗಿದ್ದವು. ಹೀಗಾಗಿ ಕಟ್ಟಡದಲ್ಲಿ ಹಲವರು ಸಿಲುಕಿರುವ ಶಂಕೆ ಇದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೂತನ ಮಾದರಿಯಲ್ಲಿ ಡ್ರಗ್ಸ್ ಸಾಗಾಟಕ್ಕೆ ಯತ್ನ

ಬೆಂಗಳೂರು, ಅ. ೨೨: ರಾಜ್ಯದಲ್ಲಿ ಡ್ರಗ್ ಪೆಡ್ಲಿಂಗ್ ಮಾಡಲು ನೂತನ ಮಾದರಿಯೊಂದನ್ನು ಕಂಡುಕೊAಡು ವ್ಯವಸ್ಥಿತವಾಗಿ ಸಾಗಣೆ ಮಾರಾಟ ಮಾಡುತ್ತಿದ್ದ ಬೃಹತ್ ಜಾಲ ಪತ್ತೆಯಾಗಿದೆ. ನಗರದ ಅಪರಾಧ ವಿಭಾಗದ ಪೊಲೀಸರು ಚಾಣಾಕ್ಷತೆಯಿಂದ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಸ್ತುತ ಈ ಪ್ರಕರಣದಲ್ಲಿ ರವಿದಾಸ್, ರವಿ ಪ್ರಕಾಶ್ ಎಂಬ ಇಬ್ಬರು ಆರೋಪಿಗಳ ಬಂಧನವಾಗಿದೆ. ೬೦ ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಪೊಲೀಸರಿಗೆ ಅನುಮಾನ ಬಾರದಿರಲೆಂದು ಇವರು ನೂತನ ಮಾದರಿ ಕಂಡು ಕೊಂಡಿದ್ದರು. ಆಹಾರ ವಿತರಣೆ ಮಾಡುವ ಆ್ಯಪ್‌ಗಳಲ್ಲಿ ಕೆಲಸ ಮಾಡುವ ವಿತರಕರು ಧರಿಸುವ ಮಾದರಿಯ ಉಡುಪುಗಳನ್ನು ಹಾಕಿಕೊಂಡು ದ್ವಿಚಕ್ರ ವಾಹನಗಳಲ್ಲಿ ಮಾದಕ ವಸ್ತು ಸರಬರಾಜು ಮಾಡುತ್ತಿದ್ದರು. ಕೆಲವೊಮ್ಮೆ ಪಾರ್ಸೆಲ್‌ಗಳನ್ನು ಮನೆಗೆ ಬಂದು ತೆಗೆದುಕೊಂಡು ವಿತರಣೆ ಮಾಡುವವರ ಮಾದರಿ ಬಟ್ಟೆ ಧರಿಸಿ ಕಾರ್ಯಾಚರಣೆ ಮಾಡುತ್ತಿದ್ದರು. ನವದೆಹಲಿ ಮತ್ತು ಬೆಂಗಳೂರಿನಲ್ಲಿ ಏಕಕಾಲದಲ್ಲಿ ಈ ಜಾಲ ಮಾದಕ ವಸ್ತು ಸಾಗಣೆಯಲ್ಲಿ ನಿರತವಾಗಿತ್ತು. ಹೊರನೋಟಕ್ಕೆ ಬುಕ್ ರೀತಿ ಕಾಣುವ ಹಾಗೆ ವಿನ್ಯಾಸ ಮಾಡಿ ಅದರಲ್ಲಿ ಮಾದಕ ವಸ್ತುಗಳನ್ನು ಇಟ್ಟು ಸರಬರಾಜು ಮಾಡುತ್ತಿದ್ದರು. ಈ ಮಾದರಿಯ ಪಾರ್ಸೆಲುಗಳನ್ನು ವಕೀಲರ ಹೆಸರಿನಲ್ಲಿ ಸ್ಪೀಡ್ ಪೋಸ್ಟ್ ಮಾಡುತ್ತಿದ್ದರು ಎನ್ನಲಾಗಿದೆ. ಹೊರರಾಜ್ಯಗಳಿಂದ ಬೆಂಗಳೂರಿಗೆ ಬಂದು ಬಹುಯೋಜಿತವಾಗಿ ಕೆಲಸ ಮಾಡುತ್ತಿದ್ದ ಆರೋಪಿಗಳು ಡಾರ್ಕ್ವೆಬ್ ಮೂಲಕವೂ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು. ಸೆಪ್ಟೆಂಬರ್‌ನಲ್ಲಿ ಸಿಟಿ ಕ್ರೆöÊಮ್ ಬ್ರಾಂಚ್ ಪೊಲೀಸರು ಇಬ್ಬರು ಮಾದಕ ವಸ್ತು ಕಳ್ಳ ಸಾಗಾಣೆದಾರರನ್ನು ಬಂಧಿಸಿದ್ದರು. ಇವರು ನೀಡಿದ ಸುಳಿವಿನ ಮೇರೆಗೆ ಕಾರ್ಯಾಚರಣೆ ಕೈಗೊಂಡಾಗ ಬಹಳ ದೊಡ್ಡ ಜಾಲವೇ ಇರುವುದು ಪತ್ತೆಯಾಗಿದೆ. ಬೆಂಗಳೂರು ಪೊಲೀಸರಿಂದ ಬಂಧನಕ್ಕೆ ಒಳಗಾಗಬಾರದೆಂದು ನವದೆಹಲಿಯಲ್ಲಿಯೇ ಕುಳಿತುಕೊಂಡು ಜಾಲದ ಅವ್ಯವಹಾರ ನಡೆಸುತ್ತಿದ್ದರು, ಮಾದಕ ವಸ್ತುಗಳನ್ನು ಸಾಗಣೆ ಮಾಡಲು ಯುವ ವಿತರಕರನ್ನು ನೇಮಿಸಿಕೊಂಡಿದ್ದರು. ಇವರಿಗೆ ಪೋನ್, ಸಿಮ್, ವಸತಿ, ವಾಹನ ನೀಡುತ್ತಿದ್ದರು ಎನ್ನಲಾಗಿದೆ. ಅದಲ್ಲದೆ ಪೆಡ್ಲರ್‌ಗಳು ಹಾಗೂ ಖರೀದಿದಾರರ ನಡುವೆ ಸಂಪರ್ಕಕ್ಕೆ ಪತ್ತೆ ಹಚ್ಚಲು ಅಸಾಧ್ಯವಾಗಿರುವ Wiಛಿಞಡಿ Sessioಟಿ ಂಠಿಠಿ ಬಳಸುತ್ತಿದ್ದರು ಪ್ರಕರಣ ದಾಖಲಿಸಿಕೊಂಡಿರುವ ಸಿಟಿ ಕ್ರೆöÊಮ್ ಬ್ರಾಂಚ್ ಪೊಲೀಸರು ಈ ಜಾಲದ ನಂಟಿರುವ ಇನ್ನೂ ಹಲವರನ್ನು ಬಂಧಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಎಲ್ಲವೂ ಸರಿ ಹೋದಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭ

ಬೆAಗಳೂರು, ಅ. ೨೨: ೧ ರಿಂದ ೫ನೇ ತರಗತಿವರೆಗಿನ ಶಾಲೆ ಆರಂಭ ನೋಡಿಕೊಂಡು, ಧೈರ್ಯ ಬಂದರೆ ಎಲ್‌ಕೆಜಿ, ಯುಕೆಜಿ ಆರಂಭ ಮಾಡುತ್ತೇವೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಶುಕ್ರವಾರ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆ ಆರಂಭಿಸುವ ಎಲ್ಲಾ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಿದ್ದರೂ ಶೇ. ೨೦ ರಷ್ಟು ಇನ್ನೂ ಸಕ್ಸಸ್ ಆಗಿಲ್ಲ, ಅದನ್ನು ಪೂರ್ಣಗೊಳಿಸುತ್ತೇವೆ. ಗ್ರಾಮೀಣ ಭಾಗದಲ್ಲಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಚೆನ್ನಾಗಿದೆ.ತಾವು ಭೇಟಿ ನೀಡಿದ ಎರಡೂ ಶಾಲೆಯಲ್ಲೂ ೫೦೪ ಮಕ್ಕಳ ಹಾಜರಾತಿ ಇತ್ತು. ಉತ್ತಮ ಪ್ರತಿಕ್ರಿಯೆ ಇದೆ. ಶಿಕ್ಷಣ ಇಲಾಖೆಯ ಜೊತೆ ಆರ್‌ಡಿಪಿಆರ್ ಇಲಾಖೆಯ ಸಿಬ್ಬಂದಿಯನ್ನ ಬಳಸಿಕೊಂಡು ಮನೆಮನೆಗೆ ಹೋಗಿ ಮಕ್ಕಳನ್ನ ಕರೆತರುವ ಕೆಲಸ ಮಾಡುತ್ತಿದ್ದೇವೆ. ಬಹಳಷ್ಟು ಮಕ್ಕಳನ್ನು ಶಾಲೆಗೆ ಕರೆತರಲು ಯಶಸ್ವಿಯಾಗಿದ್ದೇವೆ ಎಂದು ಹೇಳಿದ್ದಾರೆ.

ಉದ್ಯೋಗದ ವ್ಯಾಖ್ಯಾನ ಪರಿಷ್ಕರಣೆಗೆ ಕೇಂದ್ರ ನಿರ್ಧಾರ

ಬೆಂಗಳೂರು, ಅ. ೨೨: ಇ-ಕಾಮರ್ಸ್ ಪ್ಲಾಟ್‌ಫಾರ್ಮ್ಗಳಲ್ಲಿ ಕೆಲಸ ಮಾಡುವ ಕೆಲಸಗಾರರಿಗೂ ರಜೆ ಸೇರಿದಂತೆ, ವಿವಿಧ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದಾಗಿದೆ. ದೇಶದಲ್ಲಿ ಹೊಸ ಹೊಸ ರೀತಿಯ ಉದ್ಯೋಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗದ ವ್ಯಾಖ್ಯಾನವನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸದ್ಯದಲ್ಲೇ ಕೇಂದ್ರ ಸರ್ಕಾರ ರಾಷ್ಟಿçÃಯ ಉದ್ಯೋಗ ನೀತಿ ಜಾರಿಗೆ ತರಲಿದ್ದು, ಉದ್ಯೋಗದ ವ್ಯಾಪ್ತಿಗೆ ಗಿಗ್ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು, ಫ್ಲಾಟ್ ಫಾರಂ ಕಾರ್ಮಿಕರನ್ನು ಸೇರಿಸಲು ಚಿಂತನೆ ನಡೆಸಲಾಗಿದೆ. ಈ ನಿಯಮ ಜಾರಿಯಾದರೇ ಓಲಾ, ಉಬರ್, ಜೊಮ್ಯಾಟೋ, ಸ್ವಿಗ್ಗಿ ಮುಂತಾದ ಆ್ಯಪ್ ಬೇಸ್‌ನಲ್ಲಿ ಕೆಲಸ ಮಾಡುವ ನೌಕರರು ಇದರ ವ್ಯಾಪ್ತಿಗೆ ಬರಲಿದ್ದಾರೆ. ಈ ನಿಯಮದಡಿ ಗಿಗ್ ಕಾರ್ಮಿಕರು ಕನಿಷ್ಟ ವೇತನ, ವಾರದ ರಜೆ, ಪಿಎಫ್ ಹಾಗೂ ಇಎಸ್‌ಐ ಸೌಲಭ್ಯ ಪಡೆಯಲಿದ್ದಾರೆ.

ತಂದೆಯನ್ನು ಹತ್ಯೆಗೈದ ಮಗ

ಮೈಸೂರು, ಅ. ೨೨: ತಂದೆ ಮತ್ತು ತಂದೆಯ ಪ್ರೇಯಸಿಯನ್ನು ಮಗನೇ ಹತ್ಯೆಗೈದ ಘಟನೆ ಮೈಸೂರು ಹೊರವಲಯದ ಶ್ರೀ ನಗರದಲ್ಲಿ ನಡೆದಿದೆ. ಶಿವಪ್ರಕಾಶ್ ಮತ್ತು ಲತಾರನ್ನು ಹತ್ಯೆಗೈದು ಪುತ್ರ ಸಾಗರ್ ಪರಾರಿ ಯಾಗಿದ್ದಾನೆ. ಲತಾ ಮನೆಗೆ ನುಗ್ಗಿದ ಸಾಗರ್ ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಲತಾ ಮೇಲೆ ಹಲ್ಲೆ ನಡೆಸುವಾಗ ಆಕೆಯ ಪುತ್ರ ನಾಗಾರ್ಜುನ್‌ಗೂ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಈ ಸಂಬAಧ ಪ್ರಕರಣ ದಾಖಲಾಗಿದ್ದು, ಸಾಗರ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸಿಬಿಐಗೆ ಜಾರ್ಖಂಡ್ ಹೈಕೋರ್ಟ್ ತರಾಟೆ

ರಾಂಚಿ, ಅ. ೨೨: ಧನ್ಬಾಗ್‌ನ ಹಿಟ್-ರನ್ ಪ್ರಕರಣದಲ್ಲಿ ಸಿಬಿಐ ಚಾರ್ಜ್ ಶೀಟ್‌ಗೆ ಸಂಬAಧಿಸಿದAತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜಾರ್ಖಂಡ್ ಹೈಕೋರ್ಟ್ ತನಿಖಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ. ತನಿಖಾ ಸಂಸ್ಥೆಯವರು ಸೆಕ್ರೆಟರಿಯಟ್‌ನ ಅಧಿಕಾರಿಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದು ಜಾರ್ಖಂಡ್ ನ್ಯಾಯಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಹೈಕೋರ್ಟ್ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದರೂ ಸಹ ಚಾರ್ಜ್ ಶೀಟ್ ಸಲ್ಲಿಸುವುದಕ್ಕೂ ಮುನ್ನ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಸಿಬಿಐ ನಡೆಗೆ ನ್ಯಾ. ಡಾ. ರವಿ ರಂಜನ್ ಹಾಗೂ ನ್ಯಾ. ಸುಜಿತ್ ನಾರಾಯಣ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಆಕ್ಷೇಪ ವ್ಯಕ್ತಪಡಿಸಿದೆ. ೩ ತಿಂಗಳ ತನಿಖೆ ಅವಧಿಯಲ್ಲಿ ತನಿಖಾ ಸಂಸ್ಥೆ ಪ್ರಕರಣವನ್ನು ಯಾವುದೇ ತಾರ್ಕಿಕ ಅಂತ್ಯಕ್ಕೂ ಕೊಂಡೊಯ್ಯದೇ ಇರುವುದರ ಬಗ್ಗೆಯೂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

ಅನನ್ಯ ಪಾಂಡೆ ವಿಚಾರಣೆ

ಮುಂಬೈ ಅ. ೨೨: ಸತತ ಎರಡನೇ ದಿನವೂ ನಟಿ ಅನನ್ಯ ಪಾಂಡೆ ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಮುಂಬೈ ಕ್ರೂಸ್ ಪಾರ್ಟಿ ಪ್ರಕರಣಕ್ಕೆ ಸಂಬAಧಿಸಿದAತೆ ಅಧಿಕಾರಿಗಳು ಪ್ರಶ್ನೆ ಕೇಳಿದ್ದು, ತಮ್ಮ ವಿರುದ್ಧದ ಡ್ರಗ್ಸ್ ಪೂರೈಕೆ ಅಥವಾ ಸೇವನೆಯ ಆರೋಪವನ್ನು ನಿರಾಕರಿಸಿದ್ದಾರೆ. ಆರ್ಯನ್ ಖಾನ್ ಅವರ ಮೊಬೈಲ್‌ನಲ್ಲಿ ವಾಟ್ಸ್ಆಪ್ ಚಾಟ್‌ನಲ್ಲಿ ಅನನ್ಯ ಪಾಂಡೆ ಹೆಸರು ಉಲ್ಲೇಖ ಗೊಂಡಿತ್ತು. ಆರ್ಯನ್ ಖಾನ್ ಕ್ರೂಸ್ ಪಾರ್ಟಿ ಪ್ರಕರಣದಲ್ಲಿ ಅ. ೨ ರಂದು ಬಂಧನಕ್ಕೆ ಒಳಗಾಗಿದ್ದರು ಅ. ೮ ರಿಂದ ಜೈಲಿನಲ್ಲೇ ಇದ್ದಾರೆ.