ಶನಿವಾರಸಂತೆ: ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಂಗಳವಾರ ರಾತ್ರಿ ಮುಸ್ಲಿಂ ಸಮುದಾಯದವರು ಪ್ರವಾದಿ ಮಹಮ್ಮದ್ ಅವರ ಹುಟ್ಟುಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಮಸೀದಿ ಧರ್ಮಗುರು ಮೌಲಾನ ವಸಮಂನೂರ್ ಅವರು, ಈದ್ ಮಿಲಾದ್ ಹಬ್ಬ ಪ್ರೀತಿ ಹಾಗೂ ಮಾನವತೆಯ ಸಂದೇಶ ಸಾರಿದ ಪ್ರವಾದಿ ಮಹಮ್ಮದ್ ಅವರನ್ನು ಸ್ಮರಿಸುವ ಮಹತ್ವದ ದಿನವಾಗಿದೆ ಎಂದು ಹೇಳಿ, ಖುರಾನ್ ಸಂದೇಶಗಳನ್ನು ಬೋಧಿಸಿದರು.
ಶಾಂತಿ, ಪ್ರೀತಿ, ಸೌಹಾರ್ಧತೆಯ ಸಂದೇಶ ನೀಡಿದರು ಹಾಗೂ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಸೀದಿ ಅಧ್ಯಕ್ಷ ಹುಸೇನ್ ಸಾಬ್, ಕಾರ್ಯದರ್ಶಿ ಎಂ.ಜೆ. ಅಬ್ದುಲ್ ರಜಾಕ್, ನಿರ್ದೇಶಕರು, ಸಮುದಾಯದ ಮುಖಂಡರಾದ ಕೆ.ಎಂ. ಅಮೀರ್ ಸಾಬ್, ಶುಕೂರ್, ಆದಿಲ್ ಪಾಶ, ಸರ್ದಾರ್ ಅಹಮ್ಮದ್, ಅಕ್ಮಲ್ ಪಾಶ, ಮಹಮ್ಮದ್ ಪಾಶ, ಷಾಹಿದ್, ತಾರಿಖ್, ರಶೀದ್, ಅಬ್ದುಲ್ ರಬ್, ನೂರುಲ್ಲಾ ಇತರರು ಹಾಜರಿದ್ದರು.