ವೀರಾಜಪೇಟೆ, ಅ. ೨೨: ಬೆಂಗಳೂರಿನ ಕೆಎಂಸಿಸಿ ವೈದ್ಯಕೀಯ ಸಂಸ್ಥೆಯ ಆ್ಯಂಬ್ಯುಲೆನ್ಸ್ ಚಾಲಕ ಹನೀಫ್ ಅವರಿಗೆ ವೀರಾಜಪೇಟೆ ಡೊನೆಟರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೆಲವು ದಿನಗಳ ಹಿಂದೆ ನಲವತ್ತು ದಿನದ ಮಗುವನ್ನು ಕೇರಳದ ಕಣ್ಣನೂರಿನಿಂದ ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲು ನಾಲ್ಕು ಗಂಟೆ ಹದಿನೆಂಟು ನಿಮಿಷದಲ್ಲಿ ಆ್ಯಂಬ್ಯುಲೆನ್ಸ್ ಚಾಲಿಸಿದ್ದು ಹಾಗೂ ಈ ಹಿಂದೆ ಮಂಗಳೂರಿನಿAದ ಬೆಂಗಳೂರಿಗೆ ಸಹ ಒಂಬತ್ತು ತಿಂಗಳ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಅತಿ ಕಡಿಮೆ ಅವಧಿಯಲ್ಲಿ ಸಾಗಿಸಿದ್ದ ಮಾನವೀಯತೆಯ ಸೇವೆಗಾಗಿ ವೀರಾಜಪೇಟೆ ಡೊನೆಟರ್ಸ್ ಚಾರಿಟೇಬಲ್ ಸಂಸ್ಥೆ ವತಿಯಿಂದ ಹನೀಫ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಹನೀಫ್ ಸನ್ಮಾನ ಸ್ವೀಕರಿಸಿ ಮಾತನಾಡಿ ಈ ಎರಡು ಕಾರ್ಯಗಳಲ್ಲಿ ಜನತೆ ಹಾಗೂ ಪೊಲೀಸ್ ಇಲಾಖೆ ನೀಡಿದ ಬೆಂಬಲ ಪ್ರಶಂಸನೀಯ. ಜೊತೆಗೆ ಪುಟ್ಟ ಕಂದಮ್ಮಗಳ ಜೀವ ರಕ್ಷಣೆ ಮಾಡಿದ ತೃಪ್ತಿಯು ಇದೆ ಎಂದು ಹೇಳಿದರು.
ಈ ಸಂದರ್ಭ ವೀರಾಜಪೇಟೆ ಪ.ಪಂ. ಸದಸ್ಯರಾದ ಮಹಮ್ಮದ್ ರಾಫಿ ಮತ್ತು ಎಸ್.ಎಚ್. ಮತೀನ್, ಸಂಸ್ಥೆಯ ಅಧ್ಯಕ್ಷ ರಿಯಾಜ್, ಕಾರ್ಯದರ್ಶಿ ರೂಮಾನ್, ಸದಸ್ಯರಾದ ಸಲೀಂ, ಜುಬೇರ್ ಸೇರಿದಂತೆ ಟ್ರಸ್ಟ್ನ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.