ನಾಪೋಕ್ಲು, ಅ. ೨೩: ಕೊಡವರಿಗೆ ಕೋವಿ ಹಕ್ಕು ಸಂವಿಧಾನ ಬದ್ಧವಾಗಿದೆ ಎಂದು ಸಿಎನ್‌ಸಿ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು.
ಸಮೀಪದ ಚೆರಿಯಪರಂಬು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಾಲ್‌ನಾಡ್ ಪ್ಲಾಂರ‍್ಸ್ ರಿಕ್ರಿಯೇಶನ್ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಮುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗೆ ಕೋವಿಗಳಿಗೆ ಪೂಜೆ ಸಲ್ಲಿಸುವದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಕೊಡವರು ಹಿಂದಿನಿAದಲೂ ಬೇಟೆ ಮತ್ತು ಯುದ್ಧಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಜನಾಂಗದ ಮೂಲ ಹಾಗೂ ನೆಲೆ ಸಂವಿಧಾನಿಕವಾಗಿದೆ. ಕೋವಿ ಕೊಡವರ ಪಾರಂಪರಿಕ ಹಕ್ಕು ಎಂದ ಅವರು, ಮಹಿಳೆಯರು ಕೂಡ ಗುಂಡು ಹಾರಿಸುವ ಸ್ಪರ್ಧೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಕ್ಲಬ್‌ನ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸ್ಪರ್ಧಾ ಕಾರ್ಯಕ್ರಮದ ಪಾಯಿಂಟ್ ೨೨ ವಿಭಾಗವನ್ನು ದಾನಿಗಳಾದ ಮುಕ್ಕಾಟಿರ ಅಣ್ಣಯ್ಯ, ೧೨ ಬೋರ್ ವಿಭಾಗವನ್ನು ಎನ್.ಯು.ನಾಚಪ್ಪ ಮತ್ತು ಏರ್‌ಗನ್ ವಿಭಾಗದ ಸ್ಪರ್ಧೆಯನ್ನು ಮೂವೆರ ಬೆಳ್ಯಪ್ಪ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಕಲ್ಯಾಟಂಡ ಮುತ್ತಪ್ಪ, ಕರವಂಡ ಲವ ನಾಣಯ್ಯ, ಬಾಚಮಂಡ ರಾಜಾ ಪೂವಣ್ಣ, ಕ್ಲಬ್‌ನ ಮಾಜಿ ಅಧ್ಯಕ್ಷ ಕಾಂಡAಡ ಜಯ ಕರುಂಬಯ್ಯ, ಉಪಾಧ್ಯಕ್ಷ ಅರೆಯಡ ರತ್ನಾ ಪೆಮ್ಮಯ್ಯ, ಕಾರ್ಯದರ್ಶಿ ಚೀಯಕಪೂವಂಡ ಅಪ್ಪಚ್ಚು, ಖಜಾಂಚಿ ಕರವಂಡ ಬೆಲ್ಲು ಬೆಳ್ಯಪ್ಪ, ಕೇಟೋಳಿರ ಹರೀಶ್ ಪೂವಯ್ಯ, ಮತ್ತಿತರರಿದ್ದರು.
ಕೋಡಿಮಣಿಯಂಡ ತಮ್ಮಣ್ಣಿ ಬೋಪಯ್ಯ ಪ್ರಾರ್ಥಿಸಿ, ಚೇನಂಡ ಸುರೇಶ್ ನಾಣಯ್ಯ ಸ್ವಾಗತಿಸಿ, ಮುಕ್ಕಾಟಿರ ವಿನಯ್ ನಿರೂಪಿಸಿದರು.