ಕೂಡಿಗೆ, ಅ. ೨೧: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ. ೩೪.೪೭ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ತಿಳಿಸಿದ್ದಾರೆ.

೨೦೨೦-೨೧ನೇ ವರ್ಷದಲ್ಲಿ ಸಹಕಾರ ಸಂಘದಲ್ಲಿ ಸದಸ್ಯರ ಪಾಲು ಬಂಡವಾಳ ರೂ. ೨೧೨.೮೩ ಲಕ್ಷ ಇದ್ದು, ಕೃಷಿ ಸಾಲವಾಗಿ ರೂ. ೫೩೫ ಲಕ್ಷ, ಕೃಷಿ ಮಧ್ಯಮಾವಧಿ ಸಾಲವಾಗಿ ರೂ. ೧೩.೬೫ ಲಕ್ಷ, ಜಾಮೀನು ಸಾಲ ರೂ. ೧೫.೦೫ ಲಕ್ಷ, ನಿರಖು ಠೇವಣೆ ಸಾಲ ರೂ. ೫೬.೦೮ ಲಕ್ಷ, ಪಿಗ್ಮಿ ಠೇವಣಿ ಸಾಲ ರೂ. ೦.೧೫ ಲಕ್ಷ, ಸ್ವಸಹಾಯ ಸಾಲ ರೂ. ೧೫.೦೫ ಲಕ್ಷ, ಭವಿಷ್ಯ ನಿಧಿ ಸಾಲ ರೂ. ೮.೦೯ ಲಕ್ಷ, ಆಭರಣ ಸಾಲ ರೂ. ೧೫೯.೩೬ ಲಕ್ಷ, ವ್ಯಾಪಾರ ಅಭಿವೃದ್ಧಿ ಸಾಲ ರೂ. ೧೯೧.೦೪ ಲಕ್ಷ, ಜಂಟಿ ಬಾಧ್ಯತಾ ಗುಂಪು ಸಾಲ ರೂ. ೭.೦೫ ಲಕ್ಷ, ಪಿಗ್ಮಿ ಸಾಮಾನ್ಯ ಸಾಲ ರೂ. ೯೪೯.೪೭ ಲಕ್ಷ, ಅಸಾಮಿ ಸಾಲ ರೂ. ೧೪.೬೯ ಲಕ್ಷ, ಗೊಬ್ಬರ ಸಾಲ ರೂ. ೬.೭೬ ಲಕ್ಷ, ಜುಮ್ಲಾ ಸಾಲಗಳು ರೂ. ೧೯೭೨.೦೪ ಲಕ್ಷ ಆಗಿದ್ದು, ಇದರ ಅನುಗುಣವಾಗಿ ಸಂಘದಲ್ಲಿ ವ್ಯಾಪಾರ ವ್ಯವಹಾರ ನಡೆದು ರೂ. ೩೪.೪೭ ಲಕ್ಷ ಲಾಭವಾಗಿದೆ ಎಂದು ಕೆ.ಕೆ. ಹೇಮಂತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ೨೦೨೦-೨೧ನೇ ಸಾಲಿನ ವ್ಯವಹಾರದ ಅನುಗುಣವಾಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ವತಿಯಿಂದ ನೀಡುವ ವಾರ್ಷಿಕ ಪ್ರಶಸ್ತಿಯನ್ನು ಈ ಬಾರಿ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘ ಪ್ರಥಮ ಸ್ಥಾನವನ್ನು ಪಡೆದಿದೆ. ಜಿಲ್ಲಾ ಕೇಂದ್ರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸೋಮವಾರಪೇಟೆ ತಾಲೂಕು ಮಟ್ಟದ ಪ್ರಶಸ್ತಿಯನ್ನು ಪಡೆಯಲಾಗಿದೆ.

೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ತಾ. ೨೪ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಸಂಘದ ರೈತ ಸಹಕಾರ ಭವನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮೀನ ತಿಳಿಸಿದ್ದಾರೆ.