ಸುಂಟಿಕೊಪ್ಪ, ಅ. ೨೨: ಸುಂಟಿಕೊಪ್ಪ ಪಟ್ಟಣದಲ್ಲಿ ಶುಕ್ರವಾರ ಮುಂಜಾನೆ ವೇಳೆ ಸಿಡಿಲಿನ ಹೊಡೆತಕ್ಕೆ ಕೆಪಿಟಿಸಿಎಲ್ ವಿದ್ಯುತ್ ಪ್ರಸರಣ ಕೇಂದ್ರದ ಟ್ರಾನ್ಸ್ಫಾರ್ಮರ್ ಹಾನಿಗೊಂಡಿದ್ದು ಪಟ್ಟಣದಲ್ಲಿ ಸುಂಟಿಕೊಪ್ಪ, ಅ. ೨೨: ಸುಂಟಿಕೊಪ್ಪ ಪಟ್ಟಣದಲ್ಲಿ ಶುಕ್ರವಾರ ಮುಂಜಾನೆ ವೇಳೆ ಸಿಡಿಲಿನ ಹೊಡೆತಕ್ಕೆ ಕೆಪಿಟಿಸಿಎಲ್ ವಿದ್ಯುತ್ ಪ್ರಸರಣ ಕೇಂದ್ರದ ಟ್ರಾನ್ಸ್ಫಾರ್ಮರ್ ಹಾನಿಗೊಂಡಿದ್ದು ಪಟ್ಟಣದಲ್ಲಿ ಮಧ್ಯಾಹ್ನದವರೆಗೆ ವಿದ್ಯುತ್ ಸಂಪೂರ್ಣವಾಗಿ ಸ್ಥಗಿತಗೊಂಡಿತು.
ಇದರಿಂದ ಸುಂಟಿಕೊಪ್ಪ, ಮತ್ತಿಕಾಡು, ಕಂಬಿಬಾಣೆ, ಕೆದಕಲ್, ಹೊಸಕೋಟೆ ಹರದೂರು ಗ್ರಾಮಗಳಿಗೆ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಕೆಪಿಟಿಸಿಎಲ್ ಇಲಾಖೆಯ ಕಿರಿಯ ಅಭಿಯಂತರ ಸಂತೋಷ್, ಕುಶಾಲನಗರ ಕಿರಿಯ ಅಭಿಯಂತರ ಭರತ್, ಸುಂಟಿಕೊಪ್ಪ ಚೆಸ್ಕಾಂ ಇಲಾಖೆಯ ಅಭಿಯಂತರ ಜೈದೀಪ್ ಹಾಗೂ ಸಿಬ್ಬಂದಿಗಳು ತುರ್ತು ಕಾರ್ಯಪ್ರವೃತ್ತರಾಗಿ ಟ್ರಾನ್ಸ್ಫಾರ್ಮರ್ ದುರಸ್ತಿಪಡಿಸಿ ಮಧ್ಯಾಹ್ನ ೩ ಗಂಟೆ ವೇಳೆಗೆ ಪಟ್ಟಣಕ್ಕೆ ವಿದ್ಯುತ್ ಸಂಪರ್ಕವನ್ನು ಒದಗಿಸಿಕೊಟ್ಟರು.