ಶನಿವಾರಸಂತೆ, ಅ. ೨೧: ಪಟ್ಟಣದಲ್ಲಿ ಡಾ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬಿದರೂರು ಸರ್ವೆ ನಂ. ೭೮/೪೫ಪಿ೨ರಲ್ಲಿ ೨೦ ಸೆಂಟ್ ಜಾಗ ಕಾಯ್ದಿರಿಸಿದ್ದು, ಆರ್ಟಿಸಿ ಆಗಿರುತ್ತದೆ. ಆದರೆ, ಶನಿವಾರಸಂತೆ ಗ್ರಾ.ಪಂ. ಮತ್ತೆ ಸಂತೆ ಮಾರುಕಟ್ಟೆಯೊಳಗೆ ಜಾಗ ನೀಡಿದ್ದು, ದ.ಸಂ.ಸ. ಒಕ್ಕೂಟದ ವತಿಯಿಂದ ಭೂಮಿಪೂಜೆ ಸಹ ನಡೆದಿರುತ್ತದೆ. ಭವನ ನಿರ್ಮಾಣ ಕಾಮಗಾರಿಗೆ ಗುತ್ತಿಗೆದಾರರಿಗೆ ಸರ್ಕಾರ ದಿಂದ ರೂ. ೬೫ ಲಕ್ಷ ಮಂಜೂ ರಾಗಿದೆ. ಇದಕ್ಕೆ ಅವಕಾಶ ನೀಡಬಾರ ದೆಂದು ಹೋಬಳಿ ವ್ಯಾಪ್ತಿಯ ರೈತ ಹಾಗೂ ಬೆಳೆಗಾರ ಮುಖಂಡರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಆಡಳಿತ ಮಂಡಳಿ ಹಾಗೂ ತಹಶೀಲ್ದಾರ್ಗೆ ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಪ್ರತಿ ಶನಿವಾರ ವಾರದ ಸಂತೆ ನಡೆಯುತ್ತದೆ. ಈ ಸಂತೆಗೆ ಶನಿವಾರ ಸಂತೆ, ಕೊಡ್ಲಿಪೇಟೆ, ಯಸಳೂರು ೩ ಹೋಬಳಿ ವ್ಯಾಪ್ತಿಯಲ್ಲಿ ಹಂಡ್ಲಿ, ನಿಡ್ತ, ದುಂಡಳ್ಳಿ, ಹೊಸೂರು, ಕಳಲೆ, ಕೊಡ್ಲಿಪೇಟೆ ಮುಂತಾದ ಕಡೆಗಳಿಂದ ರೈತರು ತಾವು ಬೆಳೆದಿರುವ ಬೆಳೆಗಳನ್ನು ಮಾರಾಟಕ್ಕೆ ತರುತ್ತಾರೆ. ಹೋಬಳಿ ಯಾದ್ಯಂತ ರೈತರು ವ್ಯಾಪಾರಕ್ಕೆ ಬರುತ್ತಾರೆ. ಕೂಲಿ ಕಾರ್ಮಿಕರ ಸಂಖ್ಯೆಯೂ ಅಧಿಕವಾಗಿದ್ದು, ಸಂತೆಯಲ್ಲೇ ವಾರದ ಸಾಮಾನು ಖರೀದಿಸುತ್ತಾರೆ. ಶುಂಠಿ, ಹಸಿರು ಮೆಣಸಿನಕಾಯಿ, ಬಾಳೆಕಾಯಿ ಮಾರಾಟಕ್ಕೆ ತೊಂದರೆಯಾಗುತ್ತದೆ ಹಾಗೂ ಸಂತೆ ಮಾರುಕಟ್ಟೆ ಜಾಗದೊಳಗೆ ಅಂಬೇಡ್ಕರ್ ಭವನವಾಗಲೀ ಇತರ ಯಾವುದೇ ಸರ್ಕಾರಿ ಕಟ್ಟಡ ನಿರ್ಮಾಣಕ್ಕಾಗಲಿ ಜಾಗ ನೀಡಿದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಮುಖಂಡರಾದ ಕೆ.ಟಿ. ಹರೀಶ್, ಎ.ಟಿ. ಹನುಮಂತಪ್ಪ, ಎಂ.ಎಸ್. ನಾಗರಾಜ್, ಎಸ್.ಸಿ. ದಯಾಶೇಖರ್, ಪಟ್ಟಾಭಿರಾಂ, ಎಂ.ಕೆ. ಚಂದ್ರಪ್ಪ, ಜ್ಯೋತಿ, ಸುರೇಂದ್ರ, ನಟರಾಜ್, ನವೀನ್, ರಾಜಶೇಖರ್, ಎಸ್.ಜೆ. ರಾಜಪ್ಪ, ಫೃಥ್ವಿರಾಜ್, ಎಂ.ಆರ್. ಡೀಲಾಕ್ಷ, ಸಾಗರ್, ರವೀಂದ್ರ ಇತರ ೩೦ ಮಂದಿ ರೈತರು, ಬೆಳೆಗಾರ ಮುಖಂಡರು ಮನವಿಯಲ್ಲಿ ಎಚ್ಚರಿಸಿದ್ದಾರೆ.