ಮಡಿಕೇರಿ, ಅ. ೨೨: ಕೊಡಗರಹಳ್ಳಿ - ಚಿಕ್ಲಿ ಹೊಳೆ ರಸ್ತೆ ದುರಸ್ಥಿಗೆ ಸಂಬAಧಿಸಿದAತೆ ಈಗಾಗಲೇ ೧.೭೫ ಕೋಟಿ ಕಾಮಗಾರಿ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಗ್ರಾಮಸ್ಥರು ನಡೆಸಲು ಮುಂದಾಗಿರುವ ರಸ್ತೆ ತಡೆ ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಕಂಬಿಬಾಣೆ ಬಿಜೆಪಿ ಪ್ರಮುಖರು ಆಗ್ರಹಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಬಿಬಾಣೆ ಗ್ರಾ.ಪಂ ಮಾಜಿ ಅಧ್ಯಕ್ಷ ಡಾ.ಶಶಿಕಾಂತ್ ರೈ, ಕಂಬಿಬಾಣೆ - ಚಿಕ್ಲಿಹೊಳೆ ರಸ್ತೆ ಸುಮಾರು ೭ ಕಿ.ಮೀ ಇದ್ದು, ಕಾವೇರಿ ನೀರಾವರಿ ನಿಗಮಕ್ಕೆ ಒಳಪಡುತ್ತದೆ. ಈಗಾಗಲೇ ಈ ರಸ್ತೆಯಲ್ಲಿ ೨ ಕಿ.ಮೀ ನಷ್ಟು ಕಾಂಕ್ರಿಟೀಕರಣ ಮಾಡಲಾಗಿದ್ದು, ೧.೯೨ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಇನ್ನು ೫ ಕಿ.ಮೀ ರಸ್ತೆ ಹದಗೆಟ್ಟಿದ್ದು, ಈ ರಸ್ತೆಯನ್ನು ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನದಲ್ಲಿ ೧.೭೫ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊರೊನಾ ಹಿನ್ನೆಲೆ ಟೆಂಡರ್ ಪ್ರಕ್ರಿಯೆ ವಿಳಂಬವಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕರು ಆಶ್ವಾಸನೆ ನೀಡಿದ್ದಾರೆ ಎಂದರು.

ಶಾಸಕ ಅಪ್ಪಚ್ಚು ರಂಜನ್ ವಿಶೇಷ ಪ್ರಯತ್ನದಿಂದ ಈ ರಸ್ತೆಯನ್ನು ಸರ್ವ ಋತು ರಸ್ತೆಯನ್ನಾಗಿ ಮಾಡಲು ೪.೫ ಕೋಟಿ ರೂ. ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಇದಲ್ಲದೆ ಡಿಆರ್‌ಐಪಿ (ಡ್ಯಾಮ್ ರೀಹ್ಯಾಬಿಟೇಷನ್ ಇಂಪ್ರೂವ್ಮೆAಟ್ ಪ್ರಾಜೆಕ್ಟ್)ನಲ್ಲಿ ಚಿಕ್ಲಿಹೊಳೆಯನ್ನು ಅಭಿವೃದ್ಧಿಪಡಿಸಲು ವಿಶ್ವಬ್ಯಾಂಕ್ ನಿಂದ ಅನುಮತಿ ದೊರೆತಿದೆ. ಈ ಕಾಮಗಾರಿ ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ಒಟ್ಟು ೧೧ ಕಿ.ಮೀ ರಸ್ತೆಯೂ ಅಭಿವೃದ್ಧಿಗೊಳ್ಳಲಿದೆ. ಆದ್ದರಿಂದ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ನಡೆಸಲು ಮುಂದಾಗಿರುವ ರಸ್ತೆ ತಡೆ ಪ್ರತಿಭಟನೆಯನ್ನು ಕೈ ಬಿಡಬೇಕು ಎಂದು ಡಾ.ಶಶಿಕಾಂತ್ ರೈ ಮನವಿ ಮಾಡಿದರು. ಗೋಷ್ಠಿಯಲ್ಲಿ ಸೋಮವಾರಪೇಟೆ ಬಿಜೆಪಿ ಉಪಾಧ್ಯಕ್ಷ ರಮೇಶ್, ಸೋಮವಾರಪೇಟೆ ಬಿಜೆಪಿ ಮಂಡಳ ಕಾರ್ಯದರ್ಶಿ ಗೌತಮ್, ಬಿಜೆಪಿ ಕಂಬಿಬಾಣೆ ಬೂತ್ ಅಧ್ಯಕ್ಷ ಅಜಿತ್, ಸೋಮವಾರಪೇಟೆ ತಾ. ಬಿಜೆಪಿ ರೈತ ಮೋರ್ಚಾ ಸದಸ್ಯ ಜಯಂತ್ ಹಾಜರಿದ್ದರು.