ಮಡಿಕೇರಿ, ಅ. ೨೨: ಅಖಿಲ ಕರ್ನಾಟಕ ಸರ್ಕಾರಿ ನೌಕರರ ಕ್ರೀಡಾ ಕೂಟದ ಫುಟ್‌ಬಾಲ್ ಟೂರ್ನಿಯಲ್ಲಿ ಕೊಡಗು ತಂಡ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದಿದೆ.
ದಾವಣಗೆರೆಯಲ್ಲಿ ಶುಕ್ರವಾರದಿಂದ ಆರಂಭಗೊAಡಿದ್ದ ಟೂರ್ನಿಯ ಮೊದಲ ಪಂದ್ಯವು ಬೆಂಗಳೂರು ಗ್ರಾಮೀಣ ಮತ್ತು ಕೊಡಗು ತಂಡಗಳ ನಡುವೆ ನಡೆದ ಹಣಾಹಣಿಯಲ್ಲಿ ಕೊಡಗು ತಂಡದ ಮುನ್ನಡೆ ಆಟಗಾರ ಸುಂಟಿಕೊಪ್ಪದ ಗ್ರಾಮ ಪಂಚಾಯಿತಿ ಪಿಡಿಒ ವೇಣುಗೋಪಾಲ್ ಅವರು ಹೊಡೆದ ಒಂದು ಗೋಲು ಮೂಲಕ ಮುಂದಿನ ಹಂತಕ್ಕೆ ಪ್ರವೇಶಿಸಲು ಸಾಧÀ್ಯವಾಯಿತು.
ನಂತರ ನಡೆದ ಎರಡನೇ ಪಂದ್ಯವು ಕೊಡಗು ಇಲೆವನ್ ಮತ್ತು ಬಳ್ಳಾರಿ ತಂಡಗಳ ನಡುವೆ ಪೈಪೋಟಿಯ ಪಂದ್ಯವು ರೋಚಕತೆಯಿಂದ ಕೂಡಿತ್ತು. ಅವಕಾಶ ಪಡೆದುಕೊಂಡ ಸುಂಟಿಕೊಪ್ಪದ ವೇಣುಗೋಪಾಲ್ ಅವರು ೨ ಗೋಲುಗಳನ್ನು ಬಾರಿಸುವುದರ ಮೂಲಕ ಕೊಡಗು ತಂಡ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು.