ಮಡಿಕೇರಿ, ಅ.೨೨: ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಕುಟುಂಬದ ವಾರ್ಷಿಕ ಆದಾಯ ೨.೫೦ ಲಕ್ಷಗಳ ಮಿತಿಯೊಳಗಿನ ಕುಟುಂಬದಲ್ಲಿರುವ ದೃಷ್ಟಿಹೀನ (ಅಂಧ) ಮಹಿಳೆಯರಿಗೆ ಜನಿಸುವ ಕನಿಷ್ಟ ೨ ಮಕ್ಕಳ ಆರೈಕೆಗಾಗಿ ಪ್ರತಿ ಹೆರಿಗೆ ನಂತರ ೫ ವರ್ಷಗಳ ಅವಧಿಗೆ ಮಾಹೆಯಾನ ೨ ಸಾವಿರ ಪೋಷಣಾ ಭತ್ಯೆ ನೀಡಲಾಗುತ್ತದೆ.
ಈ ಯೋಜನೆಯ ಸೌಲಭ್ಯವನ್ನು ೨೦೨೧-೨೨ನೇ ಸಾಲಿಗೆ ಜಿಲ್ಲೆಯಲ್ಲಿರುವ ಅಂಧ ಮಹಿಳೆಯರು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವಿಶೇಷಚೇತನ ಕಲ್ಯಾಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ:೦೮೨೭೨-೨೯೫೮೨೯ ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.