ವೀರಾಜಪೇಟೆ, ಅ. ೨೦: ಕೊಡಗು ಇತ್ತೀಚಿನ ಕೆಲವು ತಿಂಗಳುಗಳಿAದ ಕೆಲವು ವಿಕ್ಷಿಪ್ತ ಘಟನೆಗಳಿಗೆ ಸಾಕ್ಷಿಯಾಗಿದೆ. ಕೋವಿಡ್-೧೯ ಎರಡನೇ ಅಲೆಯ ಹೊಡೆತ ಜೋರಾಗಿದ್ದ ಸಮಯ ದೇಶದಾದ್ಯಂತ ಕಂಡು ಕೇಳರಿಯದ ರೀತಿಯಲ್ಲಿ ಸಾವು-ನೋವುಗಳು ಸಂಭವಿಸುತ್ತಿದ್ದ ದಿನಗಳು. ಲಸಿಕೆಯ ಕೊರತೆ, ಪುಟ್ಟ ಜಿಲ್ಲೆಯಾದರೂ ಗಡಿಭಾಗಗಳಲ್ಲಿ ತಡೆಯಿಲ್ಲದೆ ನುಗ್ಗಿದ ಜನರಿಂದಾಗಿ ಹಲವು ತಿಂಗಳುಗಳು ರೆಡ್ ಝೋನ್‌ನಲ್ಲಿಯೇ ಇದ್ದು ಲಾಕ್ಡೌನ್‌ನ ಕಠಿಣ ನಿಯಮಗಳನ್ನು ಎದುರಿಸಿದ ಸಂಕಷ್ಟಮಯ ದಿನಗಳು ಅವು ಕೊಡಗಿನ ಪಾಲಿಗೆ.

ಆದರೂ ಇಂಥ ಸಮಯದಲ್ಲೂ ಕೊಡಗಿನ ಹಲವು ತೋಟಗಳಿಗೆ ಚೆಕ್‌ಪೋಸ್ಟ್ನ ಹಲವು ಕಠಿಣ ನಿಯಮಗಳ ನಡುವೆಯೂ ರಾತೋರಾತ್ರಿ ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಹಲವು ವಲಸಿಗ ಕಾರ್ಮಿಕರು ಜಿಲ್ಲೆಯ ತೋಟಗಳನ್ನು ಪ್ರವೇಶ ಮಾಡಿದರು. ಹಲವು ಸಾರ್ವಜನಿಕರು ಖುದ್ದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡಲಾರಂಭಿಸಿದರು. ಹಲವರು ಸಣ್ಣಪುಟ್ಟ ಅಡಿಬರಹಗಳ ಜೊತೆಗೆ ಕರ್ನಾಟಕದ ಕಾಶ್ಮೀರಕ್ಕೆ ಮುಂದೊAದು ದಿನ ಅಪಾಯವಾಗಲಿದೆ ಎಂದು ಅಲವತ್ತುಕೊಳ್ಳಲಾರಂಭಿಸಿದರು.

ಯಾವುದೇ ಖಾಸಗಿ ಬಸ್ ನಿಲ್ದಾಣಕ್ಕೆ ಬಂದರೆ ಸಾಕು, ಅದರ ತುಂಬೆಲ್ಲಾ ಸ್ಥಳೀಯರಿಗಿಂತ ಹೆಚ್ಚಾಗಿ ವಲಸಿಗ ಕಾರ್ಮಿಕರೇ ಕಾಣಲಾರಂಭಿಸಿದರು. ಅವರ ಹಿಂದಿ ಭಾಷೆ ಕಿವಿಗೆ ಕೇಳಲಾರಂಭಿಸಿತು. ಸ್ಥಳೀಯರು ಒಂದು ರೀತಿಯ ವಿಚಿತ್ರ ಭಾವದೊಂದಿಗೆ ಅವರನ್ನು ನೋಡುತ್ತಾ, ಸ್ವಲ್ಪ ಅಂತರ ಕಾಯ್ದುಕೊಂಡು ಪ್ರಯಾಣ ಮಾಡಲಾರಂಭಿಸಿದರು.

ಭಾರತದ ಸಂವಿಧಾನವೇ ಒಬ್ಬ ವ್ಯಕ್ತಿ ಭಾರತದೊಳಗೆ ಎಲ್ಲಿ ಬೇಕಾದರೂ ಸಂಚರಿಸಬಹುದು ಎನ್ನುವ ಹಕ್ಕನ್ನು ನೀಡಿದ್ದರೂ ಭಾರತದೊಳಗೆ ಸಂಚರಿಸುತ್ತಿರುವವರೆಲ್ಲರೂ ಭಾರತದವರೇನಾ? ಅಥವಾ ನೆರೆಯ ಬಾಂಗ್ಲಾದೇಶಿಗರ, ಪಾಕಿಸ್ತಾನದವರಾ ಎನ್ನುವ ಪ್ರಶ್ನೆ ಎಲ್ಲರ ತಲೆಯಲ್ಲೂ ಇದ್ದೇ ಇದೆ. ಆ ಪ್ರಶ್ನೆ ಕೊಡಗಿನಲ್ಲಿ ಇತ್ತೀಚೆಗೆ ಹೆಚ್ಚಾಗಿಯೇ ಕೇಳಲಾರಂಭಿಸಿದೆ.

ಇದಕ್ಕೆ ಪುಷ್ಟಿ ಕೊಡುವಂತೆ ದೇಶದಲ್ಲಿ ವಿದೇಶಿಗರ ಮೇಲಿನ ದೌರ್ಜನ್ಯಕ್ಕಿಂತ ಅವರಿಂದಲೇ ಅಪರಾಧ ಚಟುವಟಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ ಎನ್ನುವ ಮಾಹಿತಿಯೊಂದು ಈಗ ಮತ್ತೊಮ್ಮೆ ನಾವೆಲ್ಲಾ ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮಾಡಿದೆ.

ರಾಷ್ಟಿçÃಯ ಅಪರಾಧ ದಾಖಲಾತಿ ವಿಭಾಗ ಬಿಡುಗಡೆ ಮಾಡಿರುವ ವರದಿಯಲ್ಲಿ, ೨,೨೫೭ ಕೇಸ್‌ಗಳು ವಿದೇಶಿಗರ ವಿರುದ್ಧ ದಾಖಲಾಗಿವೆ. ಅನ್ಯದೇಶದ ಪ್ರಜೆಗಳು ಹೆಚ್ಚಾಗಿ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನುವುದು ನಿಜಕ್ಕೂ ಭಯಹುಟ್ಟಿಸುವಂತಹುದು.

ಸಾಧಾರಣವಾಗಿ ಶಿಕ್ಷಣ, ಪ್ರವಾಸ, ವ್ಯಾಪಾರ, ಆರೋಗ್ಯ ಚಿಕಿತ್ಸೆಗೆಂದು ಬರುವ ವಿದೇಶಿಗರು ಮಾದಕ ದ್ರವ್ಯ, ಕಳ್ಳತನ, ಕೊಲೆ, ಮಾನಭಂಗ, ನಕಲಿ ದಾಖಲೆ

(ಮೊದಲ ಪುಟದಿಂದ) ಸೃಷ್ಟಿ ಮಾಡುವುದು ಇನ್ನೂ ಮುಂತಾದ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ಗಮನಿಸಬೇಕಾದ ಅಂಶವೆAದರೆ ಅಕ್ರಮ ವಲಸಿಗ ಬಾಂಗ್ಲಾ ಪ್ರಜೆಗಳ ವಿರುದ್ಧ ಹೆಚ್ಚು ೨೨೩೨ ಪ್ರಕರಣಗಳು ದಾಖಲಾಗಿವೆ.

ನಮ್ಮ ಕೊಡಗಿನಲ್ಲಿಯೂ ಈ ರೀತಿ ಬಾಂಗ್ಲಾ ಪ್ರಜೆಗಳ ಮೇಲೆ ಈಗಾಗಲೇ ಪ್ರಕರಣಗಳು ದಾಖಲಾಗುತ್ತಿವೆ.

ವೀರಾಜಪೇಟೆಯಲ್ಲಿ ಇತ್ತೀಚೆಗೆ ಬಿಟ್ಟಂಗಾಲ ಸಮೀಪದ ವ್ಯಕ್ತಿಯೊಬ್ಬನ ಬೆನ್ನತ್ತಿ ಹೋದ ಪೊಲೀಸರಿಗೆ ಸೆರೆಸಿಕ್ಕಿರುವುದು ಮಾತ್ರ ಬಾಂಗ್ಲಾದೇಶದ ಪ್ರಜೆ. ದಿನಾಂಕ ೧೧.೧೦.೨೦೨೧ ರಂದು ಈ ಘಟನೆ ನಡೆದಿದ್ದು, ಅಪರಾಧ ಸಂಖ್ಯೆ ೧೩೭/೨೦೨೧ ರನ್ವಯ, ಬಾಂಗ್ಲಾ ದೇಶದಿಂದ ಅಕ್ರಮವಾಗಿ ಕೊಡಗು ಜಿಲ್ಲೆಗೆ ಬಂದಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆರೋಪಿ ಮೊಹಮ್ಮದ್ ಇದ್ರೀಸ್ ಮಿಯಾ ಎನ್ನುವ ವ್ಯಕ್ತಿ, ಪೊಲೀಸರು ರೌಂಡ್ಸ್ ತೆರಳಿದ್ದಾಗ ಪೊಲೀಸ್ ಇಲಾಖೆಯ ಜೀಪು ಕಂಡೊಡನೆ ಮರದ ಹಿಂದೆ ಬಚ್ಚಿಕೊಳ್ಳುವ ಯತ್ನ ಮಾಡಿದಾಗ ಆತನನ್ನು ಪೊಲೀಸರು ಸುತ್ತುವರಿದು ವಿಚಾರಿಸಿದಾಗ ಆತನ ಬಗ್ಗೆ ಸರಿಯಾದ ವಿವರ ನೀಡದೇ ಹೋಗಿದ್ದ. ಮೊದಲಿಗೆ ತಾನು ಬಾಂಗ್ಲಾ ದೇಶಿಗನೆಂದು ಹೇಳಿಕೊಂಡ ಬಳಿಕ ಅಸ್ಸಾಂನವನೆAದು ಹೇಳಿಕೊಂಡು ಅಲ್ಲಿನ ವಿಳಾಸ ನೀಡಿದ. ಅಲ್ಲದೇ ಅಸ್ಸಾಂನಿAದ ಬೆಂಗಳೂರಿಗೆ ರೈಲಿನಲ್ಲಿ ಬಂದು ಬಳಿಕ ಯಾವುದೋ ಲಾರಿ ಹತ್ತಿ ಬಂದೆ; ಲಾರಿಯವನು ಅರ್ಧ ದಾರಿಯಲ್ಲಿ ಇಳಿಸಿಹೋದ, ನಂತರ ನಾನು ನಡೆದುಕೊಂಡು ಎರಡು ದಿನಗಳ ಹಿಂದೆ ಇಲ್ಲಿಗೆ ಬಂದು ಬಿಕ್ಷೆ ಬೇಡುತ್ತಾ ಇದ್ದೆ ಎಂದು ವಿವರಿಸಿದ್ದಾನೆ.

ಈತ ತನ್ನ ಇರುವಿಕೆಯನ್ನು ಮರೆಮಾಚಿ, ಸರಿಯಾದ ವಿವರ ನೀಡದೇ ಇದ್ದುದರಿಂದ ಈತನ ಸಹಚರರನ್ನು ಕರೆದುಕೊಂಡು ಬಂದು ಯಾವುದಾದರೂ ದುಷ್ಕೃತ್ಯ ಎಸಗುವ ಸಾಧ್ಯತೆ ಇರುವುದರಿಂದ ಆರೋಪಿ ಮೇಲೆ ಸ್ವಯಂ ವರದಿ ತಯಾರಿಸಿ ಪಿ.ಎಸ್.ಐ. ಶ್ರೀಧರ್ ಅವರು ಸಿಆರ್ ಪಿಸಿ ಸೆಕ್ಷನ್ ೧೦೯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತಾಲೂಕು ದಂಡಾಧಿಕಾರಿಯವರ ಸಮ್ಮುಖದಲ್ಲಿ ನಿವೇದನೆ ಮಾಡಿಕೊಂಡು ಈ ವ್ಯಕ್ತಿಯನ್ನು ಬಂಧನ ಮಾಡಿ, ಸರ್ವೋಚ್ಛ ನ್ಯಾಯಾಲಯದ ಆದೇಶಗಳನ್ನು ಪಾಲಿಸಿ, ಆರೋಪಿಯನ್ನು ೧೧/೧೦/೨೦೨೧ ರಿಂದ ೨೫/೧೦/೨೦೨೧ ರವರೆಗೆ ನ್ಯಾಯಾಂಗ ಬಂಧನಕ್ಕೆ ಕೋರಿ, ದಿನಾಂಕ ೨೫ ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.

ಅಲ್ಲದೆ ಜಿಲ್ಲಾ ಕಾರಾಗೃಹದಲ್ಲಿರುವ ಈ ವ್ಯಕ್ತಿಯೂ ಭಾಷಾಂತರಕಾರರ ಮೂಲಕ ಮಾತನಾಡಿಸಿ ಮಾಹಿತಿಯನ್ನು ಪೊಲೀಸರು ದಾಖಲಿಸಿದಾಗ ತಾನು ಬಾಂಗ್ಲಾದೇಶಿಗನಾಗಿದ್ದು ಮೂರು ವರ್ಷಗಳ ಹಿಂದೆ ಸರ್ಕಾರದ ಯಾವುದೇ ಅನುಮತಿ ಪತ್ರವಿಲ್ಲದೇ ರೈಲು ಮತ್ತು ಬಸ್‌ಗಳ ಮೂಲಕ ಭಾರತಕ್ಕೆ ಬಂದಿರುವುದಾಗಿ ಹೇಳಿಕೆ ನೀಡಿರುತ್ತಾನೆ. ಆದ್ದರಿಂದ ಈತನ ವಿರುದ್ಧ ಭಾರತದ ವಿದೇಶಿ ಪ್ರಜೆಗಳ ಕಾಯ್ದೆ ೧೯೪೬ರ ಸೆಕ್ಷನ್ ೧೪, ಮತ್ತು ಪಾಸ್ ಪೋರ್ಟ್ ಕಾಯ್ದೆ ೧೯೬೭ ಸೆಕ್ಷನ್ ೧೨ಸಿ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎನ್ನುವ ಸಂಪೂರ್ಣ ವಿವರ ಈ ಪ್ರಥಮ ವರ್ತಮಾನ ವರದಿಯಲ್ಲಿದೆ. ಇದೊಂದು ಪ್ರಕರಣವಲ್ಲ. ಕೊಡಗಿನಲ್ಲಿ ಈಗಾಗಲೇ ಈ ರೀತಿಯ ಐದರಿಂದ ಆರು ಅಕ್ರಮ ಬಾಂಗ್ಲಾ ದೇಶಿಗರ ವಿರುದ್ಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

ಕೊಡಗು ಹೇಳಿ-ಕೇಳಿ ಗುಡ್ಡಗಾಡು ಪ್ರದೇಶ. ಮನೆಗಳ ಚಲನವಲನ ಅಧ್ಯಯನ ಮಾಡುವುದು, ಒಂಟಿ ಮನೆಗಳ ಮೇಲೆ, ಒಂಟಿ ಹೆಂಗಸರ ಮೇಲೆ ದಾಳಿ ಮಾಡುವುದು ಕಷ್ಟದ ಕೆಲಸವಲ್ಲ. ಇವರು ಈಗಾಗಲೇ ಅಂತಹ ಕೃತ್ಯಗಳನ್ನು ಎಸಗಿರುವ ದಾಖಲೆಗಳು ಕೊಡಗಿನ ಜನರ ಮುಂದಿವೆ. ಅಲ್ಲದೆ ಅವರು ಅಕ್ರಮ ವಲಸಿಗರಾಗಿದ್ದರೆ ಇಲ್ಲಿನ ಕಾಡುಮೇಡು, ಗುಡ್ಡಗಳು ಇವರ ಅಪರಾಧಿಕ ನೆಲೆಗಳು ಆಗಬಹುದು. ಕಡಿಮೆ ಸಂಬಳಕ್ಕೆ ಸಿಗುತ್ತಾರೆ, ಕಾರ್ಮಿಕರ ಸಮಸ್ಯೆ ಎಂದೆಲ್ಲಾ ನಾವೂ ಸದÀ್ಯದ ಮಟ್ಟಿಗೆ ಯೋಚಿಸ ಹೊರಟರೆ ನಮ್ಮ ಭವಿಷ್ಯಕ್ಕೆ ನಾವೇ ತೊಂದರೆ ತಂದುಕೊಳ್ಳಬಹುದು.

ಕೊಡಗಿನಲ್ಲಿ ಪೊಲೀಸ್ ಇಲಾಖೆಯ ಮಾಹಿತಿಗಳ ಪ್ರಕಾರ ಸುಮಾರು ಮೂವತ್ತೆöÊದು ಸಾವಿರ ಅಸ್ಸಾಂ ಕಾರ್ಮಿಕರು ಪ್ರಸ್ತುತ ಇದ್ದಾರೆ. ಅದರಲ್ಲೂ ನಾಪೋಕ್ಲು ವಿಭಾಗದಲ್ಲಿ ಸುಮಾರು ಹತ್ತು ಸಾವಿರ ಅಸ್ಸಾಂ ಕಾರ್ಮಿಕರು ನೆಲೆಸಿದ್ದಾರೆ ಎನ್ನಲಾಗುತ್ತಿದೆ.

ವೀಸಾ, ಪಾಸ್ ಪೋರ್ಟ್ ಇಲ್ಲದೇ ಬೇರೆ ದೇಶದ ನೆಲದಲ್ಲಿ ಒಂದು ಗಂಟೆ ಕಳೆಯುವುದೂ ಎಂತಹ ದುಸ್ವಪ್ನ. ಆದರೆ, ರೈಲು, ಬಸ್ ಹತ್ತಿಕೊಂಡು ಅಸ್ಸಾಂ ರಾಜ್ಯದ ದಾಖಲಾತಿಗಳನ್ನು ತೋರಿಸುತ್ತಾ ನಾವೂ ಭಾರತೀಯರೇ ಎನ್ನುತ್ತಿರು ವÀ್ಯಕ್ತಿಗಳನ್ನು ನಾವು ನಮ್ಮ ಮನೆ ಬಾಗಿಲಿಗೇ ಕರೆದುಕೊಂಡು ಬಂದು ಸಬ್ ಕುಚ್ ಅಚ್ಚಾ ಹೈ, ಏ ಅಸ್ಸಾಂ ಸೇ ಹೈ ಅನ್ನುತ್ತಿದ್ದೆವಲ್ಲಾ ಒಮ್ಮೆ ಎಲ್ಲರೂ ಯೋಚಿಸಬೇಕಾಗುತ್ತದೆ.

ಅಕ್ರಮವಾಗಿ ದೇಶದಿಂದ ದೇಶಕ್ಕೆ ಬಂದವರ ಬಗ್ಗೆ ಕಠಿಣ ಕ್ರಮ ಅನಿವಾರ್ಯ. ನಮ್ಮ ದೇಶದ ನೀತಿ ನಿಯಮಗಳಿಗೆ ವಿರುದ್ಧವಾಗಿ ಇರುವವರನ್ನು ರೆಡ್ ಕಾರ್ಪೇಟ್ ಹಾಸಿ ಸ್ವಾಗತ ಮಾಡುತ್ತಿರುವುದು ಕರ್ನಾಟಕದ ಕಾಶ್ಮೀರಕ್ಕೆ ಅಪಾಯದ ಘಂಟೆಯೇ ಸರಿ.

ಗೃಹ ಸಚಿವ ಅರಗ ಜ್ಞಾನೇಂದ್ರ ಇತ್ತಿಚೇಗೆ ವಿಧಾನ ಪರಿಷತ್ತಿನಲ್ಲಿ ಈ ವಿಚಾರವಾಗಿ ಉತ್ತರ ನೀಡುವಾಗ ಕರ್ನಾಟಕವನ್ನು ಧರ್ಮಛತ್ರ ಮಾಡಬಿಡುವುದಿಲ್ಲ. ಅಕ್ರಮ ವಲಸಿಗರು ಇಲ್ಲಿ ಹೆಚ್ಚು ದಿನ ಉಳಿಯುವುದಕ್ಕಾಗಿಯೇ ಅವರ ಮೇಲೆ ಪ್ರಕರಣ ದಾಖಲಾಗುವಂತೆ ಮಾಡಿಕೊಳ್ಳುತ್ತಾರೆ ಎನ್ನುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಆದರೆ ಕೊಡಗಿನ ಈಗಿನ ಪರಿಸ್ಥಿತಿ ನೋಡಿದರೆ ಅಕ್ರಮ ವಲಸಿಗರ ಪಾಲಿನ ಧರ್ಮಛತ್ರ ಆಗಿಹೋಗಿದೆಯಾ ಎನ್ನುವ ದೊಡ್ಡ ಅನುಮಾನ ಕಾಡಲಾರಂಭಿಸಿದೆ. ಇದರ ಬಗ್ಗೆ ಜನಪ್ರತಿನಿಧಿಗಳು, ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತಗಳು ಗಂಭೀರವಾದ ಹೆಜ್ಜೆಗಳನ್ನು ಇಡಬೇಕಾದ ಸಮಯ ಬಂದಿದೆ ಎಂದಷ್ಟೇ ಹೇಳಬಹುದು. -ಬರಹ: ಉಷಾಪ್ರೀತಮ್, ವೀರಾಜಪೇಟೆ