ಸುಂಟಿಕೊಪ್ಪ, ಅ. ೨೦: ತೋಟದಲ್ಲಿ ಮೇಯಲು ಬಿಟ್ಟಿದ್ದ ಹಸುವೊಂದನ್ನು ಹಾಡಹಗಲೆ ಹುಲಿ ದಾಳಿ ಮಾಡಿ ಕೊಂದು ಅರ್ಧಂಬರ್ಧ ತಿಂದು ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದಕ್ಷಿಣ ಕೊಡಗಿನಲ್ಲಿ ವ್ಯಾಘ್ರನ ಹಾವಳಿಯಿಂದ ಕೃಷಿಕರ ಅನೇಕ ಜಾನುವಾರುಗಳು ಬಲಿಯಾಗಿದ್ದು, ಇದೀಗ ಹುಲಿ ಪಥ ಬದಲಿಸಿದ್ದು, ೭ನೇ ಹೊಸಕೋಟೆ ತೊಂಡೂರಿನ ಕಾಫಿ ಬೆಳೆಗಾರರಾದ ಶೈಲಜಾ ಅವರಿಗೆ ೧೦ ಲೀಟರ್ ಹಾಲು ಕೊಡುವ ಹಸು ವ್ಯಾಘ್ರ‍್ರನ ಬೇಟೆಗೆ ಬಲಿಯಾಗಿದೆ.

ತಾ.೧೮ ರಂದು ಬೆಳಿಗ್ಗೆ ಎಂದಿನAತೆ ಶೈಲಜಾ ಅವರು ಹಸುವಿನ ಹಾಲು ಕರೆದು ತನ್ನ ಸಹೋದರ ಸಂತೋಷ್ ಎಂಬವರ ತೋಟಕ್ಕೆ ಬಿಟ್ಟಿದ್ದರು. ಆದರೆ ಕತ್ತಲು ಆವರಿಸಿದರೂ ಕೊಟ್ಟಿಗೆಗೆ ಬಾರದಿದ್ದಾಗ ದಿಗಿಲುಗೊಂಡ ಕುಟುಂಬಸ್ಥರು ತಾ.೧೯ ರಂದು ಹಗಲು ತೋಟದ ಎಲ್ಲೆಡೆ ಹುಡುಕಿದಾಗ ಸಂತೋಷ್ ಅವರ

(ಮೊದಲ ಪುಟದಿಂದ) ತೋಟದಲ್ಲಿ ಹಸುವಿನ ಕಳೆಬರ ಪತ್ತೆಯಾಗಿದೆ. ಹಸುವಿನ ಕುತ್ತಿಗೆಗೆ ದಾಳಿ ನಡೆಸಿದ ಹುಲಿ ಕುತ್ತಿಗೆಯಿಂದ ರಕ್ತ ಹೀರಿ ಹಿಂಭಾಗದ ಮಾಂಸ ಖಂಡಗಳನ್ನು ತಿಂದು ಅಲ್ಲಿಂದ ಕಾಲ್ಕಿತ್ತಿದೆ.

ಆನೆಕಾಡು ಅರಣ್ಯ ವಿಭಾಗದ ದಿನೇಶ್ ಹಾಗೂ ಗಾರ್ಡ್ ಗಣೇಶ್ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಕುಶಾಲನಗರ ವಲಂiÀi ಅರಣ್ಯಾಧಿಕಾರಿ ಅನನ್ಯಕುಮಾರ್ ಅವರ ಸೂಚನೆ ಮೇರೆಗೆ ಈ ಸ್ಥಳದಲ್ಲಿ ಮಂಗಳವಾರ ಸಿ.ಸಿ.ಕ್ಯಾಮರಾ ಅಳವಡಿಸಿದ್ದು, ಬುಧವಾರ ಮುಂಜಾನೆ ಸಿಸಿ ಕ್ಯಾಮರಾದಲ್ಲಿ ಹುಲಿ ಸಂಚಾರ ನಡೆಸಿರುವುದು ಕಂಡು ಬಂದಿದೆ.

ತೊAಡೂರು ಗ್ರಾಮದಲ್ಲಿ ಕಾಡಾನೆಗಳ ಸಂಚಾರ ನಿರಂತರವಾಗಿ ನಡೆಯುತ್ತಿದ್ದು, ಇದೀಗ ಹುಲಿ ಓಡಾಟ ಆರಂಭಿಸಿರುವುದರಿAದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹುಲಿಯನ್ನು ಸೆರೆಹಿಡಿದು ಸ್ಥಳಾಂತರಿಸಬೇಕೆAದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಸದ್ದಿಗಾರರೊಂದಿಗೆ ಮಾತನಾಡಿ ತೊಂಡೂರು ಗ್ರಾಮದ ೧೦೦ ಮೀ. ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶವಿದ್ದು ಹುಲಿಯು ಎಲ್ಲಿ ಸಂಚರಿಸುತ್ತದೆ ಎಂದು ಪತ್ತೆ ಹಚ್ಚಲು ಸಿಬ್ಬಂದಿಗಳನ್ನು ನಿಯೋಜಿಸಲಾಗುವುದೆಂದು ತಿಳಿಸಿದ್ದಾರೆ.