ಮಡಿಕೇರಿ, ಅ. ೨೦: ಕೊಡವ ಭಾಷೆ ರಾಜ್ಯದ ಮೂರನೇ ಭಾಷೆಯಾಗಬೇಕು. ಈ ಕುರಿತು ಸರಕಾರಕ್ಕೂ ಮನವಿ ಮಾಡಿದ್ದು, ಪರಿಶೀಲನೆಯಲ್ಲಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.

ಮೈಸೂರಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮೈಸೂರು ಕೊಡವ ಸಮಾಜದ ಆಶ್ರಯದಲ್ಲಿ ಜರುಗಿದ ಕೊಡವ ಭಾಷೆ ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರ್ಪಡೆ ವಿಚಾರಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೊಡವ ಭಾಷೆಯ ರಕ್ಷಣೆಗೆ ಅದನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವ ಅಗತ್ಯವಿದೆ. ಇದರ ಮೊದಲ ಭಾಗವಾಗಿ ರಾಜ್ಯದಲ್ಲಿ ಸ್ಥಳೀಯ ಭಾಷೆಯಾಗಿ ಅಂದರೆ ಮೂರನೇ ಭಾಷೆಯಾಗಿ ಅದನ್ನು ಅಂಗೀಕರಿಸಬೇಕಿದೆ. ಈ ಕುರಿತು ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಪರಿಶೀಲನೆಯಲ್ಲಿದೆ. ೮ನೇ ಪರಿಚ್ಛೇದÀಕ್ಕೆ ಸೇರ್ಪಡೆಯಾದಲ್ಲಿ ಕೊಡವ ಭಾಷೆಯ ಬೆಳವಣಿಗೆಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಈ ಕುರಿತು ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.

ಕೊಡವ ಭಾಷೆಯನ್ನು ಕೊಡಗಿನಿಂದ ಹೊರಗೆ ನೆಲೆಸಿರುವವರು ಮರೆಯಬಾರದು. ಅದರಲ್ಲಿಯೂ ವಿಶೇಷವಾಗಿ ಯುವಜನತೆ ಕೊಡವ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಎಲ್ಲರೂ ಸೇರಿ ೮ನೇ ಪರಿಚ್ಛೇದಕ್ಕೆ ಸೇರಿಸುವ ಕುರಿತು ಪ್ರಯತ್ನಿಸೋಣ ಎಂದು ಹೇಳಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ

(ಮೊದಲ ಪುಟದಿಂದ) ಅವರು ಮಾತನಾಡಿ, ಕೊಡವ ಭಾಷೆಯನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸಬೇಕು ಎನ್ನುವುದೇ ಅಕಾಡೆಮಿಯ ಗುರಿ. ಇದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಪೂರಕವಾದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ. ಈ ಬಾರಿಯ ಲೋಕಸಭಾ ಅಧಿವೇಶನದಲ್ಲಿಯೂ ಪ್ರಸ್ತಾವನೆಗೆ ಪ್ರಯತ್ನಿಸಲಾಗುವುದು. ಕೊಡಗಿನಿಂದ ಅಗತ್ಯವಿದ್ದಲ್ಲಿ ನಿಯೋಗ ಕೂಡ ತೆರಳಲಿದೆ. ಅದಕ್ಕೂ ಮುನ್ನ ಕೊಡವ ಭಾಷೆ ರಾಜ್ಯ ಭಾಷೆಯಾಗಿ ಅಂಗೀಕಾರವಾಗಬೇಕು. ಈ ಕುರಿತು ಸಂಬAಧಿಸಿದವರು ವಿಧಾನಸಭಾ ಕಲಾಪದಲ್ಲಿ ನಿರ್ಣಯ ಅಂಗೀಕರಿಸಲು ಸಹಕಾರ ನೀಡಬೇಕು ಎಂದರು.

ಕೊಡವ ಭಾಷೆ ಮಾತನಾಡು ವವರ ಸಂಖ್ಯೆ ಕಡಿಮೆ ಇರುವುದು ಹಾಗೂ ಕೊಡವ ಸಮುದಾಯ ರಾಜಕೀಯವಾಗಿ ಪ್ರಬಲವಾಗಿ ಇಲ್ಲದಿರುವುದೇ ಇಷ್ಟು ವರ್ಷಗಳಿಂದ ಕೊಡವ ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸಲು ಸಾಧ್ಯವಾಗದಿರಲು ಕಾರಣವಾಗಿದೆ. ಈ ಹಿಂದೆ ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. ಬಳಿಕ ಜಿಲ್ಲೆಯಾಗಿ ಮಾರ್ಪಟ್ಟು ಕೊಡವ ಭಾಷೆ ಪ್ರಾಮುಖ್ಯತೆ ಕಳೆದುಕೊಂಡಿತು. ರಾಜ್ಯ ಸಭಾ ಸದಸ್ಯರಾಗಿದ್ದ ಪ್ರೇಮಾ ಕಾರ್ಯಪ್ಪ ಹಾಗೂ ಬಿ.ಕೆ. ಹರಿಪ್ರಸಾದ್ ಅವರು ಈ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಗುರಿ ಸಾಧಿಸುವ ತನಕ ನಿರಂತರವಾಗಿ ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದು ಹೇಳಿದರು.

ವಿಚಾರ ಮಂಡಿಸಿದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಕೊಡವ ಭಾಷೆ, ಸಂಸ್ಕೃತಿಗೆ ತನ್ನದೇ ಆದ ಇತಿಹಾಸ ಇದೆ. ಪುರಾಣದಲ್ಲಿಯೂ ಕೊಡವರ ಬಗ್ಗೆ ಪ್ರಸ್ತಾಪವಿದೆ. ಕಾವೇರಿ ಕಣಿವೆ ನಾಗರಿಕತೆಯೊಂದಿಗೆ ಕೊಡವ ಕೊಡವ ಸಂಸ್ಕೃತಿಯೂ ಬೆಳೆದು ಬಂತು. ಕೊಡವ ಭಾಷೆಯ ಬೆಳವಣಿಗೆಗೆ ೮ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗುವುದು ಅತ್ಯಗತ್ಯ ಎಂದರು.

ಕಾರ್ಯಕ್ರಮದಲ್ಲಿ ಶಾಸ್ತಿçÃಯ ಕನ್ನಡ ಅಧ್ಯಯನ ಸಂಸ್ಥೆಯ ಡಾ. ಆರ್.ಚಲಪತಿ, ಮೈಸೂರು ಕೊಡವ ಸಮಾಜದ ಅಧ್ಯಕ್ಷ ಕೇಕಡ ಬೆಳ್ಳಿಯಪ್ಪ, ಕಾರ್ಯದರ್ಶಿ ಮಲ್ಚಿರ ಪೊನ್ನಪ್ಪ, ಪಶ್ಚಿಮಘಟ್ಟ ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಅಕಾಡೆಮಿ ರಿಜಿಸ್ಟಾçರ್ ಅಜ್ಜಿಕುಟ್ಟಿರ ಸಿ. ಗಿರೀಶ್, ಸದಸ್ಯ ನಾಪಂಡ ರವಿ ಕಾಳಪ್ಪ, ಪಡಿಞರಂಡ ಪ್ರಭುಕುಮಾರ್ ಇತರರು ಉಪಸ್ಥಿತರಿದ್ದರು.