ಮಡಿಕೇರಿ, ಅ. ೨೦: ಅರೆಭಾಷೆಗೆ ಅಂರ‍್ರಾಷ್ಟಿçÃಯ ಮಾನ್ಯತೆ ಒದಗಿಸುವುದರ ಜೊತೆಗೆ ಅರೆಭಾಷೆ ಸಂಸ್ಕೃತಿ ಗ್ರಾಮ ನಿರ್ಮಾಣ ಮಾಡಿ; ಮಂಗಳೂರು ವಿವಿಯಲ್ಲಿ ಅರೆಭಾಷೆ ಅಧ್ಯಯನ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಪ್ರಯತ್ನಗಳು ನಡೆಯುತ್ತಿವೆ ಎಂದು ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಮಾಹಿತಿ ನೀಡಿದರು.

ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಮಾತುಕತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅರೆಭಾಷೆಗೆ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಪ್ರಾಧಾನ್ಯತೆಯನ್ನು ನೀಡುವ ಮೂಲಕ ಅದನ್ನು ಅಂರ‍್ರಾಷ್ಟಿçÃಯ ಸಮುದಾಯಕ್ಕೆ

(ಮೊದಲ ಪುಟದಿಂದ) ಪರಿಚಯಿಸುವ ನಿಟ್ಟಿನಲ್ಲಿ ಐಎಸ್‌ಓ ಮಾನ್ಯತೆಗಾಗಿ ಅಕಾಡೆಮಿ ಶ್ರಮಿಸುತ್ತಿದೆ.

ಅರೆಭಾಷೆ ಸಂಸ್ಕೃತಿ ಆಚಾರ - ವಿಚಾರ ಪರಿಸರಗಳ ಬಗ್ಗೆ, ಅಮರ ಸುಳ್ಯ ಹೋರಾಟದ ಬಗ್ಗೆ ಸಮಗ್ರ ಮಾಹಿತಿಗಳನ್ನು ಒಂದೆಡೆ ಬಿಂಬಿಸುವ ನಿಟ್ಟಿನಲ್ಲಿ ಸುಳ್ಯ ತಾಲೂಕಿನಲ್ಲಿ ಅರೆಭಾಷೆ ಸಂಸ್ಕೃತಿ ಗ್ರಾಮವನ್ನು ನಿರ್ಮಿಸಲು ಈಗಾಗಲೇ ಪ್ರಯತ್ನಗಳು ನಡೆಯುತ್ತಿವೆ. ಇದರ ಜೊತೆಗೆ ಅರೆಭಾಷೆ ಬಗ್ಗೆ ಅಧ್ಯಯನಕ್ಕಾಗಿ ಮಂಗಳೂರು ವಿವಿಯಲ್ಲಿ ಅರೆಭಾಷೆ ಅಧ್ಯಯನ ಪೀಠ ಸ್ಥಾಪನೆಗೂ ಶ್ರಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗಳು ಕಾರ್ಯಗತಗೊಳ್ಳಲಿವೆ ಎಂದು ಲಕ್ಷಿö್ಮÃನಾರಾಯಣ ಕಜೆಗದ್ದೆ ವಿಶ್ವಾಸ ವ್ಯಕ್ತಪಡಿಸಿದರು. ಅರೆಭಾಷೆ ರಂಗಭೂಮಿಯನ್ನು ಕಟ್ಟುವ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಅರೆಭಾಷೆಯಲ್ಲಿ ಯಕ್ಷಗಾನ ಪ್ರದರ್ಶಿಸುವ ಸಂಬAಧ ಈಗಾಗಲೇ ಐದು ಪ್ರಸಂಗಗಳನ್ನು ಅರೆಭಾಷೆಗೆ ಅನುವಾದಿಸುವ ಕೆಲಸವೂ ನಡೆದಿದೆ. ಅರೆಭಾಷೆಯಲ್ಲಿ ಗಮಕ, ಸುಗಮ ಸಂಗೀತ, ಹಾಡುಗಳು ಹೊರಬರಬೇಕೆನ್ನುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ.

ಅಕಾಡೆಮಿ ಪ್ರಕಟಿತ ಪುಸ್ತಕಗಳ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ. ಅರೆಭಾಷೆ ಶಬ್ಧಕೋಶ ರಚನೆಗೂ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಮಾಹಿತಿಯಿತ್ತರು. ಅರೆಭಾಷೆಗೆ ಸಂಬAಧಿಸಿದ ಪಾರಂಪರಿಕ ವಸ್ತುಗಳನ್ನು ಚಿತ್ರ ಹಾಗೂ ಬರಹದಲ್ಲಿ ದಾಖಲೀಕರಣ ಮಾಡುವ ಕೆಲಸವೂ ಪ್ರಗತಿಯಲ್ಲಿದೆ. ಕಾಲೇಜುಗಳಲ್ಲಿ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಸಂಘ ಸ್ಥಾಪಿಸಿ ಅರೆಭಾಷೆ ಸಂಸ್ಕೃತಿಯನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಅರೆಭಾಷೆ ವಿಶ್ವ ಕೋಶದ ಕೆಲಸವೂ ನಡೆಯುತ್ತಿದೆ ಎಂದು ವಿವರಿಸಿದ ಲಕ್ಷಿö್ಮÃನಾರಾಯಣ ಕಜೆಗದ್ದೆ ತಮ್ಮ ಅವಧಿಯಲ್ಲಿ ಇದುವರೆಗೆ ಅರೆಭಾಷೆ ಬೆಳವಣಿಗೆ ಸಂಬAಧ ಅಕಾಡೆಮಿಯಿಂದ ಹಮ್ಮಿಕೊಂಡ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಅಕಾಡೆಮಿಯ ಸದಸ್ಯರಾದ ಅಗೊಳಿಕಜೆ ಧನಂಜಯ ಮಾತನಾಡಿ, ಅರೆಭಾಷೆ ಅಕಾಡೆಮಿಯಿಂದ ಅರೆಭಾಷೆ ಸಂಸ್ಕೃತಿ ಆಚಾರ - ವಿಚಾರಗಳ ಕುರಿತ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯ ಸ್ಥಾಪನೆಗೂ ಪ್ರಯತ್ನಗಳು ನಡೆದಿದೆ ಎಂದು ಮಾಹಿತಿಯಿತ್ತರು. ಡಾ. ದಯಾನಂದ ಹಾಗೂ ಪ್ರೇಮಾ ರಾಘವಯ್ಯ ಮಾತನಾಡಿ, ಅರೆಭಾಷೆ ಸಂಸ್ಕೃತಿ ಸಾಹಿತ್ಯವನ್ನು ಉಳಿಸಿಬೆಳೆಸುವ ದಿಸೆಯಲ್ಲಿ ಅಕಾಡೆಮಿ ಶ್ರಮವಹಿಸುತ್ತಿದೆ ಎಂದು ಹೇಳಿದರು. ಬೈತಡ್ಕ ಜಾನಕಿ ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್ ಅಧ್ಯಕ್ಷ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕ ನುಡಿಯಾಡಿದರು. ಜಂಟಿ ಕಾರ್ಯದರ್ಶಿ ಪ್ರಜ್ಞಾ ಪ್ರಾರ್ಥಿಸಿ, ಖಜಾಂಚಿ ಬೊಳ್ಳಜಿರ ಅಯ್ಯಪ್ಪ ನಿರೂಪಿಸಿದರು. ನಿರ್ದೇಶಕ ನವೀನ್ ಡಿಸೋಜ ಸ್ವಾಗತಿಸಿ, ಪ್ರಸಿನ್ ವಂದಿಸಿದರು.