ಕೂಡಿಗೆ, ಅ. ೨೧: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಭತ್ತ ಬೆಳೆಗೆ ಭಾರೀ ತೊಂದರೆ ಉಂಟಾಗುತ್ತಿದೆ. ಅಲ್ಲದೆ ಬೆಳೆಯು ಉತ್ತಮವಾಗಿ ಬೆಳೆದಿರುವುದ ರಿಂದ ಗಾಳಿ ಮಳೆಗೆ ನೆಲಕಚ್ಚುತ್ತಿದೆ.

ಈ ವರ್ಷ ಹಾರಂಗಿಯ ಕೂಡಿಗೆ, ಅ. ೨೧: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಭತ್ತ ಬೆಳೆಗೆ ಭಾರೀ ತೊಂದರೆ ಉಂಟಾಗುತ್ತಿದೆ. ಅಲ್ಲದೆ ಬೆಳೆಯು ಉತ್ತಮವಾಗಿ ಬೆಳೆದಿರುವುದ ರಿಂದ ಗಾಳಿ ಮಳೆಗೆ ನೆಲಕಚ್ಚುತ್ತಿದೆ.

ಈ ವರ್ಷ ಹಾರಂಗಿಯ ಹಂತಕ್ಕೆ ಬಂದಿದೆ. ಅಕಾಲಿಕ ಮಳೆಯಿಂದಾಗಿ ಭತ್ತ ಬೆಳೆಯು ಗರ್ಭಧರಿಸಿ ಕಾಳುಕಟ್ಟುವ ಜಾಗಕ್ಕೆ ಮಳೆ ನೀರು ಬೀಳುವುದರಿಂದಾಗಿ ಭತ್ತ ಬೆಳೆಯು ಹೆಚ್ಚಾಗಿ ಜೊಳ್ಳು ಅಲ್ಲದೆ ಕರಿಕಡ್ಡಿಯಾಗುವುದರ ಪರಿಣಾಮ ಬೆಳೆಯ ಇಳುವರಿ ಕಡಿಮೆಯಾಗುತ್ತಿದೆ.

ಈ ಸಾಲಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭತ್ತದ ಬೆಳೆ ಹಾಳಾಗುವ ಸಾಧ್ಯತೆ ಇದೆ. ಈಗಾಗಲೇ ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿ ಭತ್ತ ಬೆಳೆ ಕಾಳುಕಟ್ಟುವ ಹಂತಕ್ಕೆ ತಲುಪಿದೆ. ಅಕಾಲಿಕ ಮಳೆಯಿಂದಾಗಿ ಈ ಬಾರಿ ಜೋಳದ ಬೆಲೆಯ ಕುಸಿತ ಉಂಟಾಗಿ ಈ ವ್ಯಾಪ್ತಿಯ ರೈತರಿಗೆ ಭಾರೀ ನಷ್ಟ ಉಂಟಾಗಿದೆ. ಜೊತೆಗೆ ಈ ಭಾಗಗಳಲ್ಲಿ ಬೆಳೆದ ಸಿಹಿಗೆಣಸು, ಮರಗೆಣಸು, ಶುಂಠಿ ಬಾಳೆ ಸೇರಿದಂತೆ ಎಲ್ಲಾ ಬೆಳೆಗಳಿಗೆ ಸಮರ್ಪಕವಾದ ಬೆಲೆಯಿಲ್ಲದೆ ರೈತರು ಆತಂಕ ಪಡುವಂತಹ ಸ್ಥಿತಿ ಎದುರಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ.