ಸುAಟಿಕೊಪ್ಪ, ಅ. ೨೧: ಅಪ್ರಾಪ್ತೆ ಮೇಲೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನಡೆಸಿರುವುದಾಗಿ ಪ್ರಕರಣ ದಾಖಲಾಗಿದೆ.
ಗರಗಂದೂರು ‘ಬಿ’ ಹೊಸತೋಟದ ಹಂಸ (೫೪) ಬಂಧಿತ ಆರೋಪಿ. ತಾ. ೧೯ ರಂದು ಒಬ್ಬಂಟಿಯಾಗಿದ್ದ ೧೪ ವರ್ಷದ ಅಪ್ರಾಪ್ತೆಯನ್ನು ಆರೋಪಿ ಹಂಸ ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿ ಯಾರಿಗೂ ಹೇಳಬಾರದೆಂದು ರೂ. ೮೦ ನಗದನ್ನು ನೀಡಿ ಕಳುಹಿಸಿರುವುದಾಗಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಬಾಲಕಿಯ ಅತ್ತೆ ಸುಂಟಿಕೊಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.
ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಪುನೀತ್ ಹಾಗೂ ಸಿಬ್ಬಂದಿಗಳು ಆರೋಪಿ ಹಂಸನನ್ನು ಬಂಧಿಸಿ ಪೋಕ್ಸೊ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.