ಸಿದ್ದಾಪುರ, ಅ. ೧೯: ಸಿ.ಪಿ.ಐ.(ಎಂ) ಪಕ್ಷದ ಕೊಡಗು ಜಿಲ್ಲಾ ಸಮ್ಮೇಳನ ಹಾಗೂ ಬಹಿರಂಗ ಸಮಾವೇಶವು ಎರಡು ದಿನಗಳ ಕಾಲ ಸಿದ್ದಾಪುರದ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆಯಿತು. ಸಿ.ಪಿ.ಐ.(ಎಂ) ಪಕ್ಷದ ಹಿರಿಯ ಮುಖಂಡ ಶ್ರೀಧರ್ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಬಹಿರಂಗ ಸಮಾವೇಶವನ್ನು ಉದ್ಘಾಟಿಸಿ ಪಕ್ಷದ ರಾಜ್ಯ ಮುಖಂಡರಾದ ಬಾಲಕೃಷ್ಣ ಶೆಟ್ಟರು ಮಾತನಾಡಿ, ಕಳೆದೆರಡು ವರ್ಷಗಳಿಂದ ಮಹಾಮಾರಿ ಕೋವಿಡ್ ೧೯ ರ ಜೊತೆಗೆ ಜೀವನ ಸಾಗಿಸುತ್ತಿದ್ದೇವೆ. ಜನರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಪ್ರತಿಯೊಬ್ಬರಿಗೆ ಲಸಿಕೆ ನೀಡುವಂತಾಗಬೇಕೆAದು ಸಲಹೆ ನೀಡಿದರು. ಕೇಂದ್ರ ಸರ್ಕಾರ ಕಾರ್ಮಿಕರ ಕಾನೂನು ತಿದ್ದುಪಡಿ ಮಾಡುವುದರ ಮೂಲಕ ಕಾರ್ಮಿಕರನ್ನು ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಬಂಡವಾಳ ಶಾಹಿಗಳ ಪರ ಇದ್ದು, ಕಾರ್ಮಿಕರ ಶೋಷಣೆ ಮಾಡುತ್ತಿರುವುದರ ವಿರುದ್ಧ ಸಿ.ಪಿ.ಐ.(ಎಂ) ಪಕ್ಷ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. ರೈತರ ವಿರುದ್ಧ ಕೂಡ ಕಾಯ್ದೆಗಳನ್ನು ಜಾರಿಗೆ ತಂದು ಅನಗತ್ಯವಾಗಿ ತೊಂದರೆ ಮಾಡುತ್ತಿರುವುದಾಗಿ ದೂರಿದರು.

ಈ ಸಂದರ್ಭ ಪಕ್ಷದ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಯಾಗಿ ಹೆಚ್.ಬಿ. ರಮೇಶ್, ಸಿ. ಸಾಬು, ಎ. ಮಹದೇವಾ, ಶಾಜಿ, ರಮೇಶ್, ಪದ್ಮಿನಿ, ಹೆಚ್.ಆರ್. ಶಿವಪ್ಪ, ವೈ.ಕೆ. ಗಣೇಶ ಖಾಯಂ ಆಹ್ವಾನಿತರಾಗಿ ಡಾ. ದುರ್ಗಾಪ್ರಸಾದ್, ಎನ್.ಡಿ. ಕುಟ್ಟಪ್ಪರವರನ್ನು ಆಯ್ಕೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಸಿ.ಪಿ.ಐ.(ಎಂ) ಪಕ್ಷದ ರಾಜ್ಯ ಮುಖಂಡ ಧರ್ಮೇಶ್, ಜಿಲ್ಲಾ ಮುಖಂಡರುಗಳಾದ ಎನ್.ಡಿ. ಕುಟ್ಟಪ್ಪನ್, ಹೆಚ್.ಬಿ. ರಮೇಶ್, ಪಿ.ಆರ್. ಭರತ್, ಸಿ. ಸಾಬು ಇನ್ನಿತರರು ಹಾಜರಿದ್ದರು.