ಮಡಿಕೇರಿ, ಅ. ೧೯: ವಿಶ್ವದಾದ್ಯಂತ ಕೋವಿಡ್ ಅಲೆ ಪ್ರಾರಂಭವಾದಾಗಿನಿAದ ಅದರ ನಿವಾರಣೆ., ಸೋಂಕು ಪೀಡಿತರ ಜೀವ ಉಳಿಸುವ ಸಲುವಾಗಿ ತಮ್ಮ ಜೀವದ ಹಂಗು ತೊರೆದು ಹಗಲಿರುಳು ಶ್ರಮಿಸಿದವರು ಆರೋಗ್ಯ ಇಲಾಖಾ ಸಿಬ್ಬಂದಿಗಳು., ವೈದ್ಯರು, ಶುಶ್ರೂಷಕಿಯರು, ಸಿಬ್ಬಂದಿಗಳು ಇದರಲ್ಲಿ ಪಾಲುದಾರರು., ಊಟ, ನಿದ್ರೆ, ತಮ್ಮ ಸಂಸಾರವನ್ನು ತೊರೆದು ಹೋರಾಡಿದ ಇವರುಗಳನ್ನು ಸರಕಾರ ಕೊರೊನಾ ವಾರಿರ‍್ಸ್ ಎಂಬ ಬಿರುದು ನೀಡಿ ಗೌರವಿಸಿದೆ.., ಆದರೀಗ ಅದೇ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶುಶ್ರೂಷಕಿಯರಿಗೆ ಯಾವದೇ ಸೌಲಭ್ಯ ನೀಡದೆ, ನೀಡಿರುವ ಸೇವಾವಧಿ ಮುಗಿಯುವ ಮುನ್ನವೇ ಅವರುಗಳನ್ನು ಮನೆಗೆ ಕಳುಹಿಸಲಾಗುತ್ತಿದ್ದು, ಇದೇ ಕೆಲಸವನ್ನೇ ನಂಬಿರುವ ಬಡಪಾಯಿಗಳಿಗೆ ಸಂಕಷ್ಟವನ್ನು ತಂದೊಡ್ಡಿದೆ..! ಸರಕಾರ ಮುಂದಿನ ಮೂರು ತಿಂಗಳ ಅವಧಿಗೆ ಈ ಸಿಬ್ಬಂದಿಗಳ ಸೇವೆಯನ್ನು ಮುಂದೂಡಿದ್ದರೂ ವೈದ್ಯಕೀಯ ವಿಜ್ಞಾನ ಸಂಸ್ಥೆಯಿAದ ಇವರುಗಳನ್ನು ಬಿಡುಗಡೆಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಸಂಬAಧಿಸಿದವರಲ್ಲಿ ಪ್ರಶ್ನಿಸಿದ ಸಂದರ್ಭ ‘ಸರಕಾರದಲ್ಲಿ ದುಡ್ಡಿಲ್ಲ’ ಎಂಬ ಮಾಹಿತಿ ಹೊರಬಿದ್ದಿದೆ..!?

ಕೋವಿಡ್ ಅಲೆ ಅಧಿಕವಾಗುತ್ತಿದ್ದಂತೆ ಅದನ್ನು ನಿಭಾಯಿಸುವ ಸಲುವಾಗಿ ಸರಕಾರ ಕೋವಿಡ್ ಆಸ್ಪತ್ರೆಗಳನ್ನು ತೆರೆದು ಗುತ್ತಿಗೆ ಆಧಾರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಕಾತಿ ಮಾಡಿದೆ. ಅಂತೆಯೇ ಕೊಡಗು ಜಿಲ್ಲೆಯಲ್ಲಿಯೂ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ತುರ್ತು ನೇಮಕಾತಿಗಾಗಿ ಜಿಲ್ಲಾಧಿಕಾರಿಗಳು ಕಳೆದ ಮೇ ತಿಂಗಳಲ್ಲಿ ಪ್ರಕಟಣೆ ಹೊರಡಿಸಿದ್ದರು. ಗುತ್ತಿಗೆ ಆಧಾರದ ಮೇಲೆ ಆರು ತಿಂಗಳ ಅವಧಿಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಣೆಯಾಗುವವರೆಗೆ ಯಾವದು ಮೊದಲೋ ಅಲ್ಲಿಯವರೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ಅರ್ಜಿ ಸಲ್ಲಿಸಿದ್ದವರನ್ನು ನೇಮಕಾತಿ ಕೂಡ ಮಾಡಿಕೊಳ್ಳಲಾಗಿದೆ.

ಸೇವೆ ಮುಂದುವರಿಸಿ ಆದೇಶ

ಈ ನಡುವೆ ಸರಕಾರದ ಆದೇಶದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಶಿವಶಂಕರ್ ಅವರು ತಾ.೩೦.೯.೨೦೨೧ರಂದು ಆದೇಶವೊಂದನ್ನು ಹೊರಡಿಸಿದ್ದಾರೆ. ಇಲಾಖೆಯ ವಿವಿಧ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಪ್ರಕರಣವನ್ನು ನಿರ್ವಹಿಸಲು ಕೋವಿಡ್೧ ಮತ್ತು೨ನೇ ಅಲೆಯ ಸಂದರ್ಭದಲ್ಲಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾದ ಅಂದಾಜು ೪೯೬೧ ವೈದ್ಯರು, ಸಿಬ್ಬಂದಿಗಳ ಸೇವೆಯನ್ನು ಈ ಹಿಂದೆ ತಿಳಿಸಿರುವ ಷರತ್ತು ಮತ್ತು ನಿಬಂಧನೆಗಳೊAದಿಗೆ ದಿನಾಂಕ ೧.೧೦.೨೦೨೧ರಿಂದ ದಿನಾಂಕ ೩೧.೧೨.೨೦೨೧ರವರೆಗೆ ೩ತಿಂಗಳ ಅವಧಿಗೆ ಮುಂದುವರಿಸಲು ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.

ಬಿಡುಗಡೆಗೆ ಕ್ರಮ

ಸರಕಾರ ಮೂರು ತಿಂಗಳ ಅವಧಿಗೆ ಮುಂದುವರಿಸಿ ಆದೇಶ ಹೊರಡಿಸಿದ್ದರೆ, ಇತ್ತ ವೈದ್ಯಕೀಯ ವಿಜ್ಞಾನ ಸಂಸ್ಥೆಯಿAದ ಶುಶ್ರೂಷಕಿಯರನ್ನು ಸೇವೆಯಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

(ಮೊದಲ ಪುಟದಿಂದ) ಈಗಾಗಲೇ ಒಂದು ಬ್ಯಾಚ್ ಅನ್ನು ಬಿಡುಗಡೆಗೊಳಿಸಲಾಗಿದ್ದು, ಮತ್ತೊಂದು ಬ್ಯಾಚ್‌ನ ೧೪ ಮಂದಿಯನ್ನು ಬಿಡುಗಡೆಗೊಳಿಸುವಂತೆ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಶುಶ್ರೂಷಕ ಅಧಿಕಾರಿ ಬೋಧಕ ಆಸ್ಪತ್ರೆಯ ಅಧಿಕಾರಿಗಳಿಗೆ ಲಿಖಿತ ಪತ್ರ ಕಳುಹಿಸಿದ್ದಾರೆ. ಆದರೆ, ಕೋವಿಡ್ ೧ನೇ ಅಲೆಯಲ್ಲಿ ಇದೇ ರೀತಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರನ್ನು ಸೇವೆಯಲ್ಲಿ ಮುಂದುವರಿಸಲಾಗಿದೆ.

ಒAದು ತಿಂಗಳ ವಿಸ್ತರಣೆ

ಇನ್ನೂ ಕೂಡ ಸೇವಾವಧಿ ಮುಗಿಯದಿದ್ದರೂ, ಸರಕಾರ ಮೂರು ತಿಂಗಳ ಕಾಲ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದರೂ ಯಾವದೇ ಮುನ್ಸೂಚನೆ ನೀಡದೆ ಸೇವೆಯಿಂದ ಬಿಡುಗಡೆಗೊಳಿಸಲು ಆದೇಶ ಮಾಡಿರುವದರಿಂದ ಕಂಗೆಟ್ಟಿರುವ ಶುಶ್ರೂಷಕಿಯರು ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಅಧೀಕ್ಷಕರಿಗೆ ಮನವಿ ಸಲ್ಲಿಸಿ ಸೇವೆಯಲ್ಲಿ ಮುಂದುವರಿಸುವAತೆ ಕೋರಿಕೊಂಡ ಮೇರೆಗೆ ಕಾರ್ಯನಿರ್ವಹಣಾಧಿಕಾರಿಗಳು ಒಂದು ತಿಂಗಳ ಅವಧಿಗೆ ಮುಂದುವರಿಸುವದಾಗಿ ಭರವಸೆ ನೀಡಿದ್ದಾರೆ.

ಸೌಲಭ್ಯ ಸಿಕ್ಕಿಲ್ಲ

ನೇಮಕಾತಿ ಸಂಬAಧ ಜಿಲ್ಲಾಧಿಕಾರಿಗಳು ಹೊರಡಿಸಿದ ಪ್ರಕಟಣೆಯಲ್ಲಿ ಕನಿಷ್ಟ ೧೦೦ ದಿನಗಳವರೆಗೆ ಕೋವಿಡ್ ಚಿಕಿತ್ಸೆ ನೀಡುವಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗಳು ಸರಕಾರದಿಂದ ಘೋಷಿಸುವ ಪ್ರೋತ್ಸಾಹ ಧನ ಪಡೆಯಲು ಮತ್ತು ಪ್ರಧಾನ ಮಂತ್ರಿಗಳ ರಾಷ್ಟಿçÃಯ ಕೋವಿಡ್ ಸೇವೆಗಳ ಸಮ್ಮಾನದ ಆಯ್ಕೆಗೆ ಅರ್ಹರಿರುತ್ತಾರೆ. ಕೋವಿಡ್೧೯ ನಿಮಿತ್ತ ಕರ್ತವ್ಯಕ್ಕೆ ನೇಮಕಗೊಂಡ ಸಿಬ್ಬಂದಿಗಳು ಸರಕಾರದ ಆರೋಗ್ಯ ವಿಮೆಗೆ ಒಳಪಡುತ್ತಾರೆ ಎಂದು ನಮೂದಿಸಲಾಗಿದೆ. ಆದರೆ, ಈ ಯಾವದೇ ಸೌಲಭ್ಯಗಳು ಈ ಸಿಬ್ಬಂದಿಗಳಿಗೆ ಇದುವರೆಗೂ ದೊರೆತಿರುವದಿಲ್ಲ. ಅಲ್ಲದೆ, ಇದೀಗ ಪಾಳಿಯ ಅವಧಿಯನ್ನು ಕೂಡ ವಿಸ್ತರಣೆ ಮಾಡಲಾಗಿದ್ದು, ೧೨ಗಂಟೆಗಳ ಕಾಲ ಕೆಲಸ ಮಾಡಬೇಕಿದೆ. ಒಂದು ಪಿಪಿಇ ಕಿಟ್ ಅನ್ನು ೮ ಗಂಟೆಗಳ ಬಳಿಕ ಬದಲಿಸಬೇಕಿದ್ದರೂ ಇವರುಗಳಿಗೆ ದಿನಕ್ಕೆ ಒಂದೇ ಕಿಟ್ ನೀಡಲಾಗುತ್ತಿದ್ದು, ಶೌಚಕ್ಕೂ ಕೂಡ ತೆರಳಲಾಗದೇ ಒಂದೇ ಕಿಟ್ ಧರಿಸಿ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಭವಿಷ್ಯದ ಬಗ್ಗೆ ಚಿಂತೆ

ರಾಜ್ಯದ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶುಶ್ರೂಷಕಿಯರು ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿದ ಸಂತೋಷದಲ್ಲಿ ಬಂದು ಸೇರಿಕೊಂಡಿದ್ದಾರೆ. ತಮ್ಮ ಸೇವೆ ಮುಂದುವರಿಯಬಹುದೆAಬ ಆಶಾಭಾವನೆಯಲ್ಲಿದ್ದವರಿಗೆ ಇದೀಗ ಅವಧಿ ಮುಗಿಯುವ ಮುನ್ನವೇ ಬಿಡುಗಡೆಯ ಆದೇಶ ಬಂದಿರುವದರಿAದ ಚಿಂತಿತರಾಗಿದ್ದಾರೆ. ಮತ್ತೆ ಬೇರೆ ಕಡೆಗಳಲ್ಲಿ ಕೆಲಸ ಹುಡುಕಿಕೊಂಡು ಕೆಲಸ ಪಡೆಯಬೇಕಾದರೆ ಸಮಯಾವಕಾಶ ಬೇಕಾಗಲಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ೧ನೇ ಅಲೆಯಲ್ಲಿ ನೇಮಿಸಿಕೊಂಡವರಿಗೆ ನೀಡಿದಂತೆ ತಮಗೂ ಅವಕಾಶ ನೀಡುವಂತೆ ಕೋರಿಕೊಂಡಿದ್ದಾರೆ. ?ಕುಡೆಕಲ್ ಸಂತೋಷ್