ಮಡಿಕೇರಿ, ಅ. ೧೯: ವಾರಾಂತ್ಯದಲ್ಲಿನ ಸಾಲು ಸಾಲು ಸರಕಾರೀ ರಜೆಗಳಿಂದಾಗಿ ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ. ಮಂಜಿನ ನಗರಿಯ ಪ್ರಮುಖ ಉದ್ಯಾನ ರಾಜಾಸೀಟ್ ಹಾಗೂ ರಾಜರ ಗದ್ದುಗೆಯಲ್ಲಿ ಪ್ರವಾಸಿಗರ ಕಲರವ ಕಂಡು ಬರುತ್ತಿದೆ..

ಮಡಿಕೇರಿ ದಸರಾ ಹಾಗೂ ಕಾವೇರಿ ಸಂಕ್ರಮಣ ಜಾತ್ರೆ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣ ಸಂಬAಧ ಜಿಲ್ಲಾಧಿಕಾರಿಗಳಾಗಿದ್ದ ಚಾರುಲತಾ ಸೋಮಲ್ ಅವರು ರಾಜಾಸೀಟ್ ಹಾಗೂ ರಾಜರ ಗದ್ದುಗೆಗೆ ಪ್ರವೇಶ ನಿಷೇಧಿಸಿ ಬೀಗ ಜಡಿದಿದ್ದರು. ಹಾಗಾಗಿ ತಾ. ೭ ರಿಂದ ೧೭ ರವರೆಗೆ ಈ ಎರಡೂ ತಾಣಗಳೂ ಬಂದ್ ಆಗಿದ್ದವು. ಇದೀಗ ನಿನ್ನೆಯಿಂದ ಬೀಗ ತೆರೆಯಲಾಗಿದ್ದು, ಪ್ರವಾಸಿಗರು ತಾಣಗಳಿಗೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ ಕೊಳ್ಳುತ್ತಿದ್ದಾರೆ.

ಕಳೆದ ತಾ. ೯ ರಿಂದ ೫ ರಿಂದ ೬ ರಜೆಗಳಿದ್ದುದರಿಂದ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಾದರೂ ಬೀಗ ಜಡಿದ್ದರಿಂದ ನಿರಾಸೆಯಿಂದ ಮರಳಿದ್ದರು. ದಸರಾಗೆ ಸಹಸ್ರ ಸಂಖ್ಯೆಯಲ್ಲಿ ಬಂದಿದ್ದ ಜನರು ಕೂಡ ರಾಜಾಸೀಟಿನ ಗೇಟಿನವರೆಗೆ ತೆರಳಿ ನಿರಾಸೆಗೊಂಡು ರಸ್ತೆಯಲ್ಲೇ ತಿರುಗಾಡುತ್ತಾ ದಶಮಂಟಪಗಳ ಸೊಬಗನ್ನು ಕಣ್ತುಂಬಿಕೊAಡರು.

? ಸಂತೋಷ್, ಚಿತ್ರ : ಲಕ್ಷಿö್ಮÃಶ್