ಮುಳ್ಳೂರು, ಅ. ೧೯ : ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಹಿಂದೂ ಸಮುದಾಯದ ಬಡವರ್ಗದವರನ್ನು ಗುರಿ ಮಾಡಿಕೊಂಡು ಕ್ರೆöÊಸ್ತ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡುತ್ತಿರುವ ದಂಧೆ ಹಾಗೂ ಶನಿವಾರಸಂತೆ ಗ್ರಾ.ಪಂ. ಅರೆಕಾಲಿಕ ನೌಕರನೊಬ್ಬ ಶನಿವಾರಸಂತೆಯ ಮನೆಯೊಂದರಲ್ಲಿ ಬಲವಂತವಾಗಿ ಮತಾಂತರ ಮಾಡುತ್ತಿದ್ದ ಆರೋಪದಲ್ಲಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೂ ಗ್ರಾ.ಪಂ. ಆ ನೌಕರನನ್ನು ತಾತ್ಕಾಲಿಕವಾಗಿ ವಜಾಗೊಳಿಸಿರುವ ಕ್ರಮವನ್ನು ವಿರೋಧಿಸಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಬೃಹತ್

(ಮೊದಲ ಪುಟದಿಂದ) ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ್ಟಣದ ಕೆಆರ್‌ಸಿ ವೃತ್ತದಿಂದ ನಾಡ ಕಚೇರಿವರೆಗೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.

ಕೆಆರ್‌ಸಿ ವೃತ್ತದಲ್ಲಿ ಪ್ರತಿಭಟನೆಗಾರರನ್ನುದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ್ಯ ಸಂಚಾಲಕ ಗಣರಾಜ್ ಭಟ್, ಎಲ್ಲೆಡೆಯಲ್ಲೂ ಸದ್ದಿಲ್ಲದೆ ಹಿಂದೂಗಳನ್ನು ಮತಾಂತರ ಮಾಡುತ್ತಿರುವುದು ದಂಧೆಯಾಗಿದೆ, ಹಿಂದೂ ಬಡವರನ್ನು ಗುರುತಿಸಿ ಮತಾಂತರದಲ್ಲಿ ತೊಡಗಿಸಿಕೊಂಡಿದ್ದಾರೆ, ಅನಾರೋಗ್ಯದಿಂದ ಬಳಲುತ್ತಿರುವವರನ್ನು, ಆರ್ಥಿಕ ಪರಿಸ್ಥಿತಿಯಿಂದ ಹಿಂದುಳಿದವರನ್ನು ಕ್ರೆöÊಸ್ತ ಮತಕ್ಕೆ ಮತಾಂತರ ಮಾಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು. ಹಿಂದೂಗಳನ್ನು ಮತಾಂತರ ಮಾಡುತ್ತಿರುವ ಪ್ರಕರಣಗಳನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಹಿಂದೂಪರ ಸಂಘಟನೆ ಜಿಲ್ಲೆ, ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ, ಈಗಾಗಲೇ ಕ್ರೆöÊಸ್ತ ಮತಕ್ಕೆ ಮತಾಂತರಗೊAಡ ಹಿಂದೂಗಳನ್ನು ಮಾತೃ ಧರ್ಮಕ್ಕೆ ಕರೆತರುವವರೆಗೂ ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು. ಒಂದು ಕೋಮಿನವರು ಮತಾಂತರ ದಂಧೆಯಾಗಿದ್ದರೆ ಮತ್ತೊಂದು ಕೋಮಿನ ಸಂಘಟನೆಗಳು ಲವ್ ಜಿಹಾದ್, ಗೋಹತ್ಯೆ ಮುಂತಾದ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದು ಇದನ್ನು ಹಿಂದೂಪರ ಸಂಘಟನೆ ಸದೆ ಬಡಿಯುವ ಕೆಲಸ ಮಾಡಲಿದೆ, ಹಿಂದೂ ಸಂಘಟನೆಗಳು ಎಂದೂ ಕೋಮು ಗಲಭೆಗಳನ್ನು ಮಾಡಿಲ್ಲ ಎಂದು ಸಮರ್ಥಿಸಿದರು.

ಜಿಲ್ಲೆ ಮತ್ತು ಶನಿವಾರಸಂತೆ, ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮತಾಂತರ ದಂಧೆಗೆ ಸರಕಾರ ಕಡಿವಾಣ ಹಾಕುವುದು, ಮತಾಂತರ ಮಾಡುತ್ತಿದ್ದ ಗ್ರಾ.ಪಂ. ಹಂಗಾಮಿ ನೌಕರ ಬಂಧಿತ ಆರೋಪಿಯನ್ನು ತಕ್ಷಣ ಕೆಲಸದಿಂದ ವಜಾಗೊಳಿಸುವಂತೆ ಹಿಂದೂ ಸಂಘಟನೆ ಒತ್ತಾಯಿಸಿ ಮನವಿ ಪತ್ರವನ್ನು ಕಂದಾಯ ಇಲಾಖೆ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದರು. ಮನವಿ ಪತ್ರವನ್ನು ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ವೃತ್ತ ನಿರೀಕ್ಷರಿಗೂ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಹಿಂದೂಜಾಗರಣ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಸುಭಾಷ್, ತಿಮ್ಮಯ್ಯ, ಸಹ ಸಂಪರ್ಕ್ ಪ್ರಮುಖ್ ಉಮೇಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸುನಿಲ್, ಪ್ರಧಾನ ಕಾರ್ಯದರ್ಶಿ ರಂಜಿತ್‌ಗೌಡ, ಹಿಂದೂಪರ ಸಂಘಟನೆಯ ಪ್ರಮುಖರಾದ ಹರೀಶ್, ಎಸ್.ಎನ್.ರಘು, ಮಹೇಶ್, ಧನಂಜಯ್, ಯೋಗಾನಂದ್, ಪ್ರವೀಣ್, ಭುವನೇಶ್ವರಿ, ತನ್ಮಯ್, ಸಂದೀಪ್, ಯತೀಶ್, ರಾಜು ಮುಂತಾದವರಿದ್ದರು.