ಕಡಂಗ: ಕಡಂಗ ಬದ್ರಿಯ ಮುಸ್ಲಿಂ ಜಮಾಅತ್ ಮತ್ತು ಮುಯ್ಯದ್ದಿನ್ ಜಮಾಅತ್ ಅಧೀನದಲ್ಲಿ ಈದ್‌ಮಿಲಾದ್ ಆಚರಿಸಲಾಯಿತು. ಮೆರವಣಿಗೆಗಳಿಲ್ಲದೆ ಸರಳಯುತವಾಗಿ ನಡೆದಂತಹ ಕಾರ್ಯಕ್ರಮದಲ್ಲಿ ಕೊಕ್ಕಂಡ ಬಾಣೆ ಮಖಾಂ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಕತೀಬ್ ರಿಯಾಝ್ ಫಾಳಿಲಿ ಮತ್ತು ಹಮೀದ್ ದಾರಿಮಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ತಾಜುಲ್ ಉಲಮಾ ವಿದ್ಯಾರ್ಥಿಗಳ ಮತ್ತು ಎಂಯುಎA ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ, ಮದ್ಹ್ ಹಾಡು ಮತ್ತು ಭಾಷಣ ಮುಂತಾದ ಕಾರ್ಯಕ್ರಮಗಳು ಜರುಗಿತು.

ಸಮಾರೋಪ ಸಮಾರಂಭದಲ್ಲಿ ಬದ್ರಿಯಾ ಮುಸ್ಲಿಂ ಜಮಾಅತ್‌ನ ಅಧ್ಯಕ್ಷ ಸುಲೈಮಾನ್, ಸದರ್ ಮುಹಲ್ಲಿಂ ಹಾರಿಸ್ ಬಾಯನಿ, ಹುಸೈನ್ ರ್, ಅಬ್ದುಲ್‌ರೆಹಮಾನ್ ಸಹದಿ ಉಸ್ತಾದ್, ಜೂಫೈರ್, ರಜಾಕ್ ಉಸ್ತಾದ್ ಮುಹ್ಯಾದ್ದಿನ್ ಜುಮಾ ಮಸೀದಿಯ ಖತೀಬ್ ಹಮೀದ್ ದಾರಿಮಿ ಉಸ್ತಾದ್, ಸುಹೈಬ್ ಫೈಜಿ, ಅಧ್ಯಕ್ಷ ಅಬ್ದುಲ್ಲಾ ಸೇರಿದಂತೆ ಇನ್ನಿತರರು ಹಾಜರಿದ್ದರು.

ಸಿದ್ದಾಪುರ: ಹಾಕತ್ತೂರು ಬದರ್ ಜಮಾಅತ್ ಅಧೀನದ ಶಾದಿ ಮಹಲ್ ನಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಜಮಾಅತ್ ಅಧ್ಯಕ್ಷರಾದ ಪಿ.ಯಂ ಅಬ್ದುಲ್ಲಾ ಹಾಜಿ ಅವರು ಧ್ವಜಾರೋಹಣ ಮಾಡಿದರು. ಹಾಕತ್ತೂರು ಮಸೀದಿ ಖತೀಬರು ಪ್ರವಾದಿ ಸಂದೇಶವನ್ನು ಸಾರಿದರು. ನಮ್ಮ ಹಾಕತ್ತೂರು ವಾಟ್ಸಾಪ್ ತಂಡದ ಸಹಯೋಗದಲ್ಲಿ ಮದರಸ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜಮುಖಿ ಕಾರ್ಯದ ಮುಂಚೂಣಿ ಕಾರ್ಯಕರ್ತರಿಗೆ ಮತ್ತು ಸ್ಥಳೀಯ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಪ್ರವಾದಿ ಸಂದೇಶವನ್ನು ಸಾರುವ ಹಲವು ಕಾರ್ಯಕ್ರಮಗಳು ನಡೆಯಿತು. ಬಳಿಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭ ಜಮಾಅತ್ ಉಪಾಧ್ಯಕ್ಷರಾದ ಖಾಸಿಂ ಕಾರ್ಯದರ್ಶಿ ಖಾದರ್ ಹಸೈನಾರ್ ಖಜಾಂಜಿ ಉಮ್ಮರ್ ಹಾಗೂ ಸಮಿತಿ ಸದಸ್ಯರಾದ ಹಂಸ, ಹಸೈನಾರ್, ಹಾರಿಸ್, ಇಬ್ರಾಹಿಂ ಹಾಗೂ ಸ್ಥಳೀಯ ಪಂಚಾಯಿತಿ ಸದಸ್ಯರಾದ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

ನಾಪೋಕ್ಲು: ಹಬ್ಬ ಹರಿದಿನಗಳ ಆಚರಣೆ ಮತ್ತಿತರ ಸಂದರ್ಭಗಳಲ್ಲಿ ಕೊರೊನಾ ಪಾಲನೆಯೊಂದಿಗೆ ದೇಶದ ಹಿತಕಾಯುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಸಮೀಪದ ಹಳೇ ತಾಲೂಕು ಮುಸ್ಲಿಂ ಜಮಾಅತ್‌ನ ಖತೀಬ ಶಬೀರ್ ಇಮಾಮಿ ಹೇಳಿದರು.

ಹಳೇ ತಾಲೂಕು ಜಮಾಅತ್‌ನ ಸಭಾಂಗಣದಲ್ಲಿ ಈದ್-ಮಿಲಾದ್ ಪ್ರಯುಕ್ತ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಮಾತನಾಡಿದರು. ಮಹಮ್ಮದ್ ಪೈಗಂಬರ್ ಶಾಂತಿಯ ದೂತರಾಗಿದ್ದರು. ದ್ವೇಷದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪರಸ್ಪರ ಸ್ನೇಹ, ಸಾಮರಸ್ಯದೊಂದಿಗೆ ದೇಶದ ಪ್ರಗತಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎಸ್. ಮಹಮ್ಮದ್ ಅಲಿ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಸಾದಿಕ್ ಅಲಿ, ಎ.ಹೆಚ್. ಇಬ್ರಾಹಿಂ, ಎಂ.ಎಸ್. ಇಬ್ರಾಹಿಂ, ಎ.ಎ. ಅಬೂಬಕರ್ ಮತ್ತಿತರರು ಇದ್ದರು.

ನೆಲ್ಯಹುದಿಕೇರಿ

ಸಿದ್ದಾಪುರ: ನೆಲ್ಯಹುದಿಕೇರಿಯ ಮುಸ್ಲಿಂ ಜಮಾಅತ್ ಮಸೀದಿ ವತಿಯಿಂದ ಈದ್ ಮಿಲಾದ್ ಆಚರಣೆಯನ್ನು ಸ್ಥಳೀಯ ಶಾದಿ ಮಹಲ್ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ಬಳಿಕ ದಾರುಸ್ಸಲಾಂ ಮದ್ರಸ ಮಕ್ಕಳಿಂದ ಈದ್ ಮಿಲಾದ್ ಸಂಗಮ ಕಾರ್ಯಕ್ರಮವು ಬೆಳಗ್ಗಿನಿಂದ ಸಂಜೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು ಕಾರ್ಯಕ್ರಮದಲ್ಲಿ ಮಸೀದಿಯ ಆಡಳಿತ ಮಂಡಳಿಯವರು ಹಾಗೂ ಧಾರ್ಮಿಕ ಪಂಡಿತರು ಹಾಜರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಸುನ್ನಿ ಶಾಫಿ ಜುಮ್ಮಾ ಮಸೀದಿ ಹಾಗೂ ಈದ್ ಮಿಲಾದ್ ಆಚರಣಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಖದೀಜ ಉಮ್ಮ ಮದರಸದಲ್ಲಿ ಕೊವಿಡ್-೧೯ ನಿಯಮನುಸಾರವಾಗಿ ಆಚರಿಸಲಾಯಿತು.

ಖದೀಜ ಉಮ್ಮ ಮದರಸ್ ತಝ್ಕಿಯತ್ತು ತ್ತುಲಬ ದರ್ಸ್, ಎಸ್‌ಎಂಎಸ್ ಅರಬಿಕ್ ಕಾಲೇಜು ಹಾಗೂ ಹಿಫ್ಳುಲ್ ಖುರಾನ್ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳು ತಾ.೧೬ ಭಾನುವಾರ ರಾತ್ರಿಯಿಂದ ೧೮ರ ಮಂಗಳವಾರ ರಾತ್ರಿ ತನಕ ಮೂರು ದಿನಗಳ ಕಾಲ ಮದರಸ ಮುಂಭಾಗದಲ್ಲಿ ನಡೆಸಲಾಯಿತು.

ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನÀವನ್ನು ೫ ನೇ ತರಗತಿ ೭ ನೇ ತರಗತಿಯಲ್ಲಿ ಕಳೆದ ೨ ವರ್ಷಗಳಿಂದ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಮಾಜಿ ಶಾಸಕ ಕೆ .ಎಂ. ಇಬ್ರಾಹಿಂ ಹಾಜಿ ಅವರು ವಿತರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಿಲಾದ್ ಆಚರಣೆ ಸಮಿತಿ ಅಧ್ಯಕ್ಷರಾದ ಹಕೀಮ್ ರವರು ವಹಿಸಿದ್ದರು.

ಸಿಎಂ ಹಮೀದ್ ಮೌಲವಿ ಸಮಾರಂಭವನ್ನು ಉದ್ಘಾಟಿಸಿದರು. ಮಸೀದಿಯ ಧರ್ಮಗುರುಗಳಾದ ಉಸ್ಮಾನ್ ಫೈಝಿ, ಖತ್ತೀಬ್ ಹಸೈನಾರ್ ಫೈಝಿ, ಕಾಲೇಜು ಪ್ರಾಂಶುಪಾಲ ಜೈನುದ್ದೀನ್ ಫೈಝಿ, ಉಪನ್ಯಾಸಕರುಗಳಾದ ಜಂಶೀರ್ ವಾಪಿ, ಅಬ್ದುಲ್ ಬಾಸಿತ್ ಹುದವಿ, ಮದ್ರಸ ಅಧ್ಯಾಪಕರಾದ ಅಜೀಝ್ ಬಾಖವಿ ,ಮಜೀದ್ ಉಸ್ತಾದ್, ಮಸೀದಿಯ ಹಂಗಾಮಿ ಅಧ್ಯಕ್ಷ ರಫೀಕ್ ಹಾಜಿ, ನಿಕಟಪೂರ್ವ ಅಧ್ಯಕ್ಷ ಹಸನ್ ಕುಂಞÂ ಹಾಜಿ , ಪ್ರಧಾನ ಕಾರ್ಯದರ್ಶಿ ಸೂಫಿ, ಖಜಾಂಚಿ ಎಸ್.ಎಂ. ಮೊಹಮ್ಮದ್ ,ಮಿಲಾದ್ ಆಚರಣಾ ಸಮಿತಿ ಗೌರವಾಧ್ಯಕ್ಷ ಲತೀಫ್ ಹಾಜಿ, ಇಲ್ಲಿಯಾಸ್ ಪನ್ಯ, ಕಾರ್ಯದರ್ಶಿ ಜುಬೈರ್ ,ಖಜಾಂಚಿ ಅಣ್ಣ ಶರೀಫ್, ಮಸೀದಿ ಸದಸ್ಯರಾದ ಕೆ.ಎ. ಉಸ್ಮಾನ್ ,ಕೆಎಂ ಹನೀಫ,ಟಿಎಚ್ ಅಬ್ದುಲ್‌ರೆಹಮಾನ್ ,ಇಬ್ರಾಹಿಂ ಗ್ರಾಮ ಪಂಚಾಯಿತಿ ಸದಸ್ಯರಾದ ಜಿನಾ ಸುದ್ದೀನ್, ಆಲಿಕುಟ್ಟಿ ಉಪಸ್ಥಿತರಿದ್ದರು.

ಸುನ್ನಿ ಶಾಫಿ ಮಸೀದಿಗೆ ಅಗತ್ಯ ಸಹಕಾರ ನೀಡುತ್ತಿರುವ ಉಸ್ಮಾನ್ ಫೈಝಿ ಹಾಗೂ ನಿಕಟಪೂರ್ವ ಅಧ್ಯಕ್ಷ ಹಸನ್ ಕುಂಞÂಹಾಜಿ, ಮಿಲಾದ್ ಆಚರಣೆ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಜಿನಾಸ್, ಸುನ್ನಿ ಶಾಫಿ ಮಸೀದಿ ಖದೀಜ ಉಮ್ಮ ಮದರಸ ಎಸ್‌ಎಂಎಸ್ ಅರಬಿಕ್ ಕಾಲೇಜು ಮುಖ್ಯಸ್ಥ ಕೆ.ಯಂ. ಇಬ್ರಾಹಿಂ ಹಾಜಿಯವರನ್ನು ಸನ್ಮಾನಿಸಲಾಯಿತು. ಕೂಡಿಗೆ: ಕೂಡಿಗೆ ಮೈದಿನ್ ಜಮಾ ಮಸೀದಿ ವತಿಯಿಂದ ಈದ್ ಮಿಲಾದ್ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕುರಾನ್ ಪಠಣ ಕಾರ್ಯಕ್ರಮ ನಡೆಯಿತು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಟಿ.ಪಿ. ಹಮೀದ್‌ಆಲಿ, ಕಾರ್ಯದರ್ಶಿ ಕೆ.ಹೆಚ್. ನೌಫಲ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ ಪಿ ಹಮೀದ್ ಸೇರಿದಂತೆ ಸಮಿತಿಯ ಸದಸ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಗುಂಡಿಕೆರೆ : ಗುಂಡಿಕೆರೆಯಲ್ಲಿ ಈದ್‌ಮಿಲಾದ್ ಅನ್ನು ಆಚರಿಸಲಾಯಿತು. ನಿನ್ನೆ ರಾತ್ರಿ ಮೌಲಿದ್ ಪಾರಾಯಣದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗುಂಡಿಕೆರೆ ಖತೀಬರಾದ ಲತೀಪಿ ಉಸ್ತಾದರ ನಸೀಹತ್ ಹಾಗೂ ಪ್ರಾರ್ಥನೆ ನಡೆಯಿತು. ಮೌಲಿದ್ ಪಾರಾಯಣದ ನೇತೃತ್ವದನ್ನು ಸದರ್ ಮುಹಲ್ಲಿಂ ಸಯ್ಯದ್ ಖಾತಿಂ ಸಖಾಫಿಯವರು ವಹಿಸಿದ್ದರು.

ಇಂದು ಜಮಾಅತ್‌ನ ಅಧ್ಯಕ್ಷ ಮುಹಮ್ಮದ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಕ್ಕಳಿಗಾಗಿ ಮದ್ಹ್ ಹಾಡುಗಳು ಹಾಗೂ ರಸೂಲರ ಕುರಿತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಉಪಾಧ್ಯಕ್ಷರಾದ ಎಂವೈ ಆಲಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಖಜಾಂಜಿಯಾದ ಅಲೀ ಮುಸ್ಲಿಯಾರ್ ಹಾಗೂ ಆಡಳಿತ ಮಂಡಳಿ ಸದಸ್ಯರುಗಳು ಇನ್ನಿತರರು ಭಾಗವಹಿಸಿದ್ದರು.ಕುಶಾಲನಗರ: ಇಸ್ಲಾಂ ಧರ್ಮವು ಶಾಂತಿ, ಸಮಾನತೆ, ಸೌಹಾರ್ದತೆ ಯನ್ನು ಸಾರುವ ಧರ್ಮವಾಗಿದ್ದು, ಇದನ್ನು ಮೈಗೂಡಿಸಿಕೊಳ್ಳಬೇಕು ಎಂದು ಕುಶಾಲನಗರ ದಾರುಲ್ ಉಲೂಂ ಮದ್ರಸ ಹಾಗೂ ಪಾಳಿಲಾ ಶರೀಅತ್ ಕಾಲೇಜಿನ ಪ್ರಾಂಶುಪಾಲ ಎಂ.ತಮ್ಲೀಕ್ ದಾರಿಮಿ ಅಭಿಪ್ರಾಯಪಟ್ಟರು.

ಪ್ರವಾದಿ ಪೈಗಂಬರ್ ಅವರ ಜನ್ಮ ದಿನದ ಅಂಗವಾಗಿ ಕುಶಾಲನಗರದ ಶಾದಿ ಮಹಲ್‌ನಲ್ಲಿ ಏರ್ಪಡಿಸಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರವಾದಿಯವರು ಎಲ್ಲರನ್ನೂ ಪ್ರೀತಿಸುವ ಮತ್ತು ಶಾಂತಿ ಸಹಬಾಳ್ವೆಯಿಂದ ಜೀವಿಸುವ ಸಂದೇಶ ನೀಡಿದ್ದಾರೆ. ಅನ್ಯರಿಗೆ ತೊಂದರೆ ನೀಡುವವನು ನೈಜ ಮುಸಲ್ಮಾನನಲ್ಲಾ ಎಂದು ಸಾರುವ ಇಸ್ಲಾಂ ಧರ್ಮ, ದುಷ್ಕೃತ್ಯಗಳನ್ನು ವಿರೋಧಿಸುತ್ತದೆ ಎಂದರು.

ವಕ್ಫ್ ಬೋರ್ಡ್ ಅಧ್ಯಕ್ಷ ಯಾಕೂಬ್ ಮಾತನಾಡಿ, ಪೈಗಂಬರ್ ಅವರು ಸರ್ವ ಧರ್ಮೀಯವರನ್ನು ಪ್ರೀತಿಸಬೇಕು ಎಂಬ ಸಂದೇಶವನ್ನು ಸಾರಿದ ವಿಶ್ವ ಪ್ರವಾದಿಯಾಗಿದ್ದಾರೆ ಎಂದರು. ಹಿರಿಯ ಅಧಿಕಾರಿ ಶಂಶುದ್ದೀನ್ ನಿವೃತ್ರ ಶಿಕ್ಷಕರಾದ ನಜೀರ್ ಮಾಸ್ಟರ್ ಮಾತನಾಡಿದರು. ಕಾರ್ಯಕ್ರಮವನ್ನು ದಾರುಲ್ ಉಲೂಂ ಮದ್ರಸ ಧರ್ಮಗುರುಗಳಾದ ಸೂಫಿ ದಾರಿಮಿ ಉದ್ಘಾಟಿಸಿದರು. ಕಮಿಟಿ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ

ಇಕ್ಬಾಲ್ ಮುಸ್ಲಿಯಾರ್, ಮಾಜಿ ಕಮಿಟಿ ಅಧ್ಯಕ್ಷ ಸಲೀಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕರಾದ ಉನೈಸ್ ಫೈಜಿ಼ಯವರು ಪ್ರಾರ್ಥನೆ, ಹಿಲಾಲ್ ಮಸೀದಿ ಕಾರ್ಯದರ್ಶಿ ಅಬ್ದುಲ್ ಮಜೀದ್ ಅವರು ಸ್ವಾಗತಿಸಿದರು. ಇಬ್ರಾಹೀಂ ಬಾದುಷಾ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಅನ್ನ ಸಂತರ್ಪಣೆ ಯನ್ನು ಏರ್ಪಡಿಸಲಾಯಿತು. ಈ ಸಂದರ್ಭ ಪ್ರಮುಖರಾದ ಬಿ.ಹೆಚ್.ಅಹಮದ್, ಎಂ.ಇ. ಮುಸ್ತಫಾ, ಬಿ.ಎಸ್.ಬಾಬ, ಅಬ್ದುಲ್ ಲತೀಫ್, ಫಾರೂಕ್ ಹಾಗೂ ದಾರುಲ್ ಉಲೂಂ ಮದ್ರಸದ ಅಧ್ಯಾಪಕರು ಇದ್ದರು. *ವೀರಾಜಪೇಟೆ: ಮಂಗಳವಾರ ವೀರಾಜಪೇಟೆಯ ಎಲ್ಲಾ ಮಸೀದಿಗಳಲ್ಲಿ ಈದ್‌ಮಿಲಾದ್ ಆಚರಣೆಯನ್ನು ಮಾಡಲಾಯಿತು. ಬೆಳ್ಳಗ್ಗಿನ ಜಾವ ವೀರಾಜಪೇಟೆಯ ಮಸೀದಿಗಳಲ್ಲಿ ಪ್ರವಾದಿ ಮುಹಮ್ಮದ ರನ್ನು ಸ್ಮರಣೆ ಮಾಡಲಾಯಿತು.

ವೀರಾಜಪೇಟೆ ಶಾಫಿ ಮುಸಲ್ಮಾನ್ ಬಾಂಧವರು ಈದ್ ಮಿಲಾದ್ ಆಚರಣೆಯನ್ನು ವೀರಾಜಪೇಟೆಯ ಗೌರಿಕೆರೆ ಸಮೀಪದ ನುಸ್ರತುಲ್ ಉಲ್ಮಾ ಮದರಸದ ಆವರಣದಲ್ಲಿ ಸಾಂಪ್ರದಾಯಿಕವಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊಂದಿಗೆ ಸರಳವಾಗಿ ಆಚರಿಸಿದರು.

ಕಾರ್ಯಕ್ರಮದಲ್ಲಿ ವೀರಾಜಪೇಟೆಯ ಶಾಫೀ ಮುಸ್ಲಿಂ ಜಮಾಅತ್ ಅಧ್ಯಕ್ಷ ಟಿ.ಹೆಚ್. ಅಬ್ದುಲ್ ರಝಾಕ್ ಧ್ವಜಾರೋಹಣವನ್ನು ನೆರವೇರಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ನಡೆದ ವಿಶೇಷ ಪ್ರಾರ್ಥನೆಯ ನೇತೃತ್ವವನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಧರ್ಮಗುರು ಗಳಾದ ರಾಹೂಫ್ ಹುದವಿ ಅಬೂಬಕರ್ ಉಸ್ತಾದ್, ವೀರಾಜಪೇಟೆ ಸಾದಲಿ ಶಾಫಿ ಮಸೀದಿಯ ಉಪಾಧ್ಯಕ್ಷ ಕೆ.ಹೆಚ್. ಮೊಹಮ್ಮದ್ ರಾಫಿ, ಅಬ್ದುಲ್ಲಾ ಉಸ್ತಾದ್ ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಿದ್ದರು.

ವೀರಾಜಪೇಟೆಯ ಎಲ್ಲಾ ಮಸೀದಿಗಳಲ್ಲಿ ಏಕಪಕ್ಷೀಯ ತೀರ್ಮಾನ ಕೈಗೊಂಡು ಈದ್ ಮೆರವಣಿಗೆ, ಮದರಸಾದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಖಬರಸ್ಥಾನಕ್ಕೆ ಹೋಗುವ ಆಚರಣೆಗಳನ್ನು ತಾ. ೩೧ ರÀಂದು ಆಚರಿಸಲು ತೀರ್ಮಾನಿಸಲಾಗಿದೆ ಎಂದು ಧರ್ಮಗುರುಗಳು ತಿಳಿಸಿದ್ದಾರೆ.