ಮಡಿಕೇರಿ, ಅ. ೧೯: ನಗರದ ರೇಸ್ ಕೋರ್ಸ್ ರಸ್ತೆ ಸಮೀಪದ ಹಾಕಿ ಟರ್ಫ್ ಮೈದಾನದ ಎದುರಿನ ಚರಂಡಿಯೊಳಗೆ ಬಿದ್ದಿದ್ದ ಕರುವನ್ನು ರಕ್ಷಣೆ ಮಾಡಲಾಯಿತು. ಇಂದು ಬೆಳಿಗ್ಗೆ ಪತ್ರಕರ್ತೆ ಪ್ರಜ್ಞಾ ರಾಜೇಂದ್ರ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳುತ್ತಿದ್ದ ಸಂದರ್ಭ ಕರುವೊಂದು ಕಿರುಚುತ್ತಿದ್ದದ್ದನ್ನು ಗಮನಿಸಿದ್ದಾರೆ. ನೋಡಿದಾಗ ಚರಂಡಿಯೊಳಗಿನಿAದ ಹೊರಗೆ ಬರಲು ಕರು ಪರದಾಡುತಿತ್ತು. ತಕ್ಷಣವೇ ನಗರಸಭಾ ವಾರ್ಡ್ ಸದಸ್ಯ ಅರುಣ್ ಶೆಟ್ಟಿ ಅವರ ಗಮನಕ್ಕೆ ತಂದಿದ್ದಾರೆ.
ನಗರಸಭೆಯ ಪೌರಕಾರ್ಮಿಕರಾದ ಈರಪ್ಪ ಶೆಟ್ಟಿ, ಹನುಮಂತ, ರಂಗಪ್ಪ ಸೇರಿದಂತೆ ವಾರ್ಡ್ ಸದಸ್ಯ ಅರುಣ್ ಶೆಟ್ಟಿ, ಸ್ಥಳೀಯರಾದ ಅಚ್ಚಯ್ಯ, ಆನಂದ್, ದಿವಾಕರ್ ಜಾಕಿ ಅವರುಗಳ ಸಹಕಾರದಿಂದ ಕರುವನ್ನು ರಕ್ಷಣೆ ಮಾಡಲಾಯಿತು.