ಕೂಡಿಗೆ. ಅ. ೧೯: ಹುದುಗೂರು ಮೀಸಲು ಅರಣ್ಯ ಪ್ರದೇಶ ಮತ್ತು ಹಾರಂಗಿ ಹಿನ್ನೀರಿನ ಕಾಡಿನಂಚಿನ ಪ್ರದೇಶದಲ್ಲಿರುವ ಕಾಡಾನೆಗಳು ಯಡವನಾಡು ವ್ಯಾಪ್ತಿಯಲ್ಲಿ ರೈತರ ಜಮೀನಿಗೆ ದಾಳಿ ಮಾಡಿ ಭತ್ತದ ಬೆಳೆಯನ್ನು ತಿಂದು ತುಳಿದು ನಷ್ಟಪಡಿಸಿರುವ ಘಟನೆ ನಡೆದಿದೆ.
ಯಡವನಾಡು ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕಳೆದ ರಾತ್ರಿ ಯಡವನಾಡು ಗ್ರಾಮದ ಚಂದ್ರಶೇಖರ್ ಎಂಬವರಿಗೆ ಸೇರಿದ ನಾಟಿ ಮಾಡಿದ ಭತ್ತ ಗದ್ದೆ ಸೇರಿದಂತೆ ಕಾಫಿ ಗಿಡಗಳನ್ನು ತುಳಿದು ನಷ್ಟಪಡಿ ಸಿವೆ. ಸಂಬAಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರಿಹಾರವನ್ನು ಒದಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.