ಮಡಿಕೇರಿ, ಅ. ೨೦: ತಾ.೨೩ ರಂದು ತಲಕಾವೇರಿಯಿಂದ ಮೈಸೂರಿನವರೆಗೆ ರಾಜ್ಯ ಒಕ್ಕಲಿಗರ ಸಂಘದ ಜನ ಜಾಗೃತಿ ರಥಯಾತ್ರೆ ನಡೆಯಲಿದೆ. ಅಂದು ಬೆಳಿಗ್ಗೆ ೮:೩೦ ಕ್ಕೆ ತಲಕಾವೇರಿಯಿಂದ ಹೊರಡಲಿರುವ ರಥಯಾತ್ರೆ ಭಾಗಮಂಡಲ ಮೂಲಕ ಮಡಿಕೇರಿಗೆ ಆಗಮಿಸಳಲಿದ್ದು, ೯:೩೦ ಕ್ಕೆ ಮಡಿಕೇರಿಯ ಗುಡ್ಡೆಮನೆ ಅಪ್ಪಯ್ಯ ಗೌಡ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪತ್ಥಳಿಗೆ ಸಮುದಾಯದ ಕೊಡಗಿನ ಗಣ್ಯರ ಸಮ್ಮುಖದಲ್ಲಿ ಮಾಲಾರ್ಪಣೆ ನಡೆಯಲಿದೆ. ನಂತರ ಕುಶಾಲನಗರದ ಮೂಲಕ ಮೈಸೂರಿಗೆ ತೆರಳಲಿದೆ ಎಂದು ಪ್ರಕಟಣೆ ತಿಳಿಸಿದೆ.