ಸುಂಟಿಕೊಪ್ಪ, ಅ.೨೦: ಗೋಣಿಕೊಪ್ಪ ಲಯನ್ಸ್ ಸಂಸ್ಥೆ ವತಿಯಿಂದÀ ಲಯನ್ಸ್ ಅಂತರ ರಾಷ್ಟಿçÃಯ ಅಧ್ಯಕ್ಷರ ಹುಟ್ಟುಹಬ್ಬದ ಪ್ರಯುಕ್ತ ‘ಹಸಿದವರಿಗೆ ಊಟ’ ಎಂಬ ಧ್ಯೇಯದಿಂದ ಇಲ್ಲಿನ ಗದ್ದೆಹಳ್ಳದ ವಿಕಾಸ್ ಜನಸೇವಾ ಟ್ರಸ್ಟ್ ಜೀವನದಾರಿ ಆಶ್ರಮಕ್ಕೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಜೊತೆಗೆ ಆಶ್ರಮದ ನಿವಾಸಿಗಳಿಗೆ ಮನರಂಜನೆಗಾಗಿ ಟಿ.ವಿ. ನೀಡಲಾಯಿತು. ದೇಹದಲ್ಲಿನ ಸಕ್ಕರೆ ಅಂಶ ತಿಳಿಯುವ ಸಲುವಾಗಿ ಗ್ಲೂಕೋಮೀಟರ್ ಅನ್ನು ಕೂಡ ಈ ಸಂದರ್ಭ ದಾನ ಮಾಡಲಾಯಿತು. ಈ ಸಂದರ್ಭ ಗೋಣಿಕೊಪ್ಪ ಲಯನ್ಸ್ ಸಂಸ್ಥೆ ಅಧ್ಯಕ್ಷ ಪಾರುವಂಗಡ ಜೀವನ್ ಮಾತನಾಡಿ ಸರಕಾರದ ಯಾವುದೇ ನೆರವು ಇಲ್ಲದೆ ಸೇವಾ ಮನೋಭಾವನೆಯಿಂದ ದಾನಿಗಳ ನೆರವಿನೊಂದಿಗೆ ನಿರ್ಗತಿಕರಿಗೆ ಉಚಿತವಾಗಿ ಆಶ್ರಯ ಕಲ್ಪಿಸಿ ಅನ್ನ ನೀಡುತ್ತಿರುವ ಟ್ರಸ್ಟ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಮನ್ನಕ ಮನೆ ಬಾಲಕೃಷ್ಣ, ಖಜಾಂಚಿ ಚೆಪ್ಪುಡಿರ ಬೋಪಣ್ಣ, ಆಶ್ರಮದ ಅಧ್ಯಕ್ಷ ರಮೇಶ್, ಪತ್ನಿ ರೂಪಾ ರಮೇಶ್, ಮಕ್ಕಳಾದ ಅಮೃತಾ, ಸಿಂಚನಾ, ಐಶ್ವರ್ಯ ಹಾಗೂ ಆಶ್ರÀ್ರಮ ನಿವಾಸಿಗಳು ಹಾಜರಿದ್ದರು.